ಆದ್ಯೋತ್ ಸುದ್ದಿನಿಧಿ
ಉತ್ತರಕನ್ನಡ ಜಿಲ್ಲೆಯ ಶಿರಸಿಯ ಮತ್ತಿಘಟ್ಟಾ ಕೆಳಗಿನಕೇರಿಯಲ್ಲಿ
ಭೂಕುಸಿತ ಉಂಟಾಗಿದ್ದು ಸುಮಾರು ಒಂದು ಎಕರೆ ಅಡಿಕೆ ತೋಟ ನಾಶವಾಗಿದೆ.
ಕೆಳಗಿನಕೇರಿಯ ಮಧುಸೂದನ ಹೆಗಡೆ ಎಂಬುವವರಿಗೆ ಸೇರಿದ ತೋಟ ಇದಾಗಿದ್ದು ಸುಮಾರು 20ಲಕ್ಷರೂ.ಗಿಂತ ಹೆಚ್ಚು ನಷ್ಟವುಂಟಾಗಿದೆ.ಕಳೆದ ವರ್ಷ ಬಿದ್ದ ಭಾರಿ ಮಳೆಗೆ ಇಲ್ಲಿಯ ಭೂಮಿ ಬಿರುಕು ಬಿಟ್ಟಿತ್ತು ಅದೃಷ್ಟವಶಾತ್ ಯಾವುದೇ ಜೀವ ಹಾನಿ ಸಂಭವಿಸಿಲ್ಲ.
ಸ್ಥಳಕ್ಕೆ ಕಂದಾಯ ಇಲಾಖೆ ಹಾಗೂ ತೋಟಗಾರಿಕಾ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
####
ಯಲ್ಲಾಪುರ ಅರೆಬೈಲ್ ಘಟ್ಟದಲ್ಲಿ ಅಪಘಾತ ಇಬ್ಬರ ಮರಣ
ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ಅರೆಬೈಲ್ ಘಾಟಿಯಲ್ಲಿ
ಲಾರಿ ಮತ್ತು ಬೊಲೆರೋ ವಾಹನದ ನಡುವೆ ನಡೆದ ಭೀಕರ ಅಪಘಾತದಲ್ಲಿ ಇಬ್ಬರು ಮಹಿಳೆಯರು ಮೃತಪಟ್ಟಿದ್ದು ಐದು ಜನ ತೀವ್ರಗಾಯಗೊಂಡಿದ್ದಾರೆ.
ಮೃತರನ್ನು ಬಿದರಿ ಗ್ರಾಮದ ರಾಜೇಶ್ವರಿ ಹನುಮಂತ ರೆಡ್ಡಿ,ಶಕುಂತಲಾ ಟಿ.ಪಾಟೀಲ ಎಂದು ಗುರುತಿಸಲಾಗಿದೆ.
ಬೊಲೇರೋದ ಡ್ರೈವರ್ ತಿಮ್ಮೇಗೌಡ ಎನ್. ಪಾಟೀಲ್, ಶೃತಿ ನಾಗಾವಿ, ಲಕ್ಷ್ನೀ ಬಾಯಿ ಲಚ್ಚವ್ವ,ಆಕಾಶ ಹನುಮಂತ ಪರಡ್ಡಿ ಅಪೇಕ್ಷಾ ಹನುಮಂತ ಪರಡ್ಡಿ ಗಾಯಾಳುಗಳಾಗಿದ್ದಾರೆ.
ಮೃತಪಟ್ಟವರು ಮತ್ತು ಗಾಯಾಳುಗಳು ಬಾಗಲಕೋಟೆ ಜಿಲ್ಲೆ ಮುದೋಳ ತಾಲೂಕು ಬಿದರಿ ಮತ್ತು ಹುಲಕೋಟೆ ಗ್ರಾಮದವರಾಗಿದ್ದು ಹೊಸದಾಗಿ ಕೊಂಡ ಬೊಲೆರೋ ಗಾಡಿಯಲ್ಲಿ
ಸುಬ್ರಹ್ಮಣ್ಯಕ್ಕೆ ದೇವರ ದರ್ಶನಕ್ಕೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ