ಆದ್ಯೋತ ಸುದ್ದಿನಿಧಿ:
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ.ಸಿದ್ದಾಪುರ.ವತಿಯಿಂದ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಆಕ್ಷೇಪಣೆಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಪ್ರಧಾನ ಕಾರ್ಯದರ್ಶಿಗಳು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಬೆಂಗಳೂರು ಇವರಿಗೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಸತೀಶ ಹೆಗಡೆ, ಕಾರ್ಯದರ್ಶಿಗಳಾದ ಗುರುರಾಜ ನಾಯ್ಕ, ಗೌರವಾಧ್ಯಕ್ಷರಾದ ಧರ್ಮಾ ನಾಯ್ಕ ಹಾಗೂ ನಾಗರಾಜ ಮಡಿವಾಳ, ಜಿ.ಜಿ.ಹೆಗಡೆ, ಬಸವರಾಜ ಕಡಪಟ್ಟಿ, ಪ್ರಕಾಶ ಬಿ.ಜಿ., ನಮೃತಾ ಪೈ, ನಾಗರಾಜ ನಾಯ್ಕ, ಜಿ.ಆರ್.ಹೆಗಡೆ ಇತರ ಪದವೀಧರ ಶಿಕ್ಷಕರು ಉಪಸ್ಥಿತರಿದ್ದರು.
###
ರೈತರ ಹಕ್ಕು ರಕ್ಷಿಸಲು,ಬ್ರಷ್ಟ ಅಧಿಕಾರಿಗಳನ್ನು ಸರಿದಾರಿಗೆ ತರಲು ರೈತ ಸಂಘಟನೆ ಅವಶ್ಯಕ
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಹಾರ್ಸಿಕಟ್ಟಾದಲ್ಲಿ ರೈತ ಮಹಿಳಾ ಜಾಗೂ ಸ್ವಸಹಾಯ ಮಹಿಳಾಸಂಘಗಳ ಸಮಾವೇಶ ಹಾಗೂ ವಿಚಾರಗೋಷ್ಠಿ ನಡೆಯಿತು
ಕಾರ್ಯಕ್ರಮ ಉದ್ಘಾಟಿಸಿದ ರೈತಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ ವೀರಭದ್ರ ನಾಯ್ಕ ಮಾತನಾಡಿ,
ರೈತ ಸಂಘಟನೆ ಇರುವುದು ಹೋರಾಟಕ್ಕೆ ಮಾತ್ರ ಅಲ್ಲ. ಸರ್ಕಾರ ರೈತ ವಿರೋಧಿ ನೀತಿಯನ್ನು ಜಾರಿಗೆ ತಂದಾಗ,ಅಧಿಕಾರಿಗಳು ಬ್ರಷ್ಠಾಚಾರ ಮಾಡಿದರೆ ಅದನ್ನು ವಿರೋಧಿಸಿ ಅವರನ್ನು ಸರಿ ದಾರಿಗೆ ತರಲು ಹಾಗೂ ಪ್ರತಿಯೊಬ್ಬ ರೈತನಿಗೆ ಸರ್ಕಾರದ ಸೌಲಭ್ಯವನ್ನು ಕೊಡಿಸುವುದಕ್ಕೆ ರೈತ ಸಂಘಟನೆ ಅವಶ್ಯಕ ಎಂದು ಹೇಳಿದರು.
ತಹಸೀಲ್ದಾರ ಮಂಜುಳಾ ಎಸ್.ಭಜಂತ್ರಿ ಮಾತನಾಡಿ ಮಹಿಳೆಯರಿಗೆ ಸಮಾಜದಲ್ಲಿ ವಿಶೇಷವಾದ ಸ್ಥಾನಮಾನ ಇದೆ. ಪ್ರತಿಯೊಬ್ಬ ಮಹಿಳೆ ಶಿಕ್ಷಣ ಪಡೆಯುವುದರೊಂದಿಗೆ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡುವುದಕ್ಕೆ ಮುಂದಾಗಬೇಕು. ಸಿದ್ದಾಪುರ ತಾಲೂಕಿನ ಮಹಿಳೆಯರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು ಎಂದು ಸ್ಮರಿಸಿದರು.
ಅಣಲೇಬೈಲ್ ಕ್ಷೇತ್ರದ ರೈತ ಸಂಘದ ಮಹಿಳಾಮೋರ್ಚ ಅಧ್ಯಕ್ಷೆ ಹೇಮಾವತಿ ದೇಸಾಯಿ ಗೌಡರ್ ಅಧ್ಯಕ್ಷತೆವಹಿಸಿದ್ದರು.
ಯಮುನಾ ಗಾಂವಕರ್, ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಪಿ.ವಿ.ನಾಯ್ಕ ಬೇಡ್ಕಣಿ,ಅಘನಾಶಿನಿ ಸಾಂಬಾರು ಮಂಡಳಿ ಅಧ್ಯಕ್ಷ ಎಸ್.ಆರ್.ಹೆಗಡೆ ಕುಂಬಾರಕುಳಿ,ತಾಲೂಕು ರೈತ ಮಹಿಳಾ ಮೋರ್ಚ ಅಧ್ಯಕ್ಷೆ ಸುಧಾ ಹೆಗಡೆ,ಗ್ರಾಪಂ ಸದಸ್ಯರಾದ ಆರ್.ಕೆ.ನಾಯ್ಕ,ಶಾಂತಕುಮಾರ ಪಾಟೀಲ್,ನಿವೃತ್ತ ಶಿಕ್ಷಕ ಕೆ.ಟಿ.ನಾಯ್ಕ, ಸುರೇಶ ನಾಯ್ಕ ತೆಂಗಿನಮನೆ, ತಿಮ್ಮಣ್ಣ ಬಿ.ನಾಯ್ಕ, ಎಂ.ಸಿ.ನಾಯ್ಕ ಇತರರಿದ್ದರು.
ತೋಟಗಾರಿಕಾ ಬೆಳೆಗಳು ಮತ್ತು ಇಲಾಖೆ ಯೋಜನೆ ಕುರಿತು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಅರುಣ ಎಚ್.ಜಿ,ಆಹಾರ ಬೆಳೆಗಳು ಹಾಗೂ ಕೃಷಿ ಇಲಾಖೆ ಮಾಹಿತಿ ಕುರಿತು ಸಹಾಯಕ ಕೃಷಿ ನಿರ್ದೇಶಕಿ ಎಸ್.ಎಂ.ಸುಮಾ, ಮಹಿಳೆ ಮತ್ತು ಶಿಕ್ಷಣದ ಕುರಿತು ಉಪನ್ಯಾಸಕ ಎನ್.ಟಿ.ನಾಯ್ಕ ಹಾಗೂ ರಾಷ್ಟ್ರೀಯ ಜೀವನೋಪಾಯ ಸಂವರ್ಧನ ಸಂಸ್ಥೆ ಯೋಜನೆ ಕುರಿತು ಮಾಲತಿ ನಾಯ್ಕ ಮಾತನಾಡಿದರು.
ಇದೇ ಸಂದರ್ಭದಲ್ಲಿ ರೈತರ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ತಹಸೀಲ್ದಾರ ಮಂಜುಳಾ ಭಜಂತ್ರಿ ಅವರ ಮೂಲಕ ಮುಖ್ಯಮಂತ್ರಿಯವರಿಗೆ
ಮನವಿ ನೀಡಲಾಯಿತು.
ಪಿ.ವಿ.ಹೆಗಡೆ ಹೊಸಗದ್ದೆ, ರೇಖಾ ಹೆಗಡೆ ಹೊಂಡಗಾಸಿಗೆ, ಅರ್ಚನಾ ನಾಯ್ಕ ತೆಂಗಿನಮನೆ ಕಾರ್ಯಕ್ರಮ ನಿರ್ವಹಿಸಿದರು.