ಆದ್ಯೋತ್ ವಾರಭವಿಷ್ಯ


########################################
23-10-2022 ರಿಂದ 29-10-2022 ರವರೆಗೆ
########################################
ಮೇಷ
ವಾರದ ಪ್ರಾರಂಭದಲ್ಲಿ ಉದ್ಯೋಗಿಗಳಿಗೆ ಕಿರಿಕಿರಿ.ಅನವಶ್ಯಕ ಕೋಪದಿಂದ ವಿರೋಧಿಗಳ ಹೆಚ್ಚಳ.ಆಸ್ತಿಖರೀದಿಗೆ ಮುಂದಾಗುವುದು ಬೇಡ ಮೋಸ ಹೋಗುವ ಸಾಧ್ಯತೆ.ವಾರಾಂತ್ಯದಲ್ಲಿ ಅನಿರೀಕ್ಷಿತ ಧನಾಗಮನ.ಶುಭ ಸುದ್ದಿ ದೊರೆಯಲಿದೆ.ವ್ಯಾಪಾರಿಗಳಿಗೆ ಈ ವಾರ ಸಾಮಾನ್ಯ ಫಲ.ವಿದ್ಯಾರ್ಥಿಗಳಿಗೆ ಪರಿಶ್ರಮದಿಂದ ಯಶಸ್ಸು.
ಶ್ರೀಲಕ್ಷ್ಮೀನಾರಾಯಣ ಹೃದಯ ಪಾರಾಯಣದಿಂದ ಹೆಚ್ಚಿನ ಲಾಭವಾಗಲಿದೆ.
#####
ವೃಷಭ
ನಿರೀಕ್ಷಿತ ಕೆಲಸ ಕೈಗೂಡಲಿದೆ.ಹಲವು ಹೊಸ ಸಂಭಂಧದಿಂದ ಲಾಭವಾಗಲಿದೆ.ಸ್ವಂತ ಉದ್ಯೋಗಿಗಳಿಗೆ ಹೆಚ್ಚಿನ ಅನುಕೂಲವಿದೆ.ಸರಕಾರಿ ಉದ್ಯೋಗಿಗಳಿಗೆ ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆ.ವ್ಯಾಪಾರಿಗಳಿಗೆ ಉತ್ತಮ ಅವಕಾಶ.ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ. ವಾರದ ಮಧ್ಯದ ದಿನದಲ್ಲಿ ಹೊಸವಸ್ತುಗಳ ಖರೀದಿ ಮಾಡಲಿದ್ದೀರಿ
ಮಹಾಗಣಪತಿ ಆರಾಧನೆಯಿಂದ ಹೆಚ್ಚಿನ ಅನುಕೂಲವಾಗಲಿದೆ.
#####
ಮಿಥುನ
ವಾರದ ಆರಂಭದಲ್ಲೆ ಆರೋಗ್ಯ ಕೈಕೊಡಲಿದೆ ಹೊಟ್ಟೆ ನೋವು ಬಾಧಿಸಲಿದೆ ಬೆನ್ನು ಮೂಳೆಯ ನೋವು ಬಾಧಿಸಲಿದೆ. ಸೂಕ್ತ ಚಿಕಿತ್ಸೆ ಪಡೆಯದಿದ್ದಲ್ಲಿ ಮುಂದಿನ ದಿನಗಳಲ್ಲಿ ಆರೋಗ್ಯ ಇನ್ನಷ್ಟು ಹದಗೆಡಲಿದೆ.ಆರ್ಥಿಕ ಪರಿಸ್ಥಿತಿ ಚೆನ್ನಾಗಿದೆ ಹಿಂದೆ ಬರಬೇಕಾಗಿದ್ದ ಹಣ ಬರಲಿದೆ ವಿದ್ಯಾರ್ಥಿಗಳಿಗೆ ಅನಾನುಕೂಲ ವಾತಾವರಣ.ವ್ಯಾಪಾರಿಗಳಿಗೆ ಅನುಕೂಲವಾಗಲಿದೆ.
ಮೃತ್ಯುಂಜಯ ಆರಾಧನೆ ಅಥವಾ ಸುಬ್ರಹ್ಮಣ್ಯ ಆರಾಧನೆ ಉತ್ತಮ
#####
ಕಟಕ
ದೂರದ ಊರಿಗೆ ಪ್ರಯಾಣ ಮಾಡುವ ಸಾಧ್ಯತೆ.ಮನೆಗೆ ಸಂಭಂಧಿಕರು ಬರಲಿದ್ದಾರೆ ಆರ್ಥಿಕ ಕೊರತೆ ಇಲ್ಲ ಆದಕ್ಕೆ ಸಮಾನವಾಗಿ ಖರ್ಚು ಇರಲಿದೆ.ನ್ಯಾಯಾಲಯದ ವ್ಯಾಜ್ಯ ಗೆಲ್ಲಲಿದ್ದಿರಿ.ಹೊಸ ಬಟ್ಟೆ,ಅಲಂಕಾರಿಕ ವಸ್ತುಗಳ ಖರೀದಿ ಮಾಡಿಲಿದ್ದಿರಿ.ವ್ಯಾಪಾರಿಗಳಿಗೆ ಉತ್ತಮ ವ್ಯಾಪಾರವಾಗಲಿದೆ.ವಿದ್ಯಾರ್ಥಿಗಳಿಗೆ ಅನುಕೂಲದ ವಾರ.ವಾರಾಂತ್ಯಕ್ಕೆ ವಾಹನ ಚಲಾವಣೆಯಲ್ಲಿ ಜಾಗೃತಿ ಅಗತ್ಯ.
#####
ಸಿಂಹ
ಧನ ನಷ್ಟವಾಗುವ ಎಲ್ಲಾ ಸಾಧ್ಯತೆ ಇದೆ ವ್ಯವಹಾರದಲ್ಲಿ ಎಚ್ಚರ ಅವಶ್ಯಕ ವಾರದ ಮಧ್ಯದಲ್ಲಿ ವಸ್ತು ನಷ್ಟವಾಗಲಿದೆ.ಆರೋಗ್ಯದಲ್ಲಿ ಏರುಪೇರು ಆಗಲಿದೆ ಕಣ್ಣಿನ ಬಗ್ಗೆ ಜಾಗೃತೆ ಅವಶ್ಯಕ.ವ್ಯಾಪಾರಿಗಳಿಗೆ ನಷ್ಟವಾಗಲಿದೆ.ವಿದ್ಯಾರ್ಥಿಗಳಿಗೆ ಉತ್ತಮ ಸಮಯವಲ್ಲ.ವಾರಾಂತ್ಯದಲ್ಲಿ ಗೆಳೆಯರಿಂದ ಸಹಾಯ ದೊರೆಯಲಿದೆ ಇದರಿಂದ ಒಂದಿಷ್ಟು ಚೇತರಿಕೆಯಾಗಲಿದೆ.
ದುರ್ಗಾಪಾರಾಯಣ,ಗಣಪತಿಗೆ ದೂರ್ವಾಚನೆ ಮಾಡಿದರೆ ಉತ್ತಮ ಫಲ ದೊರಕಲಿದೆ.
#####
ಕನ್ಯಾ
ಮಾನಸಿಕ ಕಿರಿಕಿರಿಯಿಂದ ಬದುಕು ಹೈರಾಣಾಗಲಿದೆ.ಉದ್ಯೋಗದಲ್ಲಿ ಮೇಲಾಧಿಕಾರಿಗಳಿಂದ ತೊಂದರೆಯಾಗಲಿದೆ.ವ್ಯಾಪಾರಿಗಳಿಗೆ ಕಿರಿಕಿರಿ ಇದ್ದರೂ ಧನಲಾಭವಾಗಲಿದೆ.ಹಣ್ಣು,ಹೂವು ವ್ಯಾಪಾರಿಗಳಿಗೆ ಅನುಕೂಲವಿದೆ.ಹೊಸ ಬಟ್ಟೆ ಖರೀದಿ ಮಾಡಲಿದ್ದೀರಿ.ಭೂ ವ್ಯವಹಾರದಲ್ಲಿ ಜಯ ದೊರಕಲಿದೆ.ದೂರದ ಊರಿಗೆ ಪ್ರಯಾಣ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಜಯವಾಗಲಿದೆ.
ಗಣಪತಿ ಪ್ರಾರ್ಥನೆಯಿಂದ ಅನುಕೂಲವಾಗಲಿದೆ‌.

ತುಲಾ
ಉದ್ಯೋಗದಲ್ಲಿರುವವರಿಗೆ ಸ್ಥಾನಪಲ್ಲಟವಾಗಲಿದೆ.ಕಚೇರಿಯಲ್ಲಿ ಎಲ್ಲರ ಅನುಮಾನ ದೃಷ್ಟಿಗೆ ಪಾತ್ರರಾಗಲಿದ್ದೀರಿ.ಹಣಕಾಸಿನ ವ್ಯವಹಾರದಲ್ಲು ಸ್ನೇಹಿತರೊಂದಿಗೆ ವೈಮನಸ್ಸು ಉಂಟಾಗಲಿದೆ.ವಾರದ ಮಧ್ಯದಲ್ಲಿ ಹೊಟ್ಟೆ ನೋವಿನಿಂದ ಬಳಲಲಿದ್ದಿರಿ.ಆಹಾರ ಸೇವನೆ ಬಗ್ಗೆ ಜಾಗೃತವಾಗಿರಿ.ವಸ್ತ್ರ ವ್ಯಾಪಾರಿಗಳಿಗೆ ಉತ್ತಮವಾದ ವ್ಯವಹಾರವಾಗಲಿದೆ ವಾರಾಂತ್ಯದಲ್ಲಿ ನೂತನ ವಸ್ತು ಖರೀದಿ ಮಾಡಲಿದ್ದಿರಿ ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣ
ಶಿವಕವಚ ಪಠಣದಿಂದ ಅನುಕೂಲವಾಗಲಿದೆ‌
#####
ವೃಶ್ಚಿಕ
ಹಣಕಾಸಿನ ವ್ಯವಹಾರದಲ್ಲಿ ಯಶಸ್ಸು ಸಿಗಲಿದೆ ಹಳೆಯ ಸ್ನೇಹಿತನಿಂದ ಬಾಕಿ ಇರುವ ವ್ಯವಹಾರ ಮುಗಿಯಲಿದೆ.ಬಂಗಾರದ ಆಭರಣ ಖರೀದಿ ಮಾಡಲಿದ್ದೀರಿ.ವ್ಯಾಪಾರಿಗಳಿಗೆ ಉತ್ತಮವಾದ ವಾರ.ಜಮೀನು ಖರೀದಿಗೂ ಸಕಾಲ. ಆದರೆ ಆರೋಗ್ಯದಲ್ಲಿ ತೊಂದರೆಯಾಗಲಿದೆ ವಾಹನ ಚಲಾಯಿಸುವಾಗ ಎಚ್ಚರವಿರಲಿ
ವಿದ್ಯಾರ್ಥಿಗಳಿಗೆ ಉತ್ತಮವಾಗಿದೆ.
ವಡವಾನಲ ಸ್ತೋತ್ರಪಠಣೆ ಉತ್ತಮ
#####
ಧನಸ್ಸು
ಉತ್ತಮವಾಗಿ ಈ ವಾರ ಆರಂಭವಾಗಲಿದೆ ಆದರೆ ವಾರಾಂತ್ಯದಲ್ಲಿ ಒಂದಿಷ್ಟು ಕಿರಿಕಿರಿಯಾಗಲಿದೆ.ನೀವು ನಿರೀಕ್ಷೆ ಮಾಡಿದ‌ ಕೆಲಸವಾಗದೆ ಹತಾಶೆ ಕಾಣಿಸಲಿದೆ ಹಣಕಾಸಿನ ವ್ಯವಹಾರದಲ್ಲಿ ಜಯವಾಗಲಿದೆ.ಉತ್ತಮ ಆರೋಗ್ಯ ನಿಮ್ಮದಾಗಲಿದೆ.ವ್ಯಾಪಾರಿಗಳಿಗೆ ಉತ್ತಮ ವಾರ ಧಾನ್ಯ ವ್ಯಾಪಾರಿಗಳು ವಿಶೇಷ ಲಾಭಗಳಿಸಲಿದ್ದಾರೆ.ವಿದ್ಯಾರ್ಥಿಗಳಿಗೆ ಯಶಸ್ಸು ದೊರೆಯಲಿದೆ.
ಗುರು ಆರಾಧನೆ ಮಾಡುವುದರಿಂದ ಅನುಕೂಲವಾಗಲಿದೆ.
#####
ಮಕರ
ನಿಮ್ಮ ಆಲೋಚನೆಗಳಂತೆ ಯಾವುದೂ ನಡೆಯದೆ ಈ ವಾರ ಹತಾಶೆ ಅನುಭವಿಸಲಿದ್ದೀರಿ.ಹೊಂದಾಣಿಕೆ ಮಾಡಿಕೊಳ್ಳದಿದ್ದರೆ ಕುಟುಂಬದಲ್ಲಿ ಅಶಾಂತಿ ಹೆಚ್ಚಾಗಲಿದೆ.ಹಣಕಾಸಿನ ವ್ಯವಹಾರ ಉತ್ತಮವಾಗಿರುವುದಿಲ್ಲ.ಉದ್ಯೋಗಿಗಳಿಗೆ ಹಿಂಬಡ್ತಿಯಾಗುವ ಸಾಧ್ಯತೆ ಮೇಲಾಧಿಕಾರಿಗಳ ಅವಕೃಪೆಗೆ ಒಳಗಾಗಲಿದ್ದಿರಿ
ಆಹಾರ ವ್ಯತ್ಯಯದಿಂದ ಆರೋಗ್ಯದಲ್ಲಿ ಕಿರಿಕಿರಿಯಾಗಲಿದೆ ಮೂತ್ರಕೋಶದ ಸಮಸ್ಯೆ ಕಾಣಿಸಿಕೊಳ್ಳಲಿದೆ.ವಿದ್ಯಾರ್ಥಿಗಳಿಗೆ ಚಂಚಲ ಮನಸ್ಸಿನಿಂದ ಹಿನ್ನಡೆಯಾಗಲಿದೆ.
ನಾಗಾರಾಧನೆ ಹಾಗೂ ಸುಬ್ರಹ್ಮಣ್ಯ ಕವಚ ಪಠಣೆಯಿಂ
ದ ಆರೋಗ್ಯ ಸಮಸ್ಯೆಗೆ ಪರಿಹಾರ ದೊರಕಲಿದೆ.
#####
ಕುಂಭ
ಅನಗತ್ಯ ಖರ್ಚಿನಿಂದ ಹಣಕಾಸಿನ ವ್ಯವಹಾರದಲ್ಲಿ ಹಿನ್ನಡೆಯಾಗಲಿದೆ.ಮಾನಸಿಕ ಕಿರಿಕಿರಿಯಿಂದ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಉದ್ಯೋಗದಲ್ಲಿ ಅನುಕೂಲವಿದ್ದು ಮೇಲಾಧಿಕಾರಿಗಳ ಮೆಚ್ಚುಗೆ ಪಡೆಯಲಿದ್ದಿರಿ‌ ಗುರುವಾರ ಅನರೀಕ್ಷಿತ ಸುದ್ದಿ ಬರಲಿದ್ದು ಬದುಕಿನ ದಿಕ್ಕು ಬದಲಾಗುವ ಸಾಧ್ಯತೆ ಇದೆ ವಾರಾಂತ್ಯದಲ್ಲಿ ಅನಕೂಲವಾಗಲಿದ್ದು ಹೊಸ ವಸ್ತುಗಳ ಖರೀದಿ ನಡೆಯಲಿದೆ. ವ್ಯಾಪಾರಿಗಳಿಗೆ ಅನುಕೂಲವಿದ್ದು ಬೆಳ್ಳಿ-ಬಂಗಾರದ ವ್ಯಾಪಾರಿಗಳಿಗೆ ಹೆಚ್ಚಿನ ಲಾಭವಾಗಲಿದೆ.ವಿದ್ಯಾರ್ಥಿಗಳಿಗೆ ಉತ್ತಮ ವಾತಾವರಣವಿದ್ದು ಯಶಸ್ಸು ದೊರಕಲಿದೆ.
#####
ಮೀನ
ಹಿಡಿದ ಕೆಲಸ ಮುಗಿಯುವ ಎಲ್ಲಾ ಸಾಧ್ಯತೆಗಳಿದ್ದು ದೊಡ್ಡದೊಂದು ಜಯ ದೊರಕಲಿದೆ.ಹಣಕಾಸು ಪರಿಸ್ಥಿತಿ ಉತ್ತಮವಾಗಲಿದ್ದು ಆರೋಗ್ಯದ ಕಡೆಗೆ ಗಮನಕೊಡಬೇಕಾಗಿದೆ ತಲೆ ನೂವು,ಕಣ್ಣಿನ ತೊಂದರೆ ಕಾಣಿಸಿಕೊಳ್ಳಲಿದ್ದು ಮಾನಸಿಕವಾಗಿ ಕುಗ್ಗಲಿದ್ದೀರಿ‌.ಕುಟುಂಬ ಸೌಖ್ಯ ಉತ್ತಮವಾಗಿದ್ದು ಮನೆಯ ಸದಸ್ಯರು ನಿಮ್ಮ ಬೆಂಬಲಕ್ಕೆ ಇದ್ದಾರೆ.ವ್ಯಾಪಾರಸ್ಥರಿಗೆ ಉತ್ತಮವಾರವಾಗಿದ್ದು ದ್ರವ ಹಾಗೂ ಸುಗಂಧ ವ್ಯಾಪಾರಸ್ಥರಿಗೆ ಹೆಚ್ಚಿನ ಅನುಕೂಲವಿದೆ. ವಿದ್ಯಾರ್ಥಿಗಳಿಗೆ ಯಶಸ್ಸು ದೊರಕಲಿದ್ದು ಉನ್ನತ ವ್ಯಾಸಂಗ ಮಾಡುವವರಿಗೆ ಹೆಚ್ಚಿನ ಅವಕಾಶ ದೊರೆಯಲಿದೆ
#####

About the author

Adyot

Leave a Comment