ಸೆಲ್ಪಿ ತೆಗೆದುಕೊಳ್ಳಲು ಹೋಗಿ ಕಾಳಿನದಿಗೆ ಬಿದ್ದು ಕಾಣೆಯಾದ ಯುವ ಜೋಡಿ

ಆದ್ಯೋತ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ಗಣೇಶಗುಡಿ ಸಮೀಪದ ಸೂಪಾ ಡ್ಯಾಂ ಬಳಿ ಇರುವ ಕಾಳಿನದಿಯ ಸೇತುವೆಯ ಮೇಲಿಂದ ಸೆಲ್ಪಿ ತೆಗೆದುಕೊಳ್ಳಲು ಹೋಗಿ ಸೇತುವೆಯಿಂದ ಕೆಳಗೆ ನದಿಗೆ ಬಿದ್ದು ಯುವ ಜೋಡಿಯೊಂದು ಕಾಣೆಯಾದ ಘಟನೆ ಸೋಮವಾರ ಸಂಜೆ ನಡೆದಿದೆ.
ಸುಮಾರು ನಾಲ್ಕು ಗಂಟೆಯ ಹೊತ್ತಿಗೆ ಗಣೇಶಗುಡಿಯ ಡ್ಯಾಮ್ ಕೆಳಭಾಗದಲ್ಲಿರುವ ಸೇತುವೆಯ ಕಟ್ಟೆಯ ಮೇಲೆ ನಿಂತು ಸೆಲ್ಪಿ ಕ್ಲಿಕ್ಕಿಸುತ್ತಿದ್ದಾಗ ಇಬ್ಬರೂ ಆಯ ತಪ್ಪಿ ನದಿಗೆ ಬಿದ್ದಿದ್ದಾರೆ ಎನ್ನಲಾಗಿದೆ.

ಸ್ಥಳಕ್ಕೆ ರಾಮನಗರ ಪಿ.ಎಸ.ಐ ಕಿರಣ ಪಾಟೀಲ ಹಾಗೂ ಜೊಯಿಡಾದ ಅಗ್ನಿಶಾಮಕ ಸಿಬ್ಬಂದಿ,ವೈಟ್ ವಾಟರ್ ರಾಪ್ಟಿಂಗ್ ತಂಡ ಸ್ಥಳದಲ್ಲಿದ್ದು ಹುಡುಕಾಟ ನಡೆಸುತ್ತಿದ್ದಾರೆ. ಸದ್ಯ ಜೋಡಿಗಳ ಫೋನ್ ನಂಬರ್. ಪತ್ತೆಯಾಗಿದ್ದು ಯುವತಿಯನ್ನು ಬೀದರ ಮೂಲದ ಇಂಜನೀಯರಿಂಗ್ ವಿದ್ಯಾರ್ಥಿನಿ ರಕ್ಷಿತಾ ಎಂದು ಗುರುತಿಸಲಾಗಿದ್ದು ಯುವಕನಬಗ್ಗೆ ತಿಳಿದುಬರಬೇಕಿದೆ.

About the author

Adyot

Leave a Comment