ಸ್ವರ್ಣವಲ್ಲಿ ಶ್ರೀಗಂಗಾಧರೇಂದ್ರಸರಸ್ವತೀ ಸ್ವಾಮೀಜಿಗಳ ಪೀಠಾರೋಹಣ ತ್ರಿದಶಮಾನೋತ್ಸವ ಕಾರ್ಯಕ್ರಮ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸೊಂದಾ ಸ್ವರ್ಣವಲ್ಲಿ
ಹಸಿರು ಸ್ವಾಮೀಜಿ ಎಂದೇ ಪ್ರಖ್ಯಾತಿ ಪಡೆದಿರೋ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಗಳ ಪೀಠಾರೋಹಣದ 30 ನೇ ವರ್ಷದ ಕಾರ್ಯಕ್ರಮ ಸೋಮವಾರ ನಡೆಯಿತು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಮಾತನಾಡಿ, ಆಗಿನ ಕಾಲದಲ್ಲಿ ಈ ರೀತಿಯ ಮಹಾಸಂಸ್ಥಾನ ಅನ್ನೋ ಹೆಸರುಗಳು ಇರ್ತಾ ಇರ್ಲಿಲ್ಲ. ಆಗಿನ ಕಾಲದಲ್ಲಿ ರಾಜರುಗಳೇ ಮಠದ ನಿರ್ವಹಣೆಗೆ ಅನುದಾನಗಳನ್ನ ನೀಡುತ್ತಿದ್ದರು ರಾಜಗುರುಗಳು ಇರುತ್ತಿದ್ದರು. ಈಗ ರಾಜರ ಆಡಳಿತ ಇಲ್ಲದೇ ಇರುವುದದ ಸರ್ಕಾರಗಳು ಮಠ ಮಾನ್ಯಗಳಿಗೆ ಅನುದಾನ ನೀಡುತ್ತಿವೆ. ಈಗಾಗಲೇ ಪೀಠಾರೋಹಣವಾಗಿ 30 ವರ್ಷಗಳು ಸಂದಿವೆ ಅಂತ ಗತಕಾಲದ ನೆನಪುಗಳನ್ನ ಹಂಚಿಕೊಂಡರು.

ಸನ್ಯಾಸಿಗಳ ತಪಸ್ಸು ರಾಷ್ಟ್ರದ ಹಿತಕ್ಕಿದೆ. ರಾಜ್ಯದಲ್ಲಿ ಮೀಸಲಾತಿಯ ವಿಚಾರದಲ್ಲಿ ಗೊಂದಲ ನಡೆಯುತ್ತಿದೆ. ಮೀಸಲಾತಿ ಅತೀಯಾದರೆ ಅಪಾಯ. ದೊಡ್ಡ ಸಮುದಾಯಗಳು ಮೀಸಲಾತಿಗೆ ಹೋದರೆ, ಸಣ್ಣ ಸಮುದಾಯಗಳು ಅವಕಾಶ ವಂಚಿತರಾಗುತ್ತಿದ್ದಾರೆ. ಮೀಸಲಾತಿ ನಿರ್ಣಯ ತೇಗೆದುಕೊಳ್ಳುವಾಗ ಸಣ್ಣ ಸಮುದಾಯಗಳಿಗೆ ಅನ್ಯಾಯ ವಾಗದಂತೆ ಸರ್ಕಾರ ನೋಡಿಕೊಳ್ಳಬೇಕು. ನಮ್ಮ ಭಾಗದ ನದಿ ನೀರನ್ನು ಬೇರೆಡೆ ತೆಗೆದುಕೊಂಡು ಹೋಗುವುದರಿಂದ ಪಶ್ಚಿಮ ಘಟ್ಟದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ಕರಾವಳಿ ಭಾಗದ ಕೃಷಿಕರಿಗೆ ಹಾಗೂ ಮೀನುಗಾರಿಕೆಗೆ ಹೊಡೆತ ಬೀಳಲಿದೆ. ಇದಕ್ಕೆ ಜ್ವಲಂತ ಉದಾಹರಣೆ ಎತ್ತೀನಹೊಳೆ ಯೋಜನೆ. ಇದರ ವಿರುದ್ಧ ಧ್ವನಿ ಎತ್ತಬೇಕಾದ ಅನಿವಾರ್ಯತೆ ಇದೆ. ದೇವರ ಅನುಗ್ರಹದಿಂದ ಮಠದಲ್ಲಿರುವ ಯಾರಿಗೂ ಕೋವಿಡ್ ಸೊಂಕು ತಗುಲಿರಲಿಲ್ಲ. ನಮ್ಮ ದೇಶ ಆದಷ್ಟು ಬೇಗ ಕೊರೋನಾ ಮುಕ್ತ ಭಾರತವಾಗಲಿ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಆರೋಗ್ಯ ಸಚಿವ ಡಾ.ಸುಧಾಕರ್, ಪ್ರಾರಂಭದಲ್ಲಿ ಇಷ್ಟೊಂದು ಜನಸಂಖ್ಯೆ ಇರೋ ಭಾರತದಲ್ಲಿ ಲಕ್ಷಾಂತರ ಜನರಿಗೆ ಕೊರೊನಾ ಬರುತ್ತೆ, ಸಾವಿರಾರು ಲಕ್ಷಾಂತರ ಜನ ಸಾಯ್ತಾರೆ ಅಂತ ಹೇಳಿದ್ದರು. ಆದರೆ ಕಳೆದ ಒಂದು ವರ್ಷದಲ್ಲಿ ನಮ್ಮಲ್ಲೇ ಸಾವಿನ ಪ್ರಮಾಣ ಕಡಿಮೆ. 2 ನೇ ಅಲೆಯನ್ನ ಮುಂದುವರೆದ ದೇಶಗಳಲ್ಲಿ ಕೂಡ ನಿಯಂತ್ರಣ ಮಾಡೋಕೆ ಆಗ್ತಾ ಇಲ್ಲ. ಆದರೆ ಭಾರತದಲ್ಲಿ ನಿಯಂತ್ರಣವಾಗ್ತಾ ಇದೆ ನಮ್ಮ ಕ್ರಮಗಳು ಹಾಗೂ ಆಧ್ಯಾತ್ಮಿಕ ಕ್ಷೇತ್ರದ ಸಾಧು ಸಂತರು, ಪುಣ್ಯಜೀವಿಗಳು ಮಾಡಿರೋ ಸಾಧನೆಗಳು ಹಾಗೂ ಹೋಮ ಹವನಗಳು ಕೂಡ ಕಾರಣವಾಗಿವೆ ಅನ್ನೋದು ಆಶ್ಚರ್ಯವಾದರೂ ಸತ್ಯ ಅಂತ ಒಪ್ಪಿಕೊಳ್ಳಬೇಕಾಗುತ್ತದೆ. ವೈಜ್ಞಾನಿಕತೆ ಜೊತೆ ಧಾರ್ಮಿಕತೆ ರೀತಿಯಲ್ಲೇ ನಮ್ಮ ದೇಶ ಮುಂದುವರೆದಿದೆ ಎಂದು ಹೇಳಿದರು

ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ
ನಮ್ಮ ಮಠ ಬೆಳೆದು ಬಂದಿರುವುದು ಅತ್ಯಂತ ಗೌರವದ ಸಂತಸದ ವಿಷಯ. ಹಿಂದೂ ಧರ್ಮ ಅನಾತನ ಸಂಪ್ರದಾಯ ಆಚಾರ ವಿಚಾರಗಳನ್ನೋಳಗೊಂಡಿದೆ. ದಿ.ವಾಜಪೇಯಿ ಯವರು ಸಹ ಶ್ರೀ ಮಠದ ಪ್ರೀಯ ಶಿಷ್ಯರಲ್ಲಿ ಒಬ್ಬರಾಗಿದ್ದು‌. ಭಗವದ್ಗೀತೆಯ ಮಹತ್ವವನ್ನು ಇಡೀ ದೇಶಕ್ಕೆ ಸಾರಿದ ಹೆಮ್ಮೆ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಯವರದು.. ಭವಿಷ್ಯದಲ್ಲಿ ಸ್ವಾಮಿಜೀಯವರ ಸಂಕಲ್ಪದ ಕಾರ್ಯಕ್ರಮಗಳಲ್ಲಿ ನಾವೆಲ್ಲರೂ ಭಾಗಿಯಾಗುವುದು ಆದ್ಯ ಕರ್ತವ್ಯವಾಗಿದೆ. ವಿದ್ಯಾಭವನ ಅತೀ ಸುಂದರವಾಗಿ ಭವ್ಯವಾಗಿ ನಿರ್ಮಾಣವಾಗಿದೆ ಎಂದರು.

ಶಾಸಕ ಆರ್ ವಿ ದೇಶಪಾಂಡೆ,ಸಚೀವ ಶಿವರಾಮ ಹೆಬ್ಬಾರ,
ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಉಪಸ್ಥಿತರಿದ್ದರು.

About the author

Adyot

Leave a Comment