ಆದ್ಯೋತ್ ಸುದ್ದಿನಿಧು
ಉತ್ತರಕನ್ನಡ ಜಿಲ್ಲೆಯ ಶಿರಸಿ-ಸಿದ್ದಾಪುರ ತಾಲೂಕಿನಲ್ಲಿ ಗುರುವಾರ ಮಹಾಶಿವರಾತ್ರಿಯ ಮಧ್ಯಾಹ್ನ ೩ ಗಂಟೆಯಿಂದ ಗುಡುಗು ಸಹಿತ ಭಾರಿ ಮಳೆಯಾಗಿದೆ.
ಬೆಳಿಗ್ಗೆ ಯಾವುದೇ ಮಳೆಯ ವಾತಾವರಣ ಇಲ್ಲವಾಗಿತ್ತು ಮಧ್ಯಾಹ್ನ ಮೂರು ಗಂಟೆಯ ಸುಮಾರಿಗೆ ಗುಡುಗು ಮತ್ತು ಗಾಳಿ ಪ್ರಾರಂಭವಾಗಿ ನೋಡ ನೋಡುತ್ತಿದ್ದಂತೆ ಮಳೆ ಸುರಿಯಲಾರಂಬಿಸಿತು.ಶಿರಸಿ ಪಟ್ಟಣದಲ್ಲಿ ಆಲಿಕಲ್ಲು ಮಳೆಯಾಗಿದ್ದು ರಸ್ತೆಯಲ್ಲಿ ಆಲಿಕಲ್ಲು ಬಿದ್ದಿರುವುದು ಕಂಡು ಬಂದಿತು.
ಹಬ್ಬದ ಸಡಗರದಲ್ಲಿದ್ದ ಜನರು ಮಳೆರಾಯನ ಆರ್ಭಟಕ್ಕೆ ಕಂಗಾಲಾದರು ಬಿಸಿಲು ಧಗೆಗೆ ತಾತ್ಕಾಲಿಕ ಪರಿಹಾರ ಸಿಕ್ಕಿದ್ದರು ಇದು ಅಪಾಯದ ಮುನ್ಸೂಚನೆಯೇ ಎಂದು ಚಿಂತೆ ಪಡುವಂತಾಗಿದೆ.
ಸಿದ್ದಾಪುರ ಪಟ್ಡಣದ ರವೀಂದ್ರ ನಗರದಲ್ಲಿ ರೋಹಿಣಿ ಷಣ್ಮುಖ ಅಂಬಿಗ ಎನ್ನುವವರ ಮನೆಯ ಎದುರಿನ ತೆಂಗಿನಮರಕ್ಕೆ ಸಿಡಿಲು ಹೊಡೆದ ಪರಿಣಾಮ ಹೊತ್ತಿ ಉರಿದು ಆತಂಕ ಸೃಷ್ಠಿಸಿತು. ಈ ಭಾಗದ ಪಪಂ ಸದಸ್ಯ ನಂದನ ಬೋರ್ಕರ್ ಹಾಗೂ ಪಪಂ ಮುಖ್ಯಾಧಿಕಾರಿ ಕುಮಾರ ನಾಯ್ಕ ತಕ್ಷಣ ಕಾರ್ಯಪ್ರವೃತ್ತರಾಗಿ ಅಗ್ನಿಶಾಮಕ ದಳದವರನ್ನು ಕರೆಸಿ ಬೆಂಕಿ ಆರಿಸುವಲ್ಲಿ ಯಶಸ್ವಿಯಾದರು.