ಆದ್ಯೋತ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಬುಧವಾರ ತಡರಾತ್ರಿ ಅಬ್ಬರಿಸಿದ ಮಳೆ-ಗಾಳಿಯಿಂದಾಗಿ ಮರ,ವಿದ್ಯುತ್ ಕಂಬಗಳು ಧರೆಗುರುಳಿದ್ದು ಸಾಕಷ್ಟು ಪ್ರಮಾಣದ ಹಾನಿಯುಂಟಾಗಿದೆ.
ಹೆಸ್ಕಾಂ ಇಲಾಖೆಯ 20ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿದ್ದು ನೂರಾರು ಮರಗಳು ಉರುಳಿದೆ.
ಒಂದೇ ರಾತ್ರಿ ಸುಮಾರು 22 ಮಿಮಿ ಮಳೆಯಾಗಿದ್ದು
ಮಲವಳ್ಳಿ,ಶೇಲೂರು ಹಂಗಾರಖಂಡ ಭಾಗದಲ್ಲಿ ವಿದ್ಯುತ್ ಕಂಬಗಳು ಉರುಳಿದ್ದು ಶಿರಸಿ-ಸಿದ್ದಾಪುರ ಮುಖ್ಯರಸ್ತೆಯ ತ್ಯಾಗಲಿ-ಕಾನಸೂರು ಮಧ್ಯದಲ್ಲಿ 11ಕೆವಿ ಲೈನ್ ಮೇಲೆ ಮರಬಿದ್ದು ಮೂರು ಕಂಬಗಳು ಮುರಿದು ತಂತಿಯ ಸಹಿತ ರಸ್ತೆಯ ಮೇಲೆ ಬಿದ್ದಿದ್ದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ.