ಆದ್ಯೋತ್ :ಇಂದಿನ ಸುದ್ದಿ

ಆದ್ಯೋತ್ ಸುದ್ದಿನಿಧಿ
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಿಕರ ಕಲ್ಯಾಣ ಮಂಡಳಿಯಿಂದ ಕೋವಿಡ್-19 ರ ಸಂದರ್ಭದಲ್ಲಿ ಸರ್ಕಾರ ನೋಂದಾಯಿತ ಕಾರ್ಮಿಕರಿಗೆ ಆರ್ಥಿಕ ಸಹಾಯ ಘೋಷಿಸಿ 10 ತಿಂಗಳುಗಳು ಆದರೂ ಇಂದಿನವರೆಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಮಾರು 30 ಸಾವಿರ ಕಾರ್ಮಿಕರಿಗೆ ಹಣ ಸಂದಾಯವಾಗಿಲ್ಲ. ತಕ್ಷಣ ಸಹಾಯಧನ ಬಿಡುಗಡೆ ಮಾಡಬೇಕು ಎಂದು ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ ಆಗ್ರಹಿಸಿದ್ದಾರೆ

,ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ಸಕಾಲದಲ್ಲಿ ಆಥಿಕ ನೆರವು ಸಿಗದಿರುವುದು ವಿಷಾದಕರ. ಶ್ರಮಜೀವಿಗಳಾದ ಕಾರ್ಮಿಕರಿಗೆ ಸ್ಪಂದಿಸುವ ದಿಸೆಯಲ್ಲಿ ಸರ್ಕಾರ ಕಾರ್ಮಿಕರ ಪರವಾದ ನಿಲುವನ್ನು ತೆಗೆದುಕೊಳ್ಳುವುದು ಅತಿ ಅವಶ್ಯವಿದೆ. ಇಲ್ಲದಿದ್ದಲ್ಲಿ , ಜಿಲ್ಲಾದ್ಯಂತ ನೊಂದ ಕಾರ್ಮಿಕರು ಕಾರ್ಮಿಕ ಇಲಾಖೆಯ ವಿರುದ್ಧ ತೀವೃ ಪ್ರತಿಭಟನೆ ಜರುಗಿಸುವುದು ಅನಿವಾರ್ಯವಾಗುವುದು ಎಂದು ಎಚ್ಚರಿಸಿದ್ದಾರೆ
###
ಒಡ್ಡೋಲಗ ರಂಗಪರ್ಯಟನ-2020-21
ದಿ.3 ಬುಧವಾರ ಶಂಕರಮಠದಲ್ಲಿ ಸೀತಾಸ್ವಯಂವರ ನಾಟಕ ಪ್ರದರ್ಶನ
ಒಡ್ಡೋಲಗ ಸಂಸ್ಥೆಯು ತನ್ನ 2020-21ನೇ ಸಾಲಿನ ರಂಗಪರ್ಯಟನೆಯನ್ನು ಬುಧವಾರ ಪಟ್ಟಣದ ಹೊಸೂರು ಶಂಕರಮಠದಲ್ಲಿ ಸೀತಾಸ್ವಯಂವರ ನಾಟಕವನ್ನು ಪ್ರದರ್ಶಿಸುವ ಮೂಲಕ ಪ್ರಾರಂಭಿಸಲಿದೆ ಎಂದು ಒಡ್ಡೋಲಗ ಸಂಸ್ಥೆಯ ಗಣಪತಿ ಹೆಗಡೆ ಹಿತ್ಲಕೈ ಹೇಳಿದರು.

ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಎಂ.ಎಲ್.ಶ್ರೀಕಂಠೇಗೌಡರ್ ಸೀತಾಸ್ವಯಂವರ ನಾಟಕವನ್ನು ಈ ಬಾರಿಯ ರಂಗಪರ್ಯಟನೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ ಹೊಸಕಲಾವಿದರನ್ನು ಸೇರಿಸಿಕೊಂಡು ನಾಟಕದ ಪ್ರದರ್ಶನಕ್ಕೆ ಸಜ್ಜಾಗಿದ್ದೇವೆ ಕಳೆದ ವರ್ಷ ನಮ್ಮ ರಂಗಪರ್ಯಟನೆಗೆ ಜಯಂತಕಾಯ್ಕಿಣಿಯವರ ಸುಗ್ಗಿ ಮತ್ತು ಕೋಮಲಗಾಂಧಾರ ನಾಟಕವನ್ನು ಆಯ್ಕೆ ಮಾಡಿಕೊಂಡು ವ್ಯವಸ್ಥಿತವಾಗಿ ತಯಾರಿಸಿಕೊಂಡು ರಂಗ ಪರ್ಯಟನೆ ಪ್ರಾರಂಭಿಸಲಾಗಿತ್ತು ಪ್ರಾರಂಭಿಕ ಎರಡು ಪ್ರದರ್ಶನವನ್ನು ಮಾಡಿದ್ದೇವು ಆದರೆ ನಂತರ ಆಕ್ರಮಿಸಿದ ಕೋವಿಡ್‍ನಿಮದಾಗಿ ಪರ್ಯಟನೆ ಮುಂದುವರಿಸಲು ಸಾದ್ಯವಾಗಲಿಲ್ಲ ಈ ಬಾರಿ ಈ ನಾಟಕವನ್ನು ಸೀಮಿತ ಅವಧಿಗೆ ಪ್ರದರ್ಶಿಸಲಾಗುವುದು ಎಂದು ಹೇಳಿದ ಗಣಪತಿ ಹೆಗಡೆ, ನಾಟಕ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಶಿರಸಿ ಸಹಾಯ ಆಯುಕ್ತ ಆಕೃತಿ ಬನ್ಸಾಲ್,ಶಿವಮೊಗ್ಗ ರಂಗಾಯಣ ನಿರ್ದೇಶಕ ಸಂದೇಶ ಜವಳಿ,ಶಂಕರಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ, ಹಿರಿಯ ರಂಗಕರ್ಮಿ ಪ್ರಮೋದ ಶಿಗ್ಗಾಂವ್ ಉಪಸ್ಥಿತರಿರುತ್ತಾರೆ ಎಂದು ಹೇಳಿದರು.
ಸೀತಾಸ್ವಯಂವರ ನಾಟಕವನ್ನು ನಿರ್ದೇಶಿಸುತ್ತಿರುವ ಪ್ರಮೋದ ಶಿಗ್ಗಾಂವ್ ಮಾತನಾಡಿ, ಶ್ರೀಕಂಠೇಗೌಡರ ಸಿತಾಸ್ವಯಂವರ ನಾಟಕ ವೃತ್ತಿ ರಂಗಭೂಮಿಗಾಗಿ ಬರೆದ ನಾಟಕವಾಗಿದ್ದು ಅದನ್ನು ಒಂದೂವರೆ ಗಮಟೆಗೆ ಸೀಮಿತಗೋಳಿಸಲಾಗಿದೆ ಇದು ರಾಜಹಾಸ್ಯವುಳ್ಳ ಉತ್ತಮ ನಾಟಕವಾಗಿದ್ದು ಇಲ್ಲಿಯ ಕಲಾವಿದರು ಉತ್ತಮವಾಗಿ ಅಭಿನಯಿಸುತ್ತಿದ್ದಾರೆ ಕಳೆದ ಒಂದು ತಿಂಗಳಿಂದ ನಾಟಕ ತರಬೆತಿ ನಡೆಯುತ್ತಿದ್ದು ಕೇವಲ ಅಭಿನಯಕ್ಕೆ ಸೀಮಿತಗೊಳಿಸದೆ ಅವರ ವೇಷಭೂಷಣವನ್ನು ಅವರೇ ತಯಾರಿಸಿಕೊಳ್ಳುವ ತರಬೆತಿಯನ್ನು ನೀಡಲಾಗಿದೆ ಈ ಮಣ್ಣಿನ ಕಲೆ ಯಕ್ಷಗಾನವು ಇಲ್ಲಿಯ ಜನರಲ್ಲಿ ಹಾಸುಹೊಕ್ಕಾಗಿದ್ದು ಕ್ಲಿಷ್ಟಕರವಾದ ನಾಟಕವನ್ನು ಸುಲಭವಾಗಿ ಅಭಿನಯಿಸುತ್ತಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವಿಜಯ ಹೆಗಡೆ ದೊಡ್ಮನೆ,ಗುರುಮೂರ್ತಿ ವರದಾಮೂಲ ಉಪಸ್ಥಿತರಿದ್ದರು.
###
ಸಹಕಾರಿ ಸಂಘ ಕಳ್ಳತನ ಮಾಡಿದ ಆರೋಪಿಗಳ ಬಂಧನ
ಕಳೆದ ನವಂಬರ -3 ರಂದು ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ
ಪಟ್ಟಣದ ಪ್ರಾಥಮಿಕ ಶಾಲಾ ಶಿಕ್ಷಕರ ಸೌಹಾರ್ದಸಹಕಾರಿ ಸಂಘದ ಕಿಟಕಿ ಗ್ರಿಲ್ ಮುರಿದು ಒಳಪ್ರವೇಶಿಸಿ 1.94ಲಕ್ಷರೂ. ದೋಚಿದ್ದ ಕಳ್ಳರಿಬ್ಬರನ್ನು ಸ್ಥಳೀಯ ಪೊಲೀಸ್‍ರು ಬಂಧಿಸಿದ್ದಾರೆ.
ಸಿದ್ದಾಪುರ ಕೊಂಡ್ಲಿಯ ಅಭಿಜಿತ ಗಣಪತಿ ಮಡಿವಾಳ ಹಾಗೂ ಹಾಳದಕಟ್ಟಾದ ಸಚಿನ ಷಣ್ಮುಖ ಮಡಗಾಂವಕರ ಬಂಧಿತ ಆರೋಪಿಗಳಾಗಿದ್ದು ಇವರಿಂದ 55 ಸಾವಿರರೂ. ಹಾಗೂ ಮೋಟಾರ್ ಸೈಕಲ್‍ನ್ನು ವಶಪಡಿಸಿಕೊಳ್ಳಲಾಗಿದೆ.

ಡಿವೈಎಸ್‍ಪಿ ರವಿ ನಾಯ್ಕ ಹಾಗೂ ಸಿಪಿಐ ಎನ್.ಮಹೇಶ ಮಾರ್ಗದರ್ಶನದಲ್ಲಿ ಪಿಎಸ್‍ಐ ಮಂಜೇಶ್ವರ ಚಂದಾವರ ಹಾಗೂ ಮಂಜುನಾಥ ಬಾರ್ಕಿ ಸಿಬ್ಬಂದಿಗಳಾದ ಗಂಗಾಧರ ಹೊಂಗಲ್,ರಮೇಶ ಕೂಡಲ್,ಪ್ರಕಾಶ ತಳವಾರ,ಕೊಟ್ರೇಶ ನಾಗರವಳ್ಳಿ,ರವಿ ಜಿ.ನಾಯ್ಕ,ಮೋಹನ ಗಾವಡಿ ಕಾಯಾಚರಣೆಯಲ್ಲಿ ಭಾಗವಹಿಸಿದ್ದರು.
###
ಸಿದ್ದಾಪುರದಲ್ಲಿ ಮಡಿವಾಳ ಮಾಚಿದೇವರ ಜಯಂತಿ ಆಚರಿಸಲಾಯಿತು
ಸಿದ್ದಾಪುರ ತಹಸೀಲ್ದಾರ ಕಚೇರಿಯಲ್ಲಿ ಸೋಮವಾರ
ವಚನ ರಕ್ಷಕ ಮಡಿವಾಳ ಮಾಚಿದೇವರ ಜಯಂತಿಯನ್ನು ತಾಲೂಕಾ ಆಡಳಿತದಿಂದ ಸರಳವಾಗಿ ಆಚರಿಸಲಾಯಿತು. ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ತಹಸೀಲ್ದಾರ ಮಂಜುಳಾ ಭಜಂತ್ರಿ ಪುಷ್ಪ ನಮನ ಸಲ್ಲಸಿದರು.

ಈ ಸಂದರ್ಭದಲ್ಲಿ ಮಡಿವಾಳ ಸಮಾಜದ ಮುಖಂಡರಾದ ತಿಮ್ಮಪ್ಪ ಎಂ.ಕೆ.,ಹೆರವಳ್ಳಿ ಸದಾನಂದ ಗೌಡ,ಕೃಷ್ಣ ಗೌಡ, ಮಂಜುನಾಥ ದಫೇದಾರ ಹೊಸೂರ ಇನ್ನಿತರರು ಹಾಜರ ಇದ್ದರು ನಾಗರಾಜ ನಾಯ್ಕಡ ಸ್ವಾಗತಿಸಿದರು. ಎನ್.ಆಯ್.ಗೌಡ ವಂದಿಸಿದರು

About the author

Adyot

Leave a Comment