ಆದ್ಯೋತ್ ಸಿನೇಮಾ ಸುದ್ದಿ
ಗಂಗಾ ಗುರು ಕಂಬೈನ್ಸ್ ಕೆ.ವಾಸುದೇವ್ ಅರ್ಪಿಸುವ ಭೀಮರೆಡ್ಡಿ ನಿರ್ಮಾಣದ ’ಪೆದ್ದು ನಾರಾಯಣ’ ಕನ್ನಡ ಚಲನಚಿತ್ರದ ಶೀರ್ಷಿಕೆ ಅನಾವರಣವನ್ನು ಬೆಂಗಳೂರಿನಲ್ಲಿ ಖ್ಯಾತ ಚಲನಚಿತ್ರ ಸಾಹಿತಿ ಡಾ.ವಿ.ನಾಗೇಂದ್ರ ಪ್ರಸಾದ ಮಾಡಿ ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು.
ಚಿತ್ರೀಕರಣ ಚಿಕ್ಕಮಗಳೂರು,ಹಾಸನ, ಗೋಕಾಕ, ಇಲಕಲ್, ಧಾರವಾಡ, ದಾಂಡೇಲಿ, ರಾಜಸ್ಥಾನ ಸುತ್ತಮುತ್ತ ಒಟ್ಟು 55 ದಿನಗಳ ಕಾಲ ನಡೆಯಲಿದ್ದು ಮುಂದಿನ ತಿಂಗಳಲ್ಲಿ ಚಿತ್ರೀಕರಣ ಆರಂಭಿಸಲಾಗುತ್ತದೆ ಎಂದು ನಿರ್ಮಾಪಕ ಭೀಮರೆಡ್ಡಿ ತಿಳಿಸಿದ್ದಾರೆ.
ಊರಲ್ಲಿ ಜನರ ಕಣ್ಣಿಗೆ ತುಂಬಾ ಪೆದ್ದನ ಹಾಗೆ ಕಾಣುವ ನಾಯಕ ನಿಜಕ್ಕೂ ಬುದ್ದಿವಂತ. ಅದನ್ನೇ ಚಿತ್ರದಲ್ಲಿ ಸಾಬೀತು ಮಾಡಲಾಗುವ ರೀತಿ ಭಿನ್ನವಾಗಿದ್ದು ತೆರೆಯ ಮೇಲೆಯೇ ಪ್ರೇಕ್ಷಕರು ನೋಡಿ ಎಂಜಾಯ್ ಮಾಡಬೇಕು ಎಂದು ಹಲವಾರು ಚಲನಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ ಪಕ್ಕಾ ಉತ್ತರ ಕರ್ನಾಟಕ ಹುಬ್ಬಳ್ಳಿ ಹುಡುಗ ಯುವ ನಿರ್ದೇಶಕ ರಘು ತಿಳಿಸಿದ್ದಾರೆ.
ಚಿತ್ರದಲ್ಲಿ ನಾಯಕ ನಟ ರತ್ನಾಕರ,ನಾಯಕಿ ನಟಿ ಸೋನು,ಆರ್. ಅಶೋಕ,ಜೈಜಗದೀಶ, ಶೋಭರಾಜ್, ಸುನಂದ ಶರಣಪ್ಪ, ವೀಣಾ ಸುಂದರ್, ಸಂತೋಷ, ಮೊದಲಾದವರಿದ್ದಾರೆ.
ಛಾಯಾಗ್ರಹಣದ ಜೊತೆ ಚಿತ್ರದ ನಿರ್ದೇಶನವನ್ನು ರಘು ರೂಗಿ, ಸಾಹಿತ್ಯ ಡಾ.ವಿ.ನಾಗೇಂದ್ರ ಪ್ರಸಾದ, ಕಿನ್ನಾಳರಾಜ್,ಕೆ.ಜಿ.ಸ್ವಾಮಿ ಭರತ್, ಶ್ರೀಶಸ್ತ(ಚೆನೈ) ಸಂಗೀತ, ಡಿಟಿಎಸ್ ಬಸವರಾಜ್ ನಂದಗಡ(ಮುಂಬೈ), ಸಂಕಲನ ಎನ್.ಎಮ್.ವಿಶ್ವ, ನೃತ್ಯ ರಾಘವ್ ಬೇನಾಳ, ಕಲಾನಿರ್ದೇಶನ ವೀರೇಶ್ ಪುರವಂತರ, ಪೋಸ್ಟರ್ ಡಿಸೈನ್ ಗುರು ಯಲ್ಲಾಪೂರ,ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಗಿ,ಸಾಹಸ ಜಾಗ್ವಾರ ಸಣ್ಣಪ್ಪ, ನಿಮಾಣ ನಿರ್ವಹಣೆ ಶಿವಕುಮಾರ,ಕಥೆ, ಚಿತ್ರಕಥೆ,ಸಹ ನಿರ್ದೇಶನವನ್ನು ಪ್ರದೀಪ ಕುಮಾರ್, ಯುವಶ್ರೀ ಆರ್ ಮಾಡಿದ್ದಾರೆ . ಭೀಮರೆಡ್ಡಿ ಚಿತ್ರದ ನಿರ್ಮಾಪಕರಾಗಿದ್ದಾರೆ.
####