ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ಆರೋಗ್ಯಸಚೀವ ಡಾ.ಸುಧಾಕರ ಮೂರನೇ ಹಂತದ ಕೊವಿಡ್ ಲಸಿಕೆ ನೀಡಲು
ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ.ಸುಧಾಕರ,
ಇಂದು ನಮ್ಮ ಹೆಮ್ಮೆಯ ಪ್ರದಾನಮಂತ್ರಿಯವರು ದೆಹಲಿಯ ಏಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಕೊವಿಡ್ ಲಸಿಕೆ ಪಡೆಯುವ ಮೂಲಕ ದೇಶಕ್ಕೆ ಪ್ರೇರಣೆಯಾಗಿದ್ದಾರೆ.ರಾಜ್ಯದಲ್ಲೂ ಮೂರನೇ ಹಂತದ ಲಸಿಕೆ ನೀಡುವುದನ್ನು ಪ್ರಾರಂಭಿಸಲಾಗಿದೆ.
60 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ 45 ವರ್ಷ ಮೇಲ್ಪಟ್ಟ ರೋಗಪೀಡಿತರಿಗೆ ಮೂರನೇ ಹಂತದಲ್ಲಿ ಲಸಿಕೆ ನೀಡಲಾಗುತ್ತಿದೆ.ಇದಕ್ಕಾಗಿ 270 ಕ್ಕೂ ಹೆಚ್ಚು ಲಸಿಕಾ ಕೇಂದ್ರವನ್ನು ತೆರೆಯಲಾಗಿದೆ.50ಲಕ್ಷ ಜನರು ಹಿರಿಯ ನಾಗರೀಕರಿದ್ದು 16 ಲಕ್ಷ ಜನರು ಇತರ ರೋಗದ ಸಮಸ್ಯೆ ಇರುವವರು ಇದ್ದಾರೆ ಎಂದು ಹೇಳಿದರು
ಅನೇಕ ವರ್ಷಗಳಿಂದ ರಾಜ್ಯದಲ್ಲಿ ವೈಧ್ಯರ ಕೊರತೆ ಇದೆ.ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಇದೆ. ಬೆಟ್ಟಗುಡ್ಡಗಳಿಂದ ಕೂಡಿರುವ ಮಲೆನಾಡಿನ ಭಾಗಕ್ಕೆ ಬೀದರ ಭಾಗದ ಕಡೆಗೆ ವೈದ್ಯರು ಕೆಲಸ ಮಾಡಲು ಹೋಗುತ್ತಿಲ್ಲ. ಹೊಸದಾಗಿ 2180 ವೈದ್ಯರ ನೇರ ನೇಮಕ ಪ್ರಕ್ರಿಯೆ ನಡೆದಿದೆ. ಗ್ರಾಮೀಣ ಪ್ರದೇಶದಲ್ಲಿ ಕೆಲಸಮಾಡುವ ವೈಧ್ಯರಿಗೆ ವಿಶೇಷ ಭತ್ಯೆ, ಹಾಗೂ ಬೇಗ ಮುಂಬಡ್ತಿ ನೀಡುವ ಬಗ್ಗೆ ವಿಚಾರ ನಡೆದಿದೆ. ಆರೋಗ್ಯ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸಿರುವ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೆನೆ. ತಾಲೂಕ ಜಿಲ್ಲಾ ಆಸ್ಪತ್ರೆಯಲ್ಲಿ ಪೋಸ್ಟ್ ಗ್ರಾಜ್ಯುವೆಟ್ ಮಾಡಿದವರನ್ನು 1 ವರ್ಷದವರೆಗೆ ಬಳಸಿಕೊಳ್ಳುವ ಕೆಲಸ ನಡೆದಿದೆ. 1 ತಿಂಗಳಲ್ಲಿ ಶಿರಸಿಯಲ್ಲಿ 250 ಸಾಮರ್ಥ್ಯವಿರುವ ಆಸ್ಪತ್ರೆಯ ಶಂಕು ಸ್ಥಾಪನೆಯಾಗುತ್ತದೆ. ಎಂದು ಹೇಳಿದರು.
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ,
ಕೊವೀಡ್ ಎದುರಿಸಲು ರೋಗ ನಿರೋಧಕ ಶಕ್ತಿ ಹೆಚ್ಚಿಸಕೊಳ್ಳಬೇಕಿದೆ.ಕೊವೀಡ ನಿರ್ಮೂಲನಾ ಕಾರ್ಯದಲ್ಲಿ ಆಶಾಕಾರ್ಯಕರ್ತೆಯರು,ಆರೋಗ್ಯ ಕಾರ್ಯಕರ್ತೆಯರು ಹೆಚ್ಚಿನ ಕೆಲಸ ಮಾಡಿದ್ದಾರೆ. ನಾವು ಎಲ್ಲಿ ತನಕ ಎಚ್ಚರಿಕೆ ವಹಿಸುವುದಿಲ್ಲವೋ ಅಲ್ಲಿಯವರೆಗೆ ಕೊವೀಡ ನಿಂದ ಸುರಕ್ಷಿತರಾಗಿರಲು ಸಾಧ್ಯವಿಲ್ಲ. ಜನರ ಆರೋಗ್ಯ ಸುಧಾರಣೆ ಜೀವ ನಿರೋಧಕ ಶಕ್ತಿ ಎದುರಿಸುವ ಬಗ್ಗೆ ಸದನದಲ್ಲಿಚರ್ಚೆ ಮಾಡೋಣ ಎಂದು ಹೇಳಿದ ಅವರು ಶಿರಸಿಯಲ್ಲಿ ಸೂಪರ ಸ್ಪೇಶಾಲ್ಪಿಟಿ ಆಸ್ಪತ್ರೆಯ ರೀತಿಯಲ್ಲಿ 180ಕೋಟಿರೂ.ವೆಚ್ಚದ
250 ಹಾಸಿಗೆ ಆಸ್ಪತ್ರೆಗೆ ಆರೋಗ್ಯ ಸಚಿವ ಸುಧಾಕರ ಮಂಜೂರಿ ಮಾಡಿಸಿಕೊಟ್ಟಿದ್ದಾರೆ.ಜಿಲ್ಲೆಯ ಕಾರವಾರ,ಶಿರಸಿ,ಹೊನ್ನಾವರ ಆಸ್ಪತ್ರೆ ಒಳ್ಳೆಯ ಆಸ್ಪತ್ರೆಯಾಗಿದ್ದು ಉತ್ತಮ ಕೆಲಸವಾಗಿದೆ ಶಿರಸಿಯ ಆಸ್ಪತ್ರೆಯ ವೈದ್ಯರ ಕೊರತೆ ಇದೆ. ಶೇ.82. ಜನ ಕೊವೀಡ ಲಸಿಕೆಯನ್ನು ತೆಗೆದುಕೊಂಡು ರಾಜ್ಯದಲ್ಲಿ ನಮ್ಮ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ ಎಂದರು.
ಜೀವವೈವಿದ್ಯಮಂಡಳಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಪ್ರಥಮವಾಗಿ ಕೊವಿಡ್ ಲಸಿಕೆ ಪಡೆದರು. ನಂತರ ಮಾಜಿ ಶಾಸಕ ವಿವೇಕಾನಂದ ವೈದ್ಯ,ಉದ್ಯಮಿ ಶ್ರೀನಿವಾಸ ಹೆಬ್ಬಾರ ಲಸಿಕೆ ಪಡೆದರು
ಶಿರಸಿ ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ,ಜಿಪಂ ಅಧ್ಯಕ್ಷೆ ಜಯಶ್ರೀ ಮೊಗೇರ್,ಜಿಪಂ ಸದಸ್ಯ ಬಸವರಾಜ ದೊಡ್ಮನಿ,ತಾಪಂ ಸದಸ್ಯೆ ಶ್ರೀಲತಾ ಕಾಳೇರಮನೆ,ಜಿಲ್ಲಾಧಿಕಾರಿ ಮುಲೈಮೋಹಿನ,ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶರದ ನಾಯ್ಕ,
ಜಿಪಂ ಸಿ.ಇ.ಓ ಪ್ರಿಯಾಂಗ,ಉಪವಿಭಾಗಾಧಿಕಾರಿ ಆಕೃತಿ ಬನ್ಸಾಲ್ ಮುಂತಾದವರು ಉಪಸ್ಥಿತರಿದ್ದರು.