ಆದ್ಯೋತ್ ಸುದ್ದಿನಿಧಿ:
ಸಿದ್ದಾಪುರ ತಾಲೂಕಿನ ಪಶುಸಂಗೋಪನಾ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದ ಡಾ.ನಂದಕುಮಾರ ಪೈ ಉಪನಿರ್ದೇಶಕರು ಪಶುಸಂಗೋಪನಾ ಇಲಾಖೆ ಕಾರವಾರಕ್ಕೆ ಪದೋನ್ನತಿ ಹೊಂದಿರುತ್ತಾರೆ.
ಅದೇ ರೀತಿ ಸಿದ್ದಾಪುರ ಕೃಷಿಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿ ಸೇವೆಸಲ್ಲಿಸುತ್ತಿದ್ದ ದೇವರಾಜ ಆರ್.ಇವರು ಕರ್ನಾಟಕ ಲೋಕಸೇವಾ ಆಯೋಗದಿಂದ ನಡೆಸಲಾದ ಕೆ.ಎ.ಎಸ್.ಪರೀಕ್ಷೆಯಲ್ಲಿ ಅಸಿಸ್ಟೆಂಟ್ ಕಮಿಷನರ್ ಹುದ್ದೆಗೆ ಆಯ್ಕೆಯಾಗಿರುತ್ತಾರೆ
ಈ ಎರಡೂ ಅಧಿಕಾರಿಗಳಿಗೆ ಸಿದ್ದಾಪುರ ರಾಜ್ಯಸರಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಪ್ರಶಾಂತ ಜಿ.ಎಸ್ ಅಧ್ಯಕ್ಷ ರಾಜೇಶ ಆರ್.ನಾಯ್ಕ, ರಾಜ್ಯಪರಿಷತ್ ಸದಸ್ಯ ಯಶವಂತ ಅಪ್ಪಿನಬೈಲ್ ಹಾಗೂ ಪದಾಧಿಕಾರಿಗಳು,ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ
——-
ಜಿಲ್ಲಾ ಕೈಗಾರಿಕಾ ಇಲಾಖೆಯಿಂದ ಸಿದ್ದಾಪುರ ತಾಲೂಕಿನ ಆಯ್ದ
ಫಲಾನುಭವಿಗಳಿಗೆ ಹೊಲಿಗೆ ಯಂತ್ರ ಹಾಗೂ ಬಡಗಿ ಕೆಲಸದ ಕಿಟ್ ವಿತರಿಸಲಾಯಿತು.
ಸೋಮವಾರ ತಾಲೂಕುಪಂಚಾಯತ್ ಸಭಾಭವನದಲ್ಲಿ ನಡೆದ ವಿತರಣಾ ಕಾರ್ಯಕ್ರಮದಲ್ಲಿ ಜಿಲ್ಲಾಪಂಚಾಯತ್ ಸದಸ್ಯ ನಾಗರಾಜ ನಾಯ್ಕ ಬೇಡ್ಕಣಿ,ಎಂ.ಜಿ.ಹೆಗಡೆ ಗೆಜ್ಜೆ,ತಾಲೂಕುಪಂಚಾಯತ್ ಅಧ್ಯಕ್ಷ ಸುಧೀರ್ ಗೌಡರ,ಉಪಾಧ್ಯಕ್ಷೆ ದಾಕ್ಷಾಯಣಿ ಗೌಡ ಉಪಸ್ಥಿತರಿದ್ದರು