ಉತ್ತರಕನ್ನಡ ಜಿಲ್ಲೆಯ
ಮಲೆನಾಡಿನಲ್ಲಿ ಅಡಿಕೆ ಬೆಳೆಗಾರರದ್ದೇ ಪಾರುಪತ್ಯ. ಮಲೆನಾಡು ಅಡಿಕೆ ಬೆಳೆಗೆ ಹೆಸರಾಗಿದ್ದು, ರಾಜ್ಯದಲ್ಲಿ ಬೆಳೆಯೋ ಅಡಿಕೆ ಬೆಳೆಯಲ್ಲಿ ಅಗ್ರಸ್ಥಾನ ಪಡೆದಿದೆ. ಆದ್ರೆ ಅಡಿಕೆ ಬೆಳೆಗಾರರಿಗೆ ಪ್ರತಿವರ್ಷ ಒಂದಿಲ್ಲೊಂದು ಸಮಸ್ಯೆ ಎದುರಾಗ್ತಾನೇ ಇದೆ. ಇನ್ನೇನು ಸಮಸ್ಯೆ ಪರಿಹಾರ ಆಗುತ್ತೆ ಅನ್ನುವಷ್ಟರಲ್ಲಿ ಬೇರೆ ಯವುದಾದ್ರೂ ಸಮಸ್ಯೆ ಬಂದಿರುತ್ತೆ. ಈ ಕುರಿತ ಒಂದು ವರದಿ ಇಲ್ಲಿದೆ….
ಪ್ರತಿ ವರ್ಷವೂ ಒಂದೊಂದು ಸಮಸ್ಯೆಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಿರೋ ಅಡಿಕೆ ಬೆಳೆಗಾರರಿಗೆ ಈ ವರ್ಷ ಸ್ವಲ್ಪ ಅನುಕೂಲವಾಗಿತ್ತು. ಅಡಿಕೆಯ ಬೆಲೆ ಜಾಸ್ತಿ ಇದ್ರೂ ಕೂಡ ಬೆಳೆ ಕಡಿಮೆಯಾಗಿ ಬೆಳೆಗಾರರು ಸಂಕಷ್ಟ ಪಡುವಂತಾಗಿತ್ತು. ಆದ್ರೆ ಈ ವರ್ಷದ ಮೊದಲ ಭಾಗದಲ್ಲೇ ಅಡಿಕೆಯ ಸಣ್ಣ ಕಾಯಿಗಳು ಉದುರಲಾರಂಭಿಸಿದ್ದು ಮುಂದಿನ ವರ್ಷಕ್ಕೆ ಬೆಳೆ ಕಡಿಮೆಯಾಗೋ ಲಕ್ಷಣ ಈಗಲೇ ಗೋಚರವಾಗಿದೆ. ಇದಕ್ಕೆ ಮುಖ್ಯ ಕಾರಣ ಹವಾಮಾನದಲ್ಲಿನ ಏರುಪೇರು ಹಾಗೂ ಕಾಡುಪ್ರಾಣಿಗಳ ಕಾಟ.
ಮಲೆನಾಡು ಭಾಗಗಳ ಅರಣ್ಯಗಳಲ್ಲಿ ಆಹಾರ ಸಿಗದೇ ಇರೋದ್ರಿಂದ ಕಾಡು ಪ್ರಾಣಿಗಳು ರೈತರ ಅಡಿಕೆ ತೋಟಗಳತ್ತ ಮುಖಮಾಡಿವೆ. ಅಡಿಕೆಯ ಹಸಿ ಸಿಂಗಾರವನ್ನ ತಿಂದು ಅಡಿಕೆ ಬೆಳೆಯಲು ಅವಕಾಶ ಮಾಡಿಕೊಡುತ್ತಿಲ್ಲ. ಅರಣ್ಯ ಇಲಾಖೆ ಈ ಬಗ್ಗೆ ಗಮನ ಕೊಡುತ್ತಿಲ್ಲ. ಹೀಗೇ ಇದು ಮುಂದುವರಿದ್ರೆ ಮಲೆನಾಡಿನಲ್ಲಿ ಅಡಿಕೆ ಬೆಳೆಗಾರರ ಆತ್ಮಹತ್ಯೆ ಅನ್ನೋ ಸುದ್ದಿಯನ್ನ ಕೇಳಬೇಕಾಗಿ ಬರ್ಬಹುದು ಅಂತ ಆಕ್ರೋಶ ವ್ಯಕ್ತ ಪಡಿಸುತ್ತಾರೆ ಮಲೆನಾಡಿಗರು..
ಇನ್ನೊಂದೆಡೆ ಹವಾಮಾನವೂ ಕೂಡ ರೈತರಿಗೆ ಕೈ ಕೊಡುತ್ತಿದೆ. ಬಿಸಿಲಿನ ಮಧ್ಯೆ ಆಗಾಗ ಮಳೆ ಸಿಂಚನ ಆಗ್ತಿರೋದು ಅಡಿಕೆಯ ಹಸಿ ಮಿಳ್ಳೆಗಳನ್ನ ಉದುರುವಂತೆ ಮಾಡಿದೆ. ಸರಿಯಾದ ಪರಾಗಸ್ಪರ್ಶ ಆಗದೇ ಇರೋ ಕಾರಣದಿಂದ ಅಡಿಕೆ ಕಾಯಿಗಳು ನಿಲ್ಲುತ್ತಿಲ್ಲ. ಅಡಿಕೆ ಹಸಿ ಕಾಯಿ ಉದುರುತ್ತಿದೆ ಯಾವುದೇ ಕೀಟನಾಶಕಗಳನ್ನ ಸಿಂಪಡಿಸಿದಾಗ ಅದೂ ಕೂಡ ಪರಾಗಸ್ಪರ್ಶದ ಮೇಲೆ ಪರಿಣಾಮ ಬೀರುತ್ತಿದೆ. ಪರಾಗಸ್ಪರ್ಶಕ್ಕೆ ಮುಖ್ಯ ಕಾರಣ ಜೇನುಗಳು. ಕೀಟನಾಶಕ ಸಿಂಪಡಣೆಯಿಂದಾಗಿ ಜೇನು ಹುಳುಗಳು ಸಾಯುತ್ತಿವೆ. ಇದರಿಂದಾಗಿ ಸರಿಯಾದ ಪರಾಗಸ್ಪರ್ಶ ಕ್ರಿಯೆ ನಡೆಯುತ್ತಿಲ್ಲ. ಅದೂ ಅಲ್ಲದೆ ಕಾಯಿಗಳು ಸಣ್ಣವಾಗಿದ್ದಾಗ ಮೃದುವಾಗಿರುತ್ತವೆ. ಈ ಸಮಯದಲ್ಲಿ ಕೀಟಗಳು ಕೂಡ ಆರಾಮವಾಗಿ ಕಾಯಿಗಳನ್ನ ಕೊರೆಯೋದ್ರಿಂದ ಅಡಿಕೆ ಕಾಯಿಗಳ ಉದುರುವಿಕೆ ಆಗುತ್ತಿದೆ. ಇದು ಹೀಗೇ ಮುಂದುವರಿದ್ರೆ ಮುಂದಿನ ವರ್ಷ ಅಡಿಕೆ ಬೆಳೆ ಕಡಿಮೆಯಾಗುತ್ತೆ ಅಂತಾರೆ ತೋಟಗಾರಿಕಾ ಇಲಾಖೆ ಅಧಿಕಾರಿಗಳು..
ಒಟ್ಟಿನಲ್ಲಿ ಹಲ್ಲಿದ್ದಾಗ ಕಡಲೆ ಇಲ್ಲ, ಕಡಲೆ ಇದ್ದಾಗ ಹಲ್ಲಿಲ್ಲ ಅನ್ನೋ ಗಾದೆ ಮಲೆನಾಡ ಅಡಿಕೆ ಬೆಳೆಗಾರರ ಪಾಲಿಗೆ ಅಕ್ಷರಶಃ ಸತ್ಯವಾಗಿದೆ. ಇವರ ಕಷ್ಟಗಳನ್ನ ಆಲಿಸಬೇಕಾದ ಸರ್ಕಾರ ಬೆಳೆಗಾರರ ಪಾಲಿಗೆ ಇದ್ದೂ ಇಲ್ಲದಂತಾಗಿದೆ. ಇಲಾಖೆಗಳು ಇವರ ಕಷ್ಟಗಳನ್ನ ಪರಿಹರಿಸೋ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ…
ಶ್ರೀಧರ ಮದ್ದಿನಕೆರೆ
##########
ಅಪಘಾತದಲ್ಲಿ ಪೆಟ್ಟು ಬಿದ್ದ ಬಾಲಕಿಗೆ ಚಿಕಿತ್ಸೆಗೆ ಸಹಾಯಕ್ಕಾಗಿ ಮನವಿ
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಅಕ್ಕುಂಜಿ ಹಿರೆಮಗ್ಗಿಯ ತುಳಸಿ ಶಿವಕುಮಾರ ಗೊಂಡ(7) ಎಂಬ ಬಾಲಕಿ ಕಳೆದ ಹದಿನೈದು ದಿನದ ಹಿಂದೆ ನಡೆದ ಅಪಘಾತದಲ್ಲಿ ತೀವ್ರ ಗಾಯಗೊಂಡು ಮಂಗಳೂರಿನ ಕೆಎಸ್ಹೆಗಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಎರಡನೇ ತರಗತಿಯಲ್ಲಿ ಓದುತ್ತಿರುವ ಇ ಬಾಲಕಿಯ ಪಾಲಕರು ಬಡವರಾಗಿದ್ದು ಚಿಕಿತ್ಸಾ ವೆಚ್ಚ ಸುಮಾರು 3 ಲಕ್ಷರೂ. ವನ್ನು ಭರಸಲು ಆರ್ಥಿಕವಾಗಿ ಸಶಕ್ತರಾಗಿಲ್ಲ ಕಾರಣ ಸಹಾಯ ಮಾಡುವ ದಾನಿಗಳು ಈ ಕೆಳಗಿನ ಎಸ್ಬಿಐ ಬ್ಯಾಂಕ್ನ ಖಾತೆಗೆ ಜಮಾ ಮಾಡಬೇಕು ಎಂದು ಪಾಲಕರು ಕೋರಿದ್ದಾರೆ
ಖಾತೆ ನಂ.54057980173
ಐಎಪ್ಎಸ್ಸಿ.-ಎಸ್ಬಿಐಎನ್0040131
ಮೊಬೈಲ್ ನಂ.9343423058
(ಬಾಲಕಿಗೆ ಸಹಾಯ ಮಾಡಿದ ದಾನಿಗಳು ಹಣಪಾವತಿಸಿದ ದಾಖಲೆ,ಹೆಸರು,ಮೊಬೈಲ್ ನಂಬರ ಕಳುಹಿಸಿದರೆ ಆದ್ಯೋತ ಸುದ್ದಿ ನಿಧಿಯಲ್ಲಿ ಪ್ರಕಟಿಸಲಾಗುವುದು)