ಈಶ್ವರಪ್ಪನವರ ಹೇಳಿಕೆ ದುರದೃಷ್ಟಕರ-ಶಿವರಾಮ ಹೆಬ್ಬಾರ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಕೊಂಡ್ಲಿಶ್ರೀಮಾರಿಕಾಂಬಾದೇವಿಯ ಜಾತ್ರಾಮಹೋತ್ಸವಕ್ಕೆಕಾರ್ಮಿಕ ಸಚೀವ ಶಿವರಾಮ ಹೆಬ್ಬಾರ ಭೇಟಿ ನೀಡಿದರು
ಈ ಸಂದರ್ಭದಲ್ಲಿ ಆದ್ಯೋತ್ ನ್ಯೂಸ್ ಜೊತೆ ಮಾತನಾಡಿದ ಸಚೀವ ಹೆಬ್ಬಾರ್ ಸಚೀವ ಈಶ್ವರಪ್ಪನವರ ಹೇಳಿಕೆ ದುರದೃಷ್ಟಕರವಾಗಿದ್ದು ಅನುದಾನ ಹಂಚುವ ಪರಮಾಧಿಕಾರ ಮುಖ್ಯಮಂತ್ರಿಗಳಿಗಿರುತ್ತದೆ ನಾನು ನಾಲ್ಕು ಮುಖ್ಯಮಂತ್ರಿಗಳ ಅವಧಿಯಲ್ಲಿ ಶಾಸಕನಾಗಿ ಕೆಲಸ ಮಾಡಿದ್ದೇನೆ ನೂರಾರು ಕೋಟಿರೂ. ಅನುದಾನವನ್ನು ನನ್ನ ಕ್ಷೇತ್ರಕ್ಕೆ ತಂದಿದ್ದೇನೆ ಇದು ತಪ್ಪು ಹೇಗಾಗುತ್ತದೆ ಇದನ್ನು ಮುಖ್ಯಮಂತ್ರಿಗಳ ಹಸ್ತಕ್ಷೇಪ ಎಂದು ತಿಳಿಯಬಾರದು ಈಶ್ವರಪ್ಪನವರು ಹಾಗೂ ಯಡಿಯೂರಪ್ಪನವರು ಸಮಕಾಲಿನವರು ಯಾವುದೇ ಸಮಸ್ಯೆ ಇದ್ದರೂ ಪರಸ್ಪರ ಬಗೆಹರಿಸಿಕೊಳ್ಳಬೇಕಿತ್ತು ರಾಜ್ಯಪಾಲರಿಗೆ ದೂರು ಕೊಡುವುದು ತಪ್ಪು. ಎಂದು ಹೇಳಿದ ಹೆಬ್ಬಾರರು ಈಶ್ವರಪ್ಪನವರ ವಿರುದ್ಧ ಯಾವುದೇ ಸಹಿ ಸಂಗ್ರಹ ಮಾಡುತ್ತಿರುವ ವಿಷಯ ನನ್ನ ಗಮನಕ್ಕೆ ಬಂದಿಲ್ಲ ಎಂದು ಹೇಳಿದರು.

ಕಳೆದ ಒಂದು ವರ್ಷದ ಹಿಂದೆ ಘಟಿಸಿದ ಲಾಕ್‍ಡೌನ್ ಅದರಿಂದ ಸಂಭವಿಸಿದ ಕಷ್ಟ-ನಷ್ಟವನ್ನು ನಾವು ನೋಡಿದ್ದೇವೆ ಕೊವಿಡ್ ಎರಡನೇ ಅಲೆ ಅಬ್ಬರಿಸುತ್ತಿದ್ದು ಸರಕಾರ ಕಠೀಣ ನಿಯಮ ಮಾಡುತ್ತಿದೆ ಇದನ್ನು ಪಾಲಿಸುವುದು ಜನರ ಕರ್ತವ್ಯ ಕೇವಲ ಜನರ ಕರ್ತವ್ಯವಲ್ಲ ಜನಪ್ರತಿನಿಧಿಗಳ,ಅಧಿಕಾರಿಗಳ ಎಲ್ಲರ ಕರ್ತವ್ಯವಾಗಿರುತ್ತದೆ ಈಗ ಶೇ50ರಷ್ಟು ಮಾತ್ರ ಕೊವಿಡ್ ನಿಯಮ ಜಾರಿಯಾಗಿದೆ ಇದು ಶೇ.100 ಜಾರಿಗೆ ಬರಬೇಕು ಧಾರ್ಮಿಕ ಆಚರಣೆಗೆ ಸರಕಾರ ಅಡ್ಡಿಪಡಿಸುತ್ತಿಲ್ಲ ಕೊವಿಡ್ ನಿಯಮವನ್ನು ಅನುಸರಿಸಿ ಎಲ್ಲವೂ ನಡೆಯಬೇಕು ಎಂದು ಹೇಳಿದರು.

ಶುಕ್ರವಾರ ತಾಲೂಕಿನ ಹಂಗಾರಖಂಡದ ಯೋಧನ ಅಂತ್ಯಕ್ರಿಯೆಯಲ್ಲಿ ಯಾವುದೇ ಜನಪ್ರತಿನಿಧಿಗಳು ಭಾಗವಹಿಸದೆ ಇರುವ ಬಗ್ಗೆ ಪ್ರಶ್ನಿಸಿದಾಗ, ಇದರಲ್ಲಿ ಯಾವುದೇ ಅಪಾರ್ಥ ಮಾಡಿಕೊಳ್ಳುವುದು ಬೇಡ ಕೆಲವು ಅನಿವಾರ್ಯ ಕಾರಣಗಳಿಂದ ಭಾಗವಹಿಸಲು ಸಾಧ್ಯವಾಗಿರಲಿಲ್ಲ ನಾನು ಈಗ ಅವರ ಮನೆಗೆ ಹೋಗಿ ಕುಟುಂಬದವರಿಗೆ ಸಾಂತ್ವಾನ ಹೇಳಲಿದ್ದೇನೆ ನಾನು ಭೇಟಿ ನೀಡಿದರೆ ಎಲ್ಲರೂ ಭೇಟಿ ನೀಡಿದಂತೆ ಎಂದು ಹೇಳಿದರು.
ಈಶ್ವರಪ್ಪನವರ ವಿರುದ್ಧವಾಗಲಿ ಯಡಿಯೂರಪ್ಪನವರ ವಿರುದ್ಧವಾಗಲಿ ಯಾವುದೇ ಸಹಿ ಸಂಗ್ರಹಿಸುತ್ತಿರುವುದು ನನ್ನ ಗಮನಕ್ಕೆ ಬಂದಿಲ್ಲ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ನಿಮ್ಮ ವಿವೇಚನೆಗೆ ಬಿಟ್ಟಿದ್ದು ಎಂದು ಆದ್ಯೋತ್ ನ್ಯೂಸ್ ಗೆ ಉತ್ತರಿಸಿದರು.

ಈ ಸಂದರ್ಭದಲ್ಲಿ ಜಾತ್ರಾಸಮಿತಿಯ ಅಧ್ಯಕ್ಷ ಕೆ.ಜಿ.ನಾಯ್ಕ ಹಣಜೀಬೈಲ್,ಮೊಕ್ತೆಸರ ರಮೆಶ ರಾಯ್ಕರ್,ಜಿಪಂ ಸದಸ್ಯ ನಾಗರಾಜ ನಾಯ್ಕ ಬೇಡ್ಕಣಿ,ಪಪಂ ಅಧ್ಯಕ್ಷೆ ಚಂದ್ರಕಲಾ ನಾಯ್ಕ,ಉಪಾಧ್ಯಕ್ಷ ರವಿಕುಮಾರ ನಾಯ್ಕ,ಸ್ಥಾಯಿ ಸಮಿತಿ ಅಧ್ಯಕ್ಷ ವಿನಯ ಹೊನ್ನೆಗುಂಡಿ ಮುಂತಾದವರು
ಉಪಸ್ಥಿತರಿದ್ದರು.

ಇತ್ತೀಚೆಗೆ ಮೃತಪಟ್ಟ ಸಿದ್ದಾಪುರ ತಾಲೂಕಿನ ನಾಣಿಕಟ್ಟಾ ತ್ಯಾಗಲಿ ಹಂಗಾರಖಂಡದ ಯೋಧ ಸಂದೀಪ ನಾರಾಯಣ ನಾಯ್ಕ ಮನೆಗೆ ಸಚೀವ ಶಿವರಾಮ ಹೆಬ್ಬಾರ ಭೇಟಿ ನೀಡಿ ಯೋಧನ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕುಟುಂಬವರ್ಗದವರಿಗೆ ಸಾಂತ್ವಾನ ಹೇಳಿದರು.

About the author

Adyot

Leave a Comment