ಮಂಗನಖಾಯಿಲೆ ತಡೆಗಟ್ಟುವ ಸಲುವಾಗಿ ಅಧಿಕಾರಿಗಳ ಸಭೆ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದ ಕುಳಿಬೀಡನ 51 ವರ್ಷದ ಮಹಿಳೆಗೆ ಮಂಗನಖಾಯಿಲೆ ಇರುವುದು ಖಚಿತವಾಗುತ್ತಿದ್ದಂತೆ ಸ್ಥಳೀಯ ಆಡಳಿತ ಸೋಮವಾರ ತಹಸೀಲ್ದಾರ ಪ್ರಸಾದ ಎಸ್.ಎ. ಅಧ್ಯಕ್ಷತೆಯಲ್ಲಿ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ಸಭೆ ನಡೆಯಿತು.
ತಹಸೀಲ್ದಾರ ಪ್ರಸಾದ ಎಸ್.ಎ. ಮಾತನಾಡಿ, ಕಳೆದ 15 ದಿನದಿಂದ ಕುಳಿಬೀಡು ಭಾಗದಲ್ಲಿ ನಾಲ್ಕು ಮಂಗಗಳು ಸತ್ತಿವೆ ಅಲ್ಲಿ ಒಟ್ಟೂ 32 ಮನೆಗಳಿದ್ದು 150 ಜನಸಂಖ್ಯೆ ಇದೆ ಈಗಾಗಲೆ ಅಲ್ಲಿ ಒಂದು ಬಾರಿ ಲಸಿಕೆ ನೀಡಲಾಗಿದೆ ಎಂಬ ಮಾಹಿತಿ ಬಂದಿದೆ ಎರಡನೇ ಡೋಸ್ ಹಾಗೂ ಬೂಸ್ಟರ್ ಡೋಸ್ ತೆಗೆದುಕೊಲ್ಳುವಂತೆ ಜನರ ಮನೊಲಿಸಲಾಗುತ್ತಿದೆ ಅಲ್ಲದೆ ಶಂಕಿತ ಮಂಗನಖಾಯಿಲೆ ಪ್ರದೇಶದಲ್ಲಿ ಜನರನ್ನು ಜಾಗೃತಗೊಳಿಸುವ ಕೆಲಸ ಮಾಡುತ್ತೇವೆ ಅಭಿವೃದ್ಧಿ ಅಧಿಕಾರಿಗಳು ಉಣ್ಣೆನಾಶ ಮಾಡುವುದರ ಜೊತೆಗೆ ವ್ಯಾಪಕ ಪ್ರಚಾರವನ್ನು ಮಾಡಬೇಕು ಮೈಕ್ ಮೂಲಕ ಪ್ರಚಾರ ಮಾಡುವುದರ ಜೊತೆಗೆ ಜಾಥಾಗಳನ್ನು ನಡೆಸ ಬೇಕು ಈ ಬಗ್ಗೆ ಸೂಕ್ತ ಕ್ರಮ ತಗೆದು ಕೊಳ್ಳಲಾಗುವುದು ಎಂದು ಹೇಳಿದರು.

ಕೆಎಪ್‍ಡಿ ವೈದ್ಯ ಡಾ.ಸತೀಶ ಶೇಟ್ ಮಾತನಾಡಿ, ಕಳೆದ ಮೂರು ವರ್ಷದಿಂದ ತಾಲೂಕಿನಲ್ಲಿ ಮಂಗನಖಾಯಿಲೆ ಕಾಣಿಸಿಕೊಳ್ಳುತ್ತಿದ್ದು ಇದನ್ನು ತಡೆಯುವದಕ್ಕೆ ವ್ಯಾಪಕ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ ಹೀಗಾಗಿ ಸಾವಿನ ಪ್ರಮಾಣವನ್ನು ಕಡಿಮೆ ಮಾಡಲಾಗಿದೆ ಆದರೆ ಜನರು ಲಸಿಕೆ ತೆಗೆದುಕೊಳ್ಳಲು ಹಿಂಜರಿಯುತ್ತ ಇರುವುದರಿಂದ ಖಾಯಿಲೆ ಪ್ರಸಾರವಾಗುತ್ತಿದೆ ಜನರು ಲಸಿಕೆ ಪಡೆಯುವಂತೆ ಮನ ಒಲಿಸುವ ಕೆಲಸವಾಗಬೇಕು. ಹೊಸ ಮಾರ್ಗಸೂಚಿ ಬಂದಿದೆ,ಗ್ರಾಪಂ ಮಟ್ಟದಲ್ಲಿ ಸಮಿತಿಯನ್ನು ರಚಿಸಲಾಗಿದೆ ಇದೆಲ್ಲದರ ಮೂಲಕ ಎಲ್ಲಾ ಇಲಾಖೆಯವರ ಸಮನ್ವಯತೆಯಿಂದ ಮಂಗನಖಾಯಿಲೆ ಹರಡದಂತೆ ತಡೆಯಬೇಕಾಗಿದೆ. ಎಂದು ಹೇಳಿದರು.
ತಾಪಂ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ ಮಾತನಾಡಿ,ನಮ್ಮ ಗ್ರಾಪಂ ಅಭಿವೃದ್ದಿ ಅಧಿಕಾರಿಗಳೂ ಸೇರಿದಂತೆ ಎಲ್ಲಾಸಿಬ್ಬಂದಿಗಳು ಮಂಗನಖಾಯಿಲೆ ತಡೆಗಟ್ಟುವಲ್ಲಿ ಸಕ್ರೀಯವಾಗಿ ಕಾರ್ಯನಿರ್ವಹಿಸಿದ್ದಾರೆ ಈ ಬಾರಿಯೂ ಅವರೆಲ್ಲರೂ ಈ ಖಾಯಿಲೆಯ ನಿಯಂತ್ರಣಕ್ಕೆ ಕೈಜೋಡಿಸಲಿದ್ದಾರೆ ಎಂದು ಹೇಳಿದರು.
ತಾಲೂಕು ವೈದ್ಯಾಧಿಕಾರಿ ಡಾ.ಲಕ್ಷ್ಮೀಕಾಂತ ನಾಯ್ಕ ಉಪಸ್ಥಿತರಿದ್ದರು.
#####
ಭಟ್ಕಳದಲ್ಲಿ 100 ಕೆ.ಜಿ.ಗೂ ಹೆಚ್ಚು ಕಾಡುಕೋಣನ ಮಾಂಸ ವಶ.
############
ಆದ್ಯೋತ್ ಸುದ್ದಿನಿಧಿ
ಉತ್ತರಕನ್ನಡ ಜಿಲ್ಲೆಯ ಭಟ್ಕಳ ಪಟ್ಟಣದ ಮೊಹಿದ್ದೀನ್ ಸ್ಟ್ರೀಟ್ ಎರಡನೆ ಕ್ರಾಸನಲ್ಲಿ 100 ಕೆ.ಜಿ.ಗೂ ಹೆಚ್ಚು ಕಾಡುಕೋಣದ ಮಾಂಸವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಖಚಿತ ಮಾಹಿತಿಯ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿ ಆರ್ ಎಪ್ ಓ ಸುನೀತಾ ದೇವಾಡಿಗ ಹಾಗೂ ಸಿಬ್ಬಂದಿಯವರು ಕಾಡು ಕೋಣದ ಮಾಂಸವನ್ನು ತುಂಬಿದ ವಾಹನ ಸಂಖ್ಯೆ MH-04/EX-2229 ಚವರ್ಲೆಟ್ ಕಾರನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳು ವಾಹನವನ್ನು ಬಿಟ್ಟು ಪರಾರಿಯಾಗಿದ್ದು ಮಾಂಸ ಹೊರತುಪಡಿಸಿ ಸುಮಾರು 300 ಕೆ.ಜಿ.ಯಷ್ಟು ಕಾಡುಕೋಣದ ಇತರ ಅವಯವಗಳು ಕಾರಿನಲ್ಲಿ ದೊರೆತಿವೆ.
ಅರಣ್ಯ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.

About the author

Adyot

Leave a Comment