ಶಿವಮೊಗ್ಗದಲ್ಲಿ ಕಳೆದ ನಾಲ್ಕು ದಿನದಿಂದ ಸುರಿಯುತ್ತಿರುವ ಮಳೆ ಹಿಲ್ಲೆಯಲ್ಲಿ ಅವಾಂತರ ಸೃಷ್ಟಿ ಮಾಡಿದೆ. ನಿನ್ನೆ ರಾತ್ರಿಯಿಡೀ ಸುರಿದ ಮಳೆಯಿಂದಾಗಿ
ಶಿವಮೊಗ್ಗದ ಹಳೆಮಂಡ್ಲಿಯ ಅಂಬೇಡ್ಕರ್ ನಗರದ ಹತ್ತಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ.
ಮಳೆಯ ಆರ್ಭಟದಿಂದಾಗಿ ಶಿವಮೊಗ್ಗ ತೀರ್ಥಹಳ್ಳಿ ಮಾರ್ಗದ ರಸ್ತೆಯ ಮೇಲೆ ರಾಜಾ ಕಾಲುವೆ ನೀರು ಹರಿಯುತಿದ್ದು ಜನರು ತೊಂದರೆ ಅನುಭವಿಸುವಂತಾಗಿದೆ.
ಸ್ಥಳಕ್ಕೆ ಮಹಾನಗರ ಪಾಲಿಕೆ ಉಪಮೇಯರ್ ಹಾಗು ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು
ಇಲ್ಲಿನ ತಗ್ಗು ಪ್ರದೇಶದಲ್ಲಿನ ನೀರನ್ನು ಮಹಾನಗರ ಪಾಲಿಕೆ ಸಿಬ್ಬಂದಿಗಳು ತೆರವು ಗೊಳಿಸುತಿದ್ದಾರೆ.
ಇನ್ನು ಹೊಸನಗರ ಭಾಗದಲ್ಲಿ ಸಹ ಮಳೆಯ ಆರ್ಭಟ ಸಂಜೆ ವೇಳೆ ಹೆಚ್ಚಾಗಿದ್ದು ಇಲ್ಲಿನ ಮಾರುತಿ ಪುರದ ಗದ್ದೆಗಳು ಕೊಚ್ಚಿ ಹೋಗಿವೆ.