ಆದ್ಯೋತ: ಇಂದಿನ ಸುದ್ದಿ

ಆದ್ಯೋತ್ ಸುದ್ದಿನಿಧಿ
ಉತ್ತರಕನ್ನಡ ಜಿಲ್ಲೆ ಸಿದ್ದಾಪುರ ಹೊಸೂರು ಶಂಕರಮಠದಲ್ಲಿ ಬುಧವಾರ ಸ್ಥಳೀಯ ಒಡ್ಡೋಲಗ ಸಂಸ್ಥೆಯ ರಂಗಪರ್ಯಟನ 2020-21ರ ನಾಟಕ ಸೀತಾ ಸ್ವಯಂವರದ ಪ್ರಥಮ ಪ್ರದರ್ಶನದ ಉದ್ಘಾಟನೆ ನಡೆಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿಜಯ ಹೆಗಡೆ ದೊಡ್ಮನೆ ಮಾತನಾಡಿ,ನಮ್ಮ ಸಂಸ್ಕøತಿಯಲ್ಲಿ ರಮಗಭೂಮಿಗೆ ತನ್ನದೇ ಆದ ಸ್ಥಾನವಿದೆ ಈಗಲೂ ಗ್ರಾಮೀಣ ಪ್ರದೇಶದಲ್ಲಿ ನಾಟಕ,ಯಕ್ಷಗಾನ ಪ್ರದರ್ಶನಗಳು ನಿರಂತರವಾಗಿ ನಡೆಯುತ್ತದೆ ಮತ್ತು ಸಾಕಷ್ಟು ಪ್ರೇಕ್ಷಕರು ಅದಕ್ಕಿರುತ್ತಾರೆ.ಇತ್ತೀಚಿನ ದಿನದಲ್ಲಿ ವೃತ್ತಿರಂಗಭೂಮಿ ಕ್ಷೀಣಿಸುತ್ತಿದೆ ಆದರೆ ಹವ್ಯಾಸಿ ರಂಗಭೂಮಿ ಸಮೃದ್ಧವಾಗಿ ಬೆಳೆಯುತ್ತಿದ್ದು ಸಿದ್ದಾಪುರದಲ್ಲಿ ಒಡ್ಡೋಲಗ ಸೇರಿದಂತೆ ಹಲವು ಸಂಘಟನೆಗಳು ರಂಗಭೂಮಿ ಬೆಳೆಸುವಲ್ಲಿ ತಮ್ಮದೇ ಆದ ಕೊಡುಗೆ ನೀಡುತ್ತಿವೆ ಎಂದು ಹೇಳಿದರು.
ಹಿರಿಯ ನಾಟಕ ನಿರ್ದೇಶಕ ಪ್ರಮೋದ ಶಿಗ್ಗಾಂವ, ರಾಜ್ಯದಲ್ಲಿ ರಂಗಭೂಮಿ ಚಟುವಟಿಕೆ ನಡೆಯುತ್ತಿರುವುದಕ್ಕೆ ನಿನಾಸಂ ಹೆಚ್ಚು ಕಾರಣವಾಗಿದ್ದು ಈ ಸಂಸ್ಥೆಯಿಮದ ತರಬೇತಿ ಪಡೆದವರು ರಾಜ್ಯಾದ್ಯಂತ ರಂಗಚಟುವಟಿಕೆ ಸಕ್ರೀಯವಾಗಿರುವಂತೆ ಮಾಡುತ್ತಿದ್ದಾರೆ. ಈ ಭಾಗದಲ್ಲಿ ನಿನಾಸಂನಿಂದ ಬಂದಿರುವ ಗಣಪತಿ ಹೆಗಡೆ ರಂಗಭೂಮಿ ಸಕ್ರೀಯವಾಗಿರುವಂತೆ ನೋಡಿಕೊಳ್ಳುತ್ತಿದ್ದು ಇಲ್ಲಿನ ಯುವಕರು ಇಂತಹ ಚಟುವಟಿಕೆಯಲ್ಲಿ ಮುಕ್ತವಾಗಿ ಬೆರೆಯುತ್ತಿದ್ದಾರೆ ಇಂದು ನಡೆಯುತ್ತಿರುವ ನಾಟಕದ ನಿರ್ದೇಶಕ ನಾನಾಗಿದ್ದು ಇಲ್ಲಿ ಅಭಿನಯಿಸಿರುವ ನಟ-ನಟಿಯರು ವೃತ್ತಿರಂಗಭೂಮಿಯಲ್ಲಿ ಕೆಲಸ ಮಾಡುವಂತೆ ಮಾಡಿದ್ದಾರೆ ಎಂದು ಹೇಳಿದರು.
ವೇದಿಕೆಯಲ್ಲಿ ಸಂಗೀತ ನಿರ್ದೇಶಕ ಗಜಾನನ ಟಿ.ನಾಯ್ಕ ಉಪಸ್ತಿತರಿದ್ದರು.
ಪ್ರೋ.ಎಂ.ಕೆ.ನಾಯ್ಕ ಹೊಸಳ್ಳಿ ನಿರೂಪಣೆ ಮಾಡಿದರು. ಪ್ರಜ್ಞಾ ಹೆಗಡೆ ಸ್ವಾಗತಿಸಿದರು.
####
ಗಂಗಾಧರ ಕೊಳಗಿ ಯಾನ ಪುಸ್ತಕ ಅನಾವರಣ ಫೆ6 ಕ್ಕೆ
ಸಿದ್ದಾಪುರದ ಪ್ರಯೋಗ ಸ್ವಯಂಸೇವಾ ಸಂಸ್ಥೆ(ರಿ) ಸಹಯೋಗದಲ್ಲಿ ಬರಹಗಾರ ಗಂಗಾಧರ ಕೊಳಗಿಯವರ ಯಾನಅಲೆಮಾರಿಯ ಅನುಭವ ಕಥನ ಕೃತಿಯ ಅನಾವರಣ ಕಾರ್ಯಕ್ರಮ ಫೆ.6ರ ಮಧ್ಯಾಹ್ನ 3.30ಕ್ಕೆ ಸಿದ್ದಾಪುರ
ಲಯನ್ಸ ಬಾಲಭವನದಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ಬರಹಗಾರ ಡಾ| ಗಜಾನನ ಶರ್ಮ ಬೆಂಗಳೂರು, ಪರಿಸರ ಚಿಂತಕ-ಲೇಖಕ ಪ್ರೊ| ಬಿ.ಎಂ.ಕುಮಾರಸ್ವಾಮಿ ಶಿವಮೊಗ್ಗ, ನಾರಿಶಕ್ತಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕøತೆ ನೊಮಿಟೋ ಕಾಮದಾರ್ ಹೊನ್ನೆಮರಡು, ಲಯನ್ಸ ಮಾಜಿ ಜಿಲ್ಲಾ ಗವರ್ನರ್ ಡಾ| ರವಿ ಹೆಗಡೆ ಹೂವಿನಮನೆ, ತಹಸೀಲದಾರ ಮಂಜುಳಾ ಭಜಂತ್ರಿ ಪಾಲ್ಗೊಳ್ಳುವರು. ಸಾಹಿತ್ಯಾಸಕ್ತರು ಪಾಲ್ಗೊಳ್ಳಬೇಕೆಂದು ಸಂಘಟಕರು ಕೋರಿದ್ದಾರೆ.
###
ಕೆ.ಎನ್.ಹೊಸಮನಿ ಅವರಿಗೆಆಧಾರಶ್ರೀಪ್ರಶಸ್ತಿ
ಆಧಾರ ಶಿಕ್ಷಣ, ಸ್ವ-ಉದ್ಯೋಗ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ(ರಿ) ಸಿದ್ದಾಪುರ ಪ್ರತಿವರ್ಷ ಜಿಲ್ಲಾ ಮಟ್ಟದಲ್ಲಿ ನೀಡುವ ದಿ.ಎಂ.ಟಿ.ಕೊಡಿಯ ಅವರ ನೆನಪಿನ ‘ಆಧಾರಶ್ರೀ ಪ್ರಶಸ್ತಿ’ಗೆ ಚಿಂತಕರಾದ ಶಿರಸಿಯ ನಿವೃತ್ತ ಪ್ರಾಚಾರ್ಯ ಪ್ರೊ.ಕೆ.ಎನ್.ಹೊಸಮನಿ ಅವರನ್ನು ಆಯ್ಕೆ ಮಾಡಲಾಗಿದೆ. ಫೆ.10 ರಂದು ನಡೆಯಲಿರುವ ಸಂಸ್ಥೆಯ ‘ಸಂಕಲ್ಪ ದಿನಾಚರಣೆ’ಯಂದು ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ನಾಗರಾಜ ನಾಯ್ಕ ಮಾಳ್ಕೋಡ ತಿಳಿಸಿದ್ದಾರೆ.

ದಿ.ಎಂ.ಟಿ.ಕೊಡಿಯ ಅವರು ಸಿದ್ದಾಪುರ ತಾಲೂಕಿನ ನಿವೃತ್ತ ನೌಕರರ ಸಂಘದ ಸಂಸ್ಥಾಪಕ ಅಧ್ಯಕ್ಷರು, ಆಧಾರ ಶಿಕ್ಷಣ, ಸ್ವಯಂ ಉದ್ಯೋಗ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಂಸ್ಥಾಪಕರಲ್ಲಿ ಓರ್ವರು. ಸಂಸ್ಥೆಯ ಆರಂಭದ ದಿನದಿಂದ ಅವರ ಕೊನೆಯ ದಿನಗಳವರೆಗೂ ಸಂಸ್ಥೆಗೆ ಮಾರ್ಗದರ್ಶಕರಾಗಿ ಆಧಾರ ಆಗಿದ್ದರು. ಅವರು ತಮ್ಮ ವೃತ್ತಿಯ ಹಾಗೂ ನಿವೃತ್ತಿಯ ಬದುಕಿನಲ್ಲಿ ಜನಸಾಮಾನ್ಯರ ಭಾವನೆಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದಾರೆ. ಸಮಾಜಮುಖಿಯಾಗಿದ್ದ ಅವರು ಶೋಷಿತರ ಪರವಾದ ಧ್ವನಿಯಾಗಿದ್ದರು. ಸಮಾಜಕ್ಕೆ ಆದರ್ಶವಾಗಿದ್ದರು. ಇವರ ಹೆಸರನ್ನು ಜೀವಂತವಾಗಿಡುವ ಪುಟ್ಟ ಪ್ರಯತ್ನವಾಗಿ ಅವರ ನೆನಪಿನಲ್ಲಿ ಆಧಾರಶ್ರೀ ಪ್ರಶಸ್ತಿಯನ್ನು ಸಂಸ್ಥೆ ಪ್ರತಿವರ್ಷ ಜಿಲ್ಲಾ ಮಟ್ಟದಲ್ಲಿ ನೀಡುತ್ತಿದೆ.

ಹಲವರು ಸರ್ಕಾರಿ ಉದ್ಯೋಗದಲ್ಲಿನ ನಿವೃತ್ತಿಯ ನಂತರ ತಮ್ಮ ಮನೆ, ಹೆಂಡತಿ, ಮಕ್ಕಳು ಮೊಮ್ಮಕ್ಕಳ ಜೊತೆ ಸಂತೋಷದಿಂದ ಕಾಲಕಳೆಯುತ್ತಾ ನೆಮ್ಮದಿಯ ಜೀವನವನ್ನರಸುತ್ತಾರೆ. ಆದರೆ ಅಪರೂಪಕ್ಕೆ ಕೆಲವರು ಮಾತ್ರ ತಮ್ಮ ಬದುಕಿನ ವಿಶ್ರಾಂತ ಸಮಯವನ್ನು ಸಾಮಾಜಿಕ ಚಟುವಟಿಕೆಗಳಿಗೆ ಮೀಸಲಿಟ್ಟು ಆದರ್ಶಪ್ರಾಯರೆನಿಸಿಕೊಳ್ಳುತ್ತಾರೆ. ಅಂತಹ ಅಪರೂಪದ ವ್ಯಕ್ತಿಗಳಲ್ಲೊಬ್ಬರು ಮಾರಿಗುಡಿ ಸರಕಾರಿ ಪದವಿ ಪೂರ್ವ ಕಾಲೇಜ್‍ನ ಪ್ರಾಚಾರ್ಯರಾಗಿ ನಿವೃತ್ತಿ ಹೊಂದಿರುವ ಪ್ರೊ.ಕೆ.ಎನ್.ಹೊಸಮನಿ.
ಮೂಲತಃ ಹಾವೇರಿಯವರಾದ ಪ್ರೊ. ಕೆ.ಎನ್ ಹೊಸಮನಿ ಅ ವೃತ್ತಿ ಬದುಕಿನ ಹೆಚ್ಚು ಸೇವೆಯನ್ನು ಶಿರಸಿಯಲ್ಲಿಯೆ ಸಲ್ಲಿಸಿದ್ದಾರೆ. ಈಗಲೂ ಇಲ್ಲಿಯೆ ಇದ್ದು ತಮ್ಮ ಅನುಭವವನ್ನು ಸಮಾಜಕ್ಕೆ ಧಾರೆ ಎರೆಯುತ್ತಿದ್ದಾರೆ. ಆರಂಭದಲ್ಲಿ ಹರಪ್ಪನಹಳ್ಳಿಯ ಬಿ.ಎಡ್ ಕಾಲೇಜ್‍ನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಪ್ರಾರಂಭಿಸಿದ್ದರು. ನಂತರದಲ್ಲಿ ದಾವಣಗೇರಿಯಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜ್‍ನಲ್ಲಿ ಕನ್ನಡ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸಿದ್ದರು. 1987 ರಿಂದ ಶ್ರೀ ಮಾರಿಕಾಂಬಾ ಸರ್ಕಾರಿ ಪದವಿಪೂರ್ವ ಕಾಲೇಜ್‍ನಲ್ಲಿ ಕನ್ನಡ ಉಪನ್ಯಾಸಕರಾಗಿ ಕರ್ತವ್ಯವನ್ನು ಆರಂಭಿಸಿದ್ದರು. ನಂತರ 2011 ರಿಂದ ಮಾರಿಗುಡಿ ಕಾಲೇಜ್‍ನ ಪ್ರಾಚಾರ್ಯರಾಗಿ 2016 ರಲ್ಲಿ ನಿವೃತ್ತಿ ಹೊಂದಿದ್ದಾರೆ. ತಮ್ಮ ಸುದೀರ್ಘ ಸೇವಾ ಅವಧಿಯಲ್ಲಿ ಸಾವಿರಾರು ವಿದ್ಯಾರ್ಥಿಗಳ ನೆಚ್ಚಿನ ಗುರುವಾಗಿ, ಅನೇಕರ ಬದುಕಿಗೆ ದಾರಿದೀಪವಾಗಿದ್ದಾರೆ.
ಇವರ ವೃತ್ತಿ ಬದುಕಿನಲ್ಲಿ ಸತತ 28 ವರ್ಷಗಳ ಕಾಲ ದ್ವೀತಿಯ ಪಿ.ಯು.ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ಇವರು ಕಲಿಸಿದ ವಿದ್ಯಾರ್ಥಿಗಳ ಫಲಿತಾಂಶ “ನೂರಕ್ಕೆ ನೂರು” ಆಗಿರುವುದು ಬಹು ದೊಡ್ಡ ಸಾಧನೆಯಾಗಿದೆ. ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಣೆ ಮಾಡಿದ್ದಾರೆ. ಅನೇಕ ಕಡೆಗಳಲ್ಲಿ ವಿಶೇಷ ಪ್ರಸಂಶೆಗಳಿಸಿದ್ದು ಇವರ ಹಿರಿಮೆ ಎನ್ನಬಹುದು. ಇವರಿಗೆ ಅತ್ಯುತ್ತಮ ಉಪನ್ಯಾಸಕ, ಕದಂಬ ರತ್ನ, ಕನ್ನಡ ನುಡಿ ಕಿಂಕರ ಪುರಸ್ಕಾರಗಳು ಇವರ ಸಾಧನೆಗೆ ಸಂದ ಗೌರವವಾಗಿದೆ.
ಕನ್ನಡ ಉಪನ್ಯಾಸಕರಾಗಿದ್ದರೂ ಇತಿಹಾಸ ಭೋದನಾ ಮಾರ್ಗದರ್ಶಿ, ಶಿಕ್ಷಣ ಭಾಗ-1, ಶಿಕ್ಷಣ ಭಾಗ-2, ಮನೋವಿಜ್ಞಾನದಲ್ಲಿ ಶೈಕ್ಷಣಿಕ ಪ್ರಯೋಗಗಳು ಎನ್ನುವ ಕೃತಿಗಳನ್ನು ರಚಿಸಿ, ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಸಹಕಾರಿಯಾಗಿದ್ದಾರೆ. ತಮ್ಮ ನಿವೃತ್ತಿಯ ನಂತರವೂ ಶಿರಸಿ ಶೈಕ್ಷಣಿಕ ಜಿಲ್ಲೆಯ ಭಾರತ ಸೇವಾದಳದ ಸದಸ್ಯರಾಗಿ, ಶಿರಸಿ ಅರ್ಬನ್ ಬ್ಯಾಂಕ್‍ನ ನಿರ್ದೇಶಕರಾಗಿ, ಶ್ರೀನಿಕೇತನ ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಮಡದಿ ಮೈನಾವತಿ ಹೊಸಮನಿ ಅಂಚೆ ಇಲಾಖೆಯ ನಿವೃತ್ತ ಉದ್ಯೋಗಿಯಾಗಿದ್ದು, ಮಕ್ಕಳಾದ ನೇತ್ರ ತಜ್ಞರಾದ ಡಾ.ವಿಶ್ವಾಸ ಕೆ. ಹೊಸಮನಿ, ಅರಿವಳಿಕೆ ತಜ್ಞ ಡಾ.ವಿವೇಕ ಕೆ. ಹೊಸಮನಿ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
………………………..
ಆಧಾರಶ್ರೀ ಪ್ರಶಸ್ತಿ; ದಿ.ಎಂ.ಟಿ.ಕೊಡಿಯ ಅವರ ನೆನಪಿನ ‘ಆಧಾರಶ್ರೀ ಪ್ರಶಸ್ತಿ’ಯು ಜಿಲ್ಲಾ ಮಟ್ಟದಾಗಿದೆ. ಸರಕಾರಿ ನೌಕರಿಯಲ್ಲಿ ಇದ್ದವರು ಅಥವಾ ನಿವೃತ್ತರಾಗಿದ್ದವರು ಮಾಡಿರುವ ಜನಪರವಾದ ಕೆಲಸ ಕಾರ್ಯಗಳನ್ನು ಗಮನಿಸಿ ಪ್ರಶಸ್ತಿಗೆ ಅಯ್ಕೆ ಮಾಡಲಾಗುತ್ತದೆ. ಪ್ರಶಸ್ತಿಗೆ ಯಾವುದೆ ಕಾರಣಕ್ಕೂ ಅರ್ಜಿ ಸ್ವೀಕರಿಸಲಾಗುವುದಿಲ್ಲ. ಪ್ರಶಸ್ತಿ ಫಲಕದೊಂದಿಗೆ ಮೈಸೂರು ಪೇಟಾ ತೊಡಿಸಿ, ಶಾಲು ಹೊದಿಸಿ ಫಲತಾಂಬೂಲ, ಐದು ಸಾವಿರ ನಗದು ನೀಡಿ ಗೌರವಿಸಲಾಗುತ್ತದೆ. ಈ ಪ್ರಶಸ್ತಿಯನ್ನು ಪ್ರತಿ ವರ್ಷ ಫೆ.10 ರಂದು ಸಂಸ್ಥೆಯ ಸಂಕಲ್ಪ ದಿನಾಚರಣೆಯ ದಿನದಂದು ನಡೆಯುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುತ್ತದೆ.
####
ಸಿದ್ದಾಪುರದ ಹೆರವಳ್ಳಿಯಲ್ಲಿ ಮಡಿವಾಳ ಮಾಚಿದೇವರ ಜಯಂತ್ಯೋತ್ಸವ ಆಚರಣೆ
ಜೀವನಕ್ಕೆ ಬೆಳಕು ನೀಡುವ ಗುರುವಿನ ಜನ್ಮೋತ್ಸವವನ್ನು ಪ್ರತಿ ಮನೆಯಿಂದ ದೀಪ ತಂದು ದೀಪೋತ್ಸವದ ರೀತಿಯಲ್ಲಿ ಆಚರಿಸಿರುವುದು ಒಂದು ಅರ್ಥಪೂರ್ಣವಾದ ಕಾರ್ಯವಾಗಿದೆ ಎಂದು ಬರಹಗಾರ ಸುರೇಂದ್ರ ದಪೇದಾರ ಹೊಸೂರು ಹೇಳಿದರು.
ಅವರು ತಾಲೂಕಿನ ಹೆರವಳ್ಳಿಯಲ್ಲಿ ಮಡಿವಾಳ ಮಾಚಿದೇವರ ಮಂದಿರದಲ್ಲಿ ಆಚರಿಸಲಾದ ವಚನರಕ್ಷಕ ವೀರ ಮಡಿವಾಳ ಜಯಂತ್ಯೋತ್ಸವದಲ್ಲಿ ಮಾತನಾಡಿದರು.
ಪ್ರತಿಯೊಬ್ಬರು ತಮ್ಮೊಳಗೆ ದೇವರನ್ನು ಕಾಣಬೇಕು. ಹಿರಿಯರನ್ನು ಗೌರವಿಸಬೇಕು. ತಮ್ಮಲ್ಲಿರುವ ಒಣ ಪ್ರತಿಷ್ಠೆಯನ್ನು ಬಿಟ್ಟು ಎಲ್ಲರನ್ನು ಸಮಾನವಾಗಿ ಕಾಣಬೇಕು. ಅವಾಗ ಸಮಾಜದ ಅಭಿವೃದ್ಧಿಯಾಗುತ್ತದೆ ಎಂದರು.

ಪತ್ರಕರ್ತ ಕನ್ನೇಶ ಕೋಲಸಿರ್ಸಿ ಮಾತನಾಡಿ ಷೋಷಣೆಗೆ ಒಳಗಾದವರನ್ನು ರಕ್ಷಿಸಲು ಹೋರಾಟ ಮಾಡಿದ ಮಹಾನ್ ವ್ಯಕ್ತಿಗಳು ಶಿವಶರಣರು. ನೇರ ನುಡಿಯ ವ್ಯಕ್ತಿತ್ವದ ಮಾಚಿದೇವರು ಸಮಾಜದಲ್ಲಿನ ಮನಸ್ಸಿನ ಕೊಳೆ ತೊಳೆಯಲು ಅವತಾರವೆತ್ತಿದ್ದರು. ಸಮಾಜದಲ್ಲಿ ಸತ್ಯ, ಪ್ರಾಮಾಣಿಕತೆಗೆ ಬೆಲೆ ಇದೆ ಎಂದು ತೋರಿಸಿಕೊಟ್ಟವರು ಮಾಚಿದೇವರು. ಶರಣರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಪತ್ರಕರ್ತ ದೀವಾಕರ ನಾಯ್ಕ ಶಿವಶರಣರ ವಚನಗಳಲ್ಲಿ ಮನುಕುಲದ ಉದ್ದಾರದ ಸಂದೇಶಗಳಿವೆ. ಇಂತಹ ಕಾರ್ಯಕ್ರಮಗಳಿಂದ ಸಮಾಜದ ಸಮ್ಮಿಳಿತವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಪತ್ರಕರ್ತ ಸುರೇಶ ಮಡಿವಾಳ ಕಡಕೇರಿ, ಗ್ರಾಮ ಕಮಿಟಿ ಅಧ್ಯಕ್ಷ ಕೃಷ್ಣ ಮಡಿವಾಳ ಉಪಸ್ಥಿತರಿದ್ದರು. ಅರ್ಚಕ ಸದಾನಂದ ಎಸ್ ಗೌಡ ಸ್ವಾಗತಿಸಿದರು. ಧರ್ಮಪ್ಪ ನಿರೂಪಿಸಿ ವಂದಿಸಿದರು.
###

About the author

Adyot

Leave a Comment

Use the form on right side to Send your query related to Advertisement, to Send News and to Share Your Feedback!

Ad/Send News/Feedback

Copyright © 2025. Adyot News | All Rights Reserved