ಕಾರವಾರ:- ಪುಟ್ ಪಾತ್ ಮೇಲಿರುವ ಬಟ್ಟೆ ಅಂಗಡಿಗೆ ಟಿಪ್ಪರ್ ಢಿಕ್ಕಿ ಹೊಡೆದ ಪರಿಣಾಮ ಅಂಗಡಿಯಲ್ಲಿ ಮಲಗಿದ್ದ ವ್ಯಾಪಾರಿ ಧಾರುಣ ಸಾವು ಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯಹೊನ್ನಾವರ ರಾ. ಹೆದ್ದಾರಿ 66ರಲ್ಲಿ ನಡೆದಿದೆ.
ಬೆಳಗಿನ ಜಾವ ನಡೆದಿರುವ ಘಟನೆ ಇದಾಗಿದ್ದು ಅಬ್ದುಲ್ ರಜಾಕ್ (21)ಮೃತ ದುರ್ದೈವಿಯಾಗಿದ್ದು ಮೃತನು ಉತ್ತರಪ್ರದೇಶ ಮೂಲದ ನಿವಾಸಿಯಾಗಿದ್ದಾನೆ. ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.