ಆದ್ಯೋತ: ಇಂದಿನ ಸುದ್ದಿ

ಪ್ರಾಥಮಿಕ ಶಾಲಾ ಶಿಕ್ಷಕರ ಸೌಹಾರ್ದ ಸಹಕಾರಿ ಶಾಖೆಗೆ ಸೂಕ್ತ ಬಂದೋಬಸ್ತ ಮಾಡಲಾಗಿದೆ
ಕಳೆದ ನವಂಬರ್ ತಿಂಗಳಲ್ಲಿ ನಮ್ಮ ಸೌಹಾರ್ದ ಸಹಕಾರಿ ಸಿದ್ದಾಪುರ ಶಾಖೆಯ ಕಳ್ಳತನವಾಗಿದ್ದು ಈಗ ಸ್ಥಳೀಯ ಪೊಲೀಸ್‍ರು ಕಳ್ಳರನ್ನು ಬಂಧಿಸುವ ಮೂಲಕ ನಮ್ಮ ಶಿಕ್ಷಕ ಸದಸ್ಯರ ನೆಮ್ಮದಿಗೆ ಕಾರಣವಾಗಿದ್ದಲ್ಲದೆ ಪಟ್ಟಣದ ಜನರಲ್ಲೂ ವಿಶ್ವಾಸ ತುಂಬುವ ಕೆಲಸ ಮಾಡಿದ್ದಾರೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸೌಹಾರ್ದ ಸಹಕಾರಿ ತೀರ್ಥಹಳ್ಳಿಯ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ ಹೇಳಿದರು.

ಅವರು ಮಂಗಳವಾರ ಪಟ್ಟಣದ ಸೌಹಾರ್ದ ಸಹಕಾರಿ ಸ್ಥಳೀಯ ಶಾಖೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಸಿದ್ದಾಪುರದಲ್ಲಿ ಶಾಖೆ ಪ್ರಾರಂಭವಾಗಿ ಸೂಕ್ತ ಬಂದೋಬಸ್ತ ವ್ಯವಸ್ಥೆ ಮಾಡುವಷ್ಟರಲ್ಲಿ ಕೊವಿಡ್ ಕಾಣಿಸಿಕೊಂಡು ಯಾವುದೇ ವ್ಯವಸ್ಥೆ ಮಾಡಲು ಸಾಧ್ಯವಾಗಿರಲಿಲ್ಲ ಇದೇ ಅವಕಾಶವನ್ನು ಉಪಯೋಗಿಸಿಕೊಂಡು ಕಳ್ಳರು ನಮ್ಮ ಶಾಖೆಯಲ್ಲಿ ಕಳ್ಳತನ ನಡೆಸಿದ್ದರು ಆದರೆ ಈಗ ಸಿಸಿ ಕ್ಯಾಮರಾ ಅಳವಡಿಸುವುದು ಸೇರಿದಂತೆ ಸೂಕ್ತ ಬಂದೋಬಸ್ತ ಮಾಡಲಾಗಿದೆ. ಹಾಲಿ ಆರು ಜಿಲ್ಲೆಗಳಲ್ಲಿ ನಮ್ಮ ಸೌಹಾರ್ದ ಶಾಖೆ ಪ್ರಾರಂಭಿಸಲಾಗಿತ್ತು ಈಗ ಈಡೀ ರಾಜ್ಯಾದ್ಯಂತ ನಮ್ಮ ಶಾಖೆಗಳನ್ನು ಪ್ರಾರಂಭಿಸಲಾಗುತ್ತಿದ್ದು ಉ.ಕ.ಜಿಲ್ಲೆಯ ಕುಮಟಾ ಮತ್ತು ದಾಂಡೇಲಿಯಲ್ಲಿ ಸದ್ಯದಲ್ಲೆ ಹೊಸ ಶಾಖೆ ಪ್ರಾರಂಭವಾಗಲಿದೆ. ಸಿದ್ದಾಪುರ ಶಾಖೆ ಉತ್ತಮವಾಗಿ ನಡೆಯುತ್ತಿದ್ದು 10ಕೋಟಿರೂ. ಸಾಲ ವಿತರಿಸಲಾಗಿದೆ ಅಲ್ಲದೆ ಸುಮಾರು 40ಕೋಟಿರೂ. ವ್ಯವಹಾರ ಮಾಡಲಾಗಿದೆ ಸಾಲ ಸೌಲಭ್ಯ ಶಿಕ್ಷರಿಗೆ ಮಾತ್ರ ಸೀಮಿತಗೊಳಿಸಲಾಗಿದ್ದು ಉಳಿದ ವ್ಯವಹಾರಕ್ಕೆ ಎಲ್ಲರಿಗೂ ಅವಕಾಶವಿದೆ ಸದಸ್ಯತ್ವವೂ ಶಿಕ್ಷಕರಿಗೆ ಮಾತ್ರ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಇದರ ಜೊತೆಗೆ ಸೌಹಾರ್ದದ ಅಂಗವಾಗಿ ಶಿಕ್ಷಕರ ಗೃಹನಿರ್ಮಾಣ ಮಂಡಳಿಯನ್ನು ಪ್ರಾರಂಭಿಸಲಾಗುತ್ತಿದೆ ಶಿವಮೊಗ್ಗ,ಸಾಗರ,ತೀರ್ಥಹಳ್ಳಿ ಸೇರಿದಂತೆ ಬೇರೆ ಬೇರೆ ಕಡೆಗೆ ಶಿಕ್ಷಕರಿಗಾಗಿ ವಸತಿ ಉದ್ದೇಶದಿಂದ ಸೈಟ್ ನೀಡಲಾಗುವುದು ಸದಸ್ಯರಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಮಹಾಬಲೇಶ್ವರ ಹೆಗಡೆ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಸತೀಶ ಹೆಗಡೆ,ಜನಾರ್ದನ ಗೌಡ,ಜಿ.ಆರ್.ಹೆಗಡೆ,ಜಿ.ಜಿ.ಹೆಗಡೆ ಉಪಸ್ಥಿತರಿದ್ದರು.
###
ಹಾರ್ಸಿಕಟ್ಟಾ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಮಹಾಬಲೇಶ್ವರ ಭಟ್ಟ.ಉಪಾಧ್ಯಕ್ಷರಾಗಿ ಇಂದಿರಾ ಹೆಗಡೆ ಆಯ್ಕೆ
ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾ ವ್ಯವಸಾಯ ಸೇವಾ ಸಹಕಾರಿ ಸಂಘದ ಮುಂದಿನ ಐದು ವರ್ಷದ ಅವಧಿಗೆ ಅಧ್ಯಕ್ಷರಾಗಿ ಮಹಾಬಲೇಶ್ವರ ದೇವರು ಭಟ್ಟ ಅಗ್ಗೆರೆ ಹಾಗೂ ಉಪಾಧ್ಯಕ್ಷರಾಗಿ ಇಂದಿರಾ ಗಜಾನನ ಹೆಗಡೆ ಹಾರ್ಸಿಕಟ್ಟಾ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.


ಸೋಮವಾರ ಸಂಘದ ಕಚೇರಿಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆ
ಯಲ್ಲಿ ಆಡಳಿತ ಮಂಡಳಿ ನಿರ್ದೇಶಕರಾದ ಅನಂತ ವಿಘ್ನೇಶ್ವರ ಹೆಗಡೆ ಗೊಂಟನಾಳ,ಅನಂತ ಸುಬ್ರಾಯ ಹೆಗಡೆ ಹೊಸಗದ್ದೆ, ಅಶೋಕ ರಾಮಚಂದ್ರ ಹೆಗಡೆ ಹೀನಗಾರ, ನಾಗರಾಜ ಶೇಷಗಿರಿ ಹೆಗಡೆ ಹುಲಿಮನೆ, ಮಂಜುನಾಥ ಕೃಷ್ಣ ನಾಯ್ಕ ತೆಂಗಿನಮನೆ, ವಿಘ್ನೇಶ್ವರ ಹನುಮಂತ ಗೌಡ ಮಾದ್ಲಮನೆ, ಸುಮಾ ಮಂಜುನಾಥ ಹೆಗಡೆ ಹೊನ್ನೆಹದ್ದ, ನಾಗರಾಜ ಬಂಗಾರೇಶ್ವರ ಹೆಗಡೆ ಹೊಲಗದ್ದೆ, ಸುಧಾಕರ ಗಣಪ ಹರಿಜನ ಹೊನ್ನೆಹದ್ದ ಉಪಸ್ಥಿತರಿದ್ದರು. ಚುನಾವಣಾಧಿಕಾರಿ ಆಗಿ ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಶಿವಕುಮಾರ ಸಿ.ಜಿ. ಕಾರ್ಯನಿರ್ವಹಿಸಿದ್ದರು.
###

About the author

Adyot

Leave a Comment