ನಮಃ ಶಾಂತಾಯ ದಿವ್ಯಾಯ ಸತ್ಯಧರ್ಮ ಸ್ವರೂಪಿಣೆ ಸ್ವಾನಂದಾಮೃತ ತೃಪ್ತಾಯ ಶ್ರೀಧರಾಯ ನಮೋನಮ:
### #### #### #### #### ##### #### ####
14-06-2020 ರವಿವಾರದಿಂದ 20-06-2020 ರವರೆಗೆ
ಮೇಷ
ಬಹುದಿನದಿಂದ ಕಾಡುತ್ತಿರುವ ಸಮಸ್ಯೆ ಈ ವಾರ ಭಾಗಶಃ ಪರಿಹಾರ ಕಾಣಲಿದೆ ಎಚ್ಚರಿಕೆಯಿಂದಿರದಿದ್ದರೆ ಭವಿಷ್ಯದಲ್ಲಿ ಬೆಲೆ ತೆರಬೇಕಾಗುತ್ತದೆ.ವ್ಯಾಪಾರಿಗಳಿಗೆ ಉತ್ತಮವಾಗಿರುತ್ತದೆ ಧಾನ್ಯ ವ್ಯಾಪಾರಿಗಳು ವಾರದಾರಂಭದಲ್ಲಿ ಒಂದಿಷ್ಟು ನಷ್ಟಕ್ಕೊಳಗಾಗಲಿದ್ದೀರಿ.ಕೃಷಿಕರಿಗೆ ಬೆಳೆ ಮಾರಾಟಕ್ಕೆ ಸೂಕ್ತ ಸಮಯ ಮಂಗಳವಾರ ಕೃಷಿ ಚಟುವಟಿಕೆ ಪ್ರಾರಂಭಿಸುವುದು ಉತ್ತಮ
###
ವೃಷಭ
ಕಣ್ಣಿಗೆ ಕಾಣುತ್ತಿರುವುದು ಕೈಗೆ ಸಿಗುತ್ತಿಲ್ಲ ಎನ್ನುವುದು ನಿಮ್ಮ ಚಿಂತೆ ಶುಭ ಸ್ಥಾನದಲ್ಲಿರುವ ಗ್ರಹಗಳು ವಕ್ರವಾಗಿದೆ ಇದರಿಂದ ನಿರೀಕ್ಷಿತ ಫಲ ಸಿಗುತ್ತಿಲ್ಲ ಆದರೂ ಈ ವಾರ ಒಂದಿಷ್ಟು ಸಾಧನೆಯಾಗಲಿದೆ ಗೊಬ್ಬರ ವ್ಯಾಪಾರಿಗಳಿಗೆ ಉತ್ತಮ ಲಾಭ ದೊರೆಯಲಿದೆ.ಹೊಸ ವಸ್ಯ್ರ ಖರೀದಿ ಮಾಡಲಿದ್ದೀರಿ.ಮನೆಯಲ್ಲಿ ಸಂತಸದ ವಾತಾವರಣ ಇರುತ್ತದೆ.ಹಣ್ಣು ಬೆಳೆದ ಕೃಷಿಕರಿಗೆ ಉತ್ತಮ ಲಾಭ ದೊರೆಯಲಿದೆ ಉತ್ಪನ್ನ ಮಾರಾಟಕ್ಕೆ ಸಕಾಲವಾಗಿದೆ.ಸೋಮವಾರ ಕೃಷಿ ಚಟುವಟಿಕೆ ಪ್ರಾರಂಭಿಸಬಹುದು.
###
ಮಿಥುನ
ಅಷ್ಟಮ ಶನಿ ವಕ್ರವಾಗಿರುವುದರಿಂದ ಮಾನಸಿಕ ಕಿರಿಕಿರಿಗೆ ಒಳಗಾಗುವಿರಿ ವಾಹನ ಸವಾರಿಯಲ್ಲಿ ಎಚ್ಚರವಿರಲಿ.ಹಣಕಾಸು ವ್ಯವಹಾರದಲ್ಲಿ ಹಿನ್ನಡೆಯಾಗಲಿದೆ.ಆಭರಣ ಖರೀದಿಯಲ್ಲಿ ಮೋಸ ಹೋಗಲಿದ್ದೀರಿ.ವ್ಯಾಪಾರಸ್ಥರಿಗೆ ಸಾಮಾನ್ಯವಾಗಿರುವ ಈ ವಾರ ಕಬ್ಬಿಣ,ವಿದ್ಯುತ್ ಉಪಕರಣಗಳ ಮಾರಾಟಗಾರರಿಗೆ ಲಾಭವಾಗಲಿದೆ.ಉದ್ಯೋಗಿಗಳಿಗೆ ಮೇಲಾಧಿಕಾರಿಗಳಿಂದ ತೊಂದರೆಯಾಗಲಿದೆ.ಕೃಷಿ ಉತ್ಪನ್ನ ಮಾರಾಟ ಬೇಡ.ಶುಕ್ರವಾರ
ಕೃಷಿ ಚಟುವಟಿಕೆ ಪ್ರಾರಂಭಿಸಬಹುದು.
###
ಕರ್ಕಾಟಕ
ತಾನಾಗಿ ಸರಿ ಹೋಗುತ್ತದೆ ಎನ್ನುವ ನಿಮ್ಮಮನೋಭಾವನೆಯನ್ನು
ಕೈಬಿಡಿ ಪ್ರಯತ್ನ ಮಾಡಿದರೆ ಮಾತ್ರ ಫಲ ಸಿಗಲಿದೆ.ನಿಮ್ಮ ಸಂಪೂರ್ಣ ಶಕ್ತಿ ವಿನಿಯೊಗಿಸಿದರೆ ಈ ವಾರ ಉತ್ತಮ ಫಲ ದೊರಕಲಿದೆ.ಉದ್ಯೋಗಿಗಳಿಗೆ ಬಡ್ತಿ ದೊರೆಯಲಿದೆ.ಧಾನ್ಯ ವ್ಯಾಪಾರಿಗಳಿಗೆ ಉತ್ತಮ ಲಾಭ ದೊರೆಯಲಿದೆ.ಕೃಷಿಕರು ತಮ್ಮ ಉತ್ಪನ್ನ ಮಾರುಕಟ್ಟೆಗೆ ತರಬಹುದು ಸೋಮವಾರ ಕೃಷಿಚಟುವಟಿಕೆ ಪ್ರಾರಂಭಿಸುವುದು ಉತ್ತಮ.
###
ಸಿಂಹ
ಕಡಿದು ಹೋದ ಸಂಬಂಧವೊಂದು ಮತ್ತೆ ಬೆಸೆಯಲಿದೆ ಭವಿಷ್ಯದಲ್ಲಿ ಇದರಿಂದ ಅನುಕೂಲವಾಗಲಿದೆ.ಆಬರಣ ಖರೀದಿಯ ಜೊತೆಗೆ ಬಂಧುಗಳ ಆಗಮನವಾಗಲಿದೆ ಆದಾಯ ಬರುವುದರ ಜೊತೆಗೆ ಖರ್ಚು ಹೆಚ್ಚಾಗಲಿದೆ.ದ್ರವ ಪದಾರ್ಥದ ವ್ಯಾಪಾರಿಗಳಿಗೆ ಉತ್ತಮ ಲಾಭ ದೊರೆಯಲಿದೆ.ಹಣ್ಣು,ಧಾನ್ಯ ಬೆಳೆಯುವ ಕೃಷಿಕರು ಈ ವಾರವೇ ಮಾರುಕಟ್ಟೆಗೆ ಹಾಕುವುದು ಒಳ್ಳೆಯದು ಮಂಗಳವಾರ ಕೃಷಿಚಟುವಟಿಕೆ ಪ್ರಾರಂಭಿಸುವುದು ಉತ್ತಮ
###
ಕನ್ಯಾ
ಪಂಚಮ ಶನಿ ಮಾನಸಿಕ ಕಿರಿಕಿರಿಯನ್ನು ಹೆಚ್ಚು ಮಾಡುತ್ತಿದ್ದು
ಗುರು ಪಂಚಮದಲ್ಲಿದ್ದರೂ ವಕ್ರವಾಗಿರುವುದರಿಂದ ಪ್ರಯೋಜನವಾಗುತ್ತಿಲ್ಲ.ದುಷ್ಟ ದೃಷ್ಟಿಗಳು ನಿಮ್ಮನ್ನು ಹಿಂಬಾಲಿಸುತ್ತಿರುವುದರಿಂದ ನಿರೀಕ್ಷಿಸಿದ ಕೆಲಸಗಳು ಆಗುತ್ತಿಲ್ಲ
ತಾಳ್ಮೆಯಿಂದ ವ್ಯವಹರಿಸಿದರೆ ಒಂದಿಷ್ಟು ನೆಮ್ಮದಿ ಪಡೆಯುತ್ತೀರಿ
ವ್ಯಾಪಾರಿಗಳಿಗೆ ಸಾಮಾನ್ಯವಾಗಿರುವ ಈ ವಾರ ಕಬ್ಬಿಣದ ವ್ಯಾಪಾರಿಗಳಿಗೆ ಅನುಕೂಲವಾಗಲಿದೆ.ಧಾನ್ಯ ಬೆಳೆಯುವ ಕೃಷಿಕರು ತಮ್ಮ ಉತ್ಪನ್ನ ಮಾರುಕಟ್ಟೆಗೆ ತರಬಹುದು
ರವಿವಾರ ಕೃಷಿ ಚಟುವಟಿಕೆ ಪ್ರಾರಂಭಿಸಬಹುದು
###
ತುಲಾ
ವೃಥಾ ಖರ್ಚುಗಳು ಹೆಚ್ಚಾಗುವುದರ ಜೊತೆಗೆ ಆದಾಯ ಕುಂಠಿತವಾಗುವುದು.ಇದರಿಂದ ಅಶಾಂತಿ ಹೆಚ್ಚಲಿದೆ.ಬಹುದಿನದ ಕನಸೊಂದು ಈಡೇರುವ ಸಾಧ್ಯತೆ ಇದೆ.ಉದ್ಯೋಗಿಗಳಿಗೆ ಶುಭ ಸುದ್ದಿಯೊಂದು ಬರಲಿದ್ದು ಅನಿರೀಕ್ಷಿತ ಧನ ದೊರೆಯಲಿದೆ
ಬಟ್ಟೆ ವ್ಯಾಪಾರಿಗಳಿಗೆ ಉತ್ತಮ ವ್ಯಾಪಾರವಾಗುವುದರ ಜೊತೆಗೆ ಉತ್ತಮ ಲಾಭವನ್ನೂ ಪಡೆಯಲಿದ್ದೀರಿ.ತರಕಾರಿ,ಹಣ್ಣು ಬೆಳೆದ ಕೃಷಿಕರು ಮಾರುಕಟ್ಟೆಗೆ ತರಬಹುದು.ಗುರುವಾರ ಕೃಷಿಚಟುವಟಿಕೆ
ಪ್ರಾರಂಭಿಸುವುದು ಉತ್ತಮ.
###
ವೃಶ್ಚಿಕ
ಹೊಟ್ಟೆ ನೋವು ಬಾಧಿಸಲಿರುವುದರಿಂದ ಆಹಾರ ಸೇವನೆಯಲ್ಲಿ ಎಚ್ಚರವಿರಲಿ.ಹಣಕಾಸು ವ್ಯವಹಾರ ಸರಾಗವಾಗುವುದರ ಜೊತೆಗೆ ಹೊಸ ಕೆಲಸದ ಸಾಧ್ಯತೆ ಇದೆ.ವ್ಯಾಪಾರಸ್ಥರಿಗೆ ಉತದತಮವಾಗಿರುವ ಈ ವಾರ ಧಾನ್ಯ ಮತ್ತು ಬೀಜ ವ್ಯಾಪಾರಿಗಳಿಗೆ ಉತ್ತಮ ಲಾಭ ದೊರಕಲಿದೆ.ಕೃಷಿಕರು ತಮ್ಮ ಉತ್ಪನ್ನ ಮಾರುಕಟ್ಟೆಗೆ ತರಬಹುದು.ಬುಧವಾರ ಕೃಷಿಚಟುವಟಿಕೆ ಪ್ರಾರಂಭಕ್ಕೆ ಉತ್ತಮ ದಿನ
###
ಧನಸ್ಸು
ಬಹುನಿರೀಕ್ಷಿತ ಕಾರ್ಯವೊಂದು ಸರಾಗವಾಗಿ ನಡೆಯಲಿದೆ.
ಹಣಕಾಸು ವ್ಯವಹಾರದಲ್ಲಿ ಒಂದಿಷ್ಟು ಹಿನ್ನಡೆಯಾದರೂ ವಾರದ ಮಧ್ಯದಲ್ಲಿ ಚೇತರಿಸಿಕೊಳ್ಳಲಿದೆ.ವ್ಯಾಪಾರಸ್ಥರಿಗೆ ಉತ್ತಮ ಅವಕಾಶವಿದೆ ಬಟ್ಟೆ,ಹಣ್ಣು,ತರಕಾರಿ ವ್ಯಾಪಾರಸ್ಥರು ಉತ್ತಮ ಲಾಭ ಹೊಂದಲಿದ್ದಾರೆ ಕೃಷಿಕರು ಉತ್ಪನ್ನ ಮಾರುಕಟ್ಟೆಗೆ ಹಾಕುವುದರಿಂದ ನಿರೀಕ್ಷೆಗಿಂತ ಹೆಚ್ಚು ಲಾಭಗಳಿಸಲಿದ್ದೀರಿ
ಗುರುವಾರ ಕೃಷಿಚಟುವಟಿಕೆ ಪ್ರಾರಂಭಿಸುವುದು ಉತ್ತಮ
###
ಮಕರ
ಜನ್ಮ ಶನಿಯ ಜೊತೆಗೆ ಜನ್ಮ ಗುರುವೂ ಸೇರಿರುವುದರಿಂದ ಕೆಲಸ ಕಾರ್ಯಗಳಲ್ಲಿ ವಿಘ್ನ.ಹಣಕಾಸು ವ್ಯವಹಾರದಲ್ಲಿ ಎಚ್ಚರ ನಂಬಿದವರಿಂದ ಮೋಸ ಹೋಗುವ ಸಾಧ್ಯತೆ ಇದೆ.ಉದ್ಯೋಗಿಗಳಿಗೆ ಕಚೇರಿಯಲ್ಲಿ ಕಿರಿಕಿರಿ ದೊರೆಯಬೇಕಾದ ಬಡ್ತಿ ವಿಳಂಬವಾಗುವ ಸಾಧ್ಯತೆ.ವ್ಯಾಪಾರಿಗಳಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗಲಿದೆ.ಗೊಬ್ಬರ ವ್ಯಾಪಾರಸ್ಥರಿಗೆ ಒಂದಿಷ್ಟು ಲಾಭ ದೊರಕಲಿದೆ.ಕೃಷಿಕರು ಉತ್ಪನ್ನ ಮಾರುಕಟ್ಟೆಗೆ ತರುವುದರಿಂದ ನಷ್ಟವಾಗಲಿದೆ.ಸೋಮವಾರ ಕೃಷಿಚಟುವಟಿಕೆ ಪ್ರಾರಂಭಿಸಬಹುದು.
###
ಕುಂಭ
ಆರೋಗ್ಯದಲ್ಲಿ ಏರುಪೇರಾಗಲಿದೆ ಇದರಿಂದ ಹಣದ ಖರ್ಚಿನ ಜೊತೆಗೆ ಮಾನಸಿಕವಾಗಿ ಬಳಲಲಿದ್ದಿರಿ.ಉದ್ಯೋಗದಲ್ಲಿ ಮೇಲಾಧಿಕಾರಿಗಳಿಂದ ಪ್ರಶಂಸೆ ಪಡೆಯಲಿದ್ದಿರಿ.ಬಹುದಿನದಿಂದ ಬರಬೇಕಾಗಿದ್ದ ಹಣ ಕೈಸೇರಲಿದೆ.ಆಭರಣಗಳ ಖರೀದಿ ಮಾಡಲಿದ್ದಿರಿ.ಗೃಹೋಪಯೋಗಿ ವ್ಯಾಪಾರಸ್ಥರಿಗೆ ಉತ್ತಮ ಲಾಭವಾಗಲಿದೆ.ತರಕಾರಿ ಬೆಳೆದ ಕೃಷಿಕರು ಬೆಳೆಯನ್ನು ಮಾರುಕಟ್ಟೆಗೆ ತರಬಹುದು.ಶುಕ್ರವಾರ ಕೃಷಿಚಟುವಟಿಕೆ ಪ್ರಾರಂಭಿಸುವುದು ಉತ್ತಮ
###
ಮೀನ
ನಿರಂತರ ಉತ್ತಮ ಫಲ ಪಡೆಯುತ್ತಿರುವ ನೀವು ಆರೋಗ್ಯದ ಕಡೆಗೆ ಎಚ್ಚರಿಕೆವಹಿಸಬೇಕು ಎದೆ ಮತ್ತು ಹೊಟ್ಟೆ ನೋವು ನಿಮ್ಮನ್ನು ಕಾಡಲಿದೆ.ಹಣಕಾಸು ವ್ಯವಹಾರ ಉತ್ತಮವಾಗಿರುವುದು.ವ್ಯಾಪಾರಸ್ಥರಿಗೆ ಉತ್ತಮ ಅವಕಾಶವಿದೆ ಬಟ್ಟೆ ವ್ಯಾಪಾರಸ್ಥರಿಗೆ ಹೆಚ್ಚಿನ ಲಾಭ ದೊರೆಯಲಿದೆ ಉದ್ಯೋಗಿಗಳಿಗೆ ಬಡ್ತಿ ದೊರೆಯಲಿದೆ.ಕೃಷಿಕರು ಬೆಳೆಯನ್ನು ಮಾರುಕಟ್ಟೆಗೆ ತರುವುದರಿಂದ ಲಾಭಗಳಿಸಲಿದ್ದಾರೆ.
ರವಿವಾರ ಕೃಷಿಚಟುವಟಿಕೆ ಪ್ರಾರಂಭಿಸುವುದು ಉತ್ತಮ
,👍