20-11-2022 ರಿಂದ 26-11-2022ರವರೆಗೆ
##############################
ಮೇಷ:
ಬೆಂಕಿ,ವಿದ್ಯುತ್ ಉಪಕರಣಗಳಿಂದ ಅಪಾಯವಾಗುವ ಸಾಧ್ಯತೆ ಎಚ್ಚರಿಕೆ ಅವಶ್ಯಕ.ಹೊಸ ಜವಾಬ್ದಾರಿ ಬರುವುದರಿಂದ ಶ್ರಮ ಹೆಚ್ಚಾಗಲಿದೆ.ಕೂಡಿಟ್ಟ ಬೆಳೆಯನ್ನು ಮಾರುವುದರಿಂದ ಲಾಭ ಬರಲಿದೆ.ವ್ಯವಹಾರ ಮಾಡುವಾಗ ತಾಳ್ಮೆ ಅಗತ್ಯ. ಧಾನ್ಯ,ದ್ರವ ಪದಾರ್ಥಗಳ ವ್ಯಾಪಾರಿಗಳಿಗೆ ಉತ್ತಮವಾಗಿದೆ.ವಿದ್ಯಾರ್ಥಿಗಳಿಗೆ ಉತ್ತಮ ವಾರ ಸುಬ್ರಹ್ಮಣ್ಯ ಪ್ರಾರ್ಥನೆ ಉತ್ತಮ
#####
ವೃಷಭ:
ಕೆಲವು ಆತಂಕಕಾರಿ ಘಟನೆಗಳು ನಡೆದರೂ ಜಯ ನಿಮ್ಮದಾಗುವುದು.ನ್ಯಾಯಾಲಯದಲ್ಲಿ ಬಾಕಿ ಇದ್ದ ಹಳೆಯ ಪ್ರಕರಣ ಮುಕ್ತಾಯವಾಗುವುದು.ಹಣಕಾಸು ವ್ಯವಹಾರ ಉತ್ತಮವಾಗಿರುವುದು.ಕುಟುಂಬ ಸೌಖ್ಯದ ಜೊತೆಗೆ ಬಂಧುಗಳ ಆಗಮನವಾಗುವುದು.ಹೊಸ ವಸ್ತುಗಳ ಖರೀದಿ ಮಾಡಲಿದ್ದಿರಿ.ಜಾನುವಾರು ವ್ಯಾಪಾರಿಗಳಿಗೆ,ಹೂವಿನ ವ್ಯಾಪಾರಿಗಳಿಗೆ ಉತ್ತಮ ವ್ಯವಹಾರವಾಗುವುದು.ವಾಹನ ಸಂಚಾರದಲ್ಲಿ ಎಚ್ಚರಿಕೆ ಅವಶ್ಯಕ.ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ
ಮೃತ್ಯುಂಜಯ ಜಪ ಮಾಡುವುದು ಉತ್ತಮ
#####
ಮಿಥುನ
ಉನ್ನತ ಸ್ಥಾನ ಪಡೆಯಲು ಹಲವು ಅವಕಾಶ ಬರಲಿದೆ.ನಿರ್ಲಕ್ಷವಹಿಸಿದರೆ ಕೈಜಾರಿ ಹೋಗುವ ಸಂಭವವಿದೆ.
ಸಿಟ್ಟಿನ ಕಾರಣದಿಂದ ಸ್ನೇಹಿತರು ದೂರವಾಗಲಿದ್ದಾರೆ ರಾಜಕಾರಣಿಗಳಿಗೆ ವೃಥಾ ಅಪವಾದ ಬರಲಿದ್ದು ರಾಜಕೀಯ ಜೀವನದ ಮೇಲೆ ಕಪ್ಪುಚುಕ್ಕಿಯಾಗಲಿದೆ.ಅಲ್ಪರ ಸ್ನೇಹದಿಂದ ಗೌರವಕ್ಕೆ ಚ್ಯುತಿ ಬರಲಿದೆ.ಅಲಂಕಾರಿಕ ವಸ್ತುಗಳ ವ್ಯಾಪಾರಿಗಳಿಗೆ ಉತ್ತಮ ವ್ಯವಹಾರವಾಗಲಿದೆ.ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಿರುತ್ತದೆ.
ಮಹಾಗಣಪತಿ ಆರಾಧನೆ ಉತ್ತಮ
####
ಕರ್ಕಾಟಕ
ಶಿಕ್ಷಣ ಕ್ಷೇತ್ರದಲ್ಲಿ ಉದ್ಯೋಗ ಮಾಡುತ್ತಿರುವವರಿಗೆ ಬಡ್ತಿ ದೊರೆಯಲುದೆ.ಹೊಸ ವಸ್ತ್ರಗಳ ಖರೀದಿಯಾಗಲಿದ್ದು ಕೃಷಿ ಕ್ಷೇತ್ರದಲ್ಲಿ ಉತ್ತಮ ಆದಾಯ ದೊರೆಯಲಿದೆ.ಸ್ನೇಹಿತರಿಂದ ಔತಣಕೂಟ ದೊರೆಯಲಿದೆ.ಅಗ್ನಿ ಭಯವಿದ್ದು ಎಚ್ಚರಿಕೆ ಅಗತ್ಯ.ಭತ್ತ,ಕಬ್ಬು ವ್ಯಾಪಾರಿಗಳಿಗೆ ಉತ್ತಮ ಆದಾಯ ದೊರಕಲಿದೆ.ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗದ ಅವಕಾಶ ದೊರೆಯಲಿದೆ.
#####
ಸಿಂಹ
ಅತಿಯಾದ ನಂಬುಗೆಯಿಂದ ಅಪಾರ ಹಾನಿಯಾಗಲಿದೆ. ಸ್ನೇಹಿತರು ಎನಿಸಿಕೊಂಡವರು ಶತ್ರುಗಳಾಗಲಿದ್ದಾರೆ.ಹಣಕಾಸಿನ ವ್ಯವಹಾರ ಉತ್ತಮವಾಗಿರುತ್ತದೆ ರಾಜಕಾರಣಿಗಳಿಗೆ ಉನ್ನತ ಹುದ್ದೆ ದೊರಕಲಿದೆ.ಕುಟುಂಬದಲ್ಲಿ ಮನಸ್ತಾಪ ಉಂಟಾಗಲಿದ್ದು ಮಾನಸಿಕ ಅಶಾಂತಿ ಉಂಟಾಗಲಿದೆ.ಧಾನ್ಯ ವ್ಯಾಪಾರಿಗಳಿಗೆ ಉತ್ತಮ ವ್ಯವಹಾರವಾಗಲಿದೆ ವಿದ್ಯಾರ್ಥಿಗಳಿಗೆ ನಿರೀಕ್ಷಿಸಿದ ಫಲ ದೊರೆಯುವುದಿಲ್ಲ
ಮಹಾಗಣಪತಿಯಲ್ಲಿ ದೂರ್ವಾರ್ಚನೆ ಮಾಡಿಸುವುದು ಉತ್ತಮ
#####
ಕನ್ಯಾ
ಉತ್ತಮ ಆದಾಯದೊಂದಿಗೆ ಪ್ರಾರಂಭವಾಗುವ ಈ ವಾರದಲ್ಲಿ ಆಸ್ತಿ ಖರೀದಿಯಾಗಲಿದೆ.ಉದ್ಯೋಗಿಗಳಿಗೆ ಕಚೇರಿಯಲ್ಲಿ ಆಹ್ಲಾದಕರ ವಾತಾವರಣ ಇರಲಿದ್ದು ಮೇಲಾಧಿಕಾರಿಗಳಿಂದ ಮೆಚ್ಚುಗೆ ದೊರಕಲಿದೆ.ಹೊಟ್ಟೆ ನೋವು ಬಾಧಿಸಲಿದ್ದು ಆರೋಗ್ಯದ ಕಡೆಗೆ ಎಚ್ಚರ ಅಗತ್ಯ.ರಾಜಕಾರಣಿಗಳಿಗೆ ಉತ್ತಮ ಅವಕಾಶವಿದೆ.ದ್ರವ ಪದಾರ್ಥದ ವ್ಯಾಪಾರಿಗಳಿಗೆ ಉತ್ತಮ ವ್ಯವಹಾರವಾಗಲಿದೆ. ವಿದ್ಯಾರ್ಥಿಗಳಿಗೆ ಉತ್ತಮವಾರವಾಗಲಿದೆ.
ತುಲಾ
ನಿಮ್ಮ ದುಡುಕಿನ ಫಲದಿಂದ ಉತ್ತಮ ಅವಕಾಶ ಕೈಜಾರಲಿದೆ.
ವಾಹನ ಬೆಂಕಿಯಿಂದ ಅಪಾಯವಾಗಲಿದ್ದು ಎಚ್ಚರಿಕೆ ಅಗತ್ಯ ಗಂಡ-ಹೆಂಡತಿಯ ಮಧ್ಯೆ ಸಣ್ಣ ಕಲಹವಾಗಲಿದ್ದು ಮನೆಯಲ್ಲಿ ಅಶಾಂತಿ ಉಂಟಾಗಲಿದೆ.ವ್ಯಾಪಾರಿಗಳಿಗೆ ನಿರೀಕ್ಷಿತ ವ್ಯವಹಾರವಾಗುವುದಿಲ್ಲ ರಾಜಕಾರಣಿಗಳಿಗೆ ಒಂದಿಷ್ಟು ಅವಕಾಶವಿದ್ದು ಜಾಣ್ಮೆಯಿಂದ ಬಳಸಿಕೊಳ್ಳಬೇಕು.ವಿದ್ಯಾರ್ಥಿಗಳಿಗೆ ಪ್ರಯತ್ನದಿಂದ ಫಲದೊರಕುತ್ತದೆ.
#####
ವೃಶ್ಚಿಕ
ಹೊಸವ್ಯವಹಾರ ಪ್ರಾರಂಭಿಸಲು ಉತ್ತಮವಾರ.ಹೊಸವಸ್ತುಗಳ ಖರೀದಿಯಾಗಲಿದೆ.ನ್ಯಾಯಾಲಯದಲ್ಲಿರುವ ಹಣಕಾಸಿನ ವ್ಯವಹಾರದಲ್ಲಿ ಜಯದೊರಕಲಿದೆ.ಮೇಲಾಧಿಕಾರಿಗಳ ಪ್ರಶಂಸೆಯಿಂದ ಕಚೇರಿಯಲ್ಲಿ ನಿಮ್ಮ ಗೌರವ ಹೆಚ್ಚಲಿದೆ.ವಿದ್ಯುತ್ ಉಪಕರಣಗಳ ವ್ಯವಹಾರ ಮಾಡುವವರಿಗೆ ಅನುಕೂಲವಿದೆ.ರಾಜಕಾರಣಿಗಳಿಗೆ ಉತ್ತಮ ಅವಕಾಶವಿದೆ.ವಿದ್ಯಾರ್ಥಿಗಳಿಗೆ ಉತ್ತಮವಾಗಿದ್ದು ಉನ್ನತ ವ್ಯಾಸಂಗಕ್ಕೆ ಅವಕಾಶ ದೊರೆಯಲಿದೆ.
######
ಧನಸ್ಸು
ಆದಾಯಕ್ಕಿಂತ ಖರ್ಚು ಹೆಚ್ಚಾಗಲಿದೆ.ಇದರಿಂದ ಸಾಲದ ಸುಳಿಯಲ್ಲಿ ಸಿಲುಕುವ ಸಾಧ್ಯತೆ ಇದೆ.ಉದ್ಯೋಗಿಗಳಿಗೆ ಕಚೇರಿಯಲ್ಲಿ ಅಪಾಯ ಹಾಗೂ ಅಪವಾದ. ಬರುವ ಸಾಧ್ಯತೆ ಇದೆ ವ್ಯಾಪಾರಿಗಳಿಗೆ ಉತ್ತಮ ವ್ಯವಹಾರವಾಗಲಿದೆ ಕೃಷಿಕ್ಷೇತ್ರದಲ್ಲಿ ಉತ್ತಮ ಲಾಭವಾಗಲಿದೆ.ರಾಜಕಾರಣಿಗಳಿಗೆ ಉತ್ತಮ ಅವಕಾಶವಿದೆ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶವಿದೆ.
ದುರ್ಗಾರಾಧನೆ ಮಾಡುವುದು ಉತ್ತಮ
#####
ಮಕರ
ಹಣಕಾಸಿನ ವ್ಯವಹಾರ ಉತ್ತಮವಾಗಿದೆ.ಕುಟುಂಬದ ಮನಸ್ತಾಪದಿಂದ ಮನೋವ್ಯಥೆ ಉಂಟಾಗಲಿದೆ.ಹೊಸ ವಸ್ತುಗಳ ಖರೀದಿ ಮಾಡಲಿದ್ದಿರಿ ಕೃಷಿ ಕ್ಷೇತ್ರದಲ್ಲಿರುವವರಿಗೆ ಹಾಗೂ ಕೃಷಿಉಪಕರಣ ಮಾರಾಟಗಾರರಿಗೆ ಉತ್ತಮ ಲಾಭವಾಗಲಿದೆ
ಬೆನ್ನು ನೋವು,ಹೊಟ್ಟೆ ನೋವಿನಿಂದ ಬಳಲಲಿದ್ದಿರಿ.ನಿರ್ಲಕ್ಷ ಮಾಡಿದರೆ ಅಪಾಯವಾಗಲಿದೆ.ರಾಜಕಾರಣಿಗಳಿಗೆ ಶುಭವಾರ್ತೆ ಬರಲಿದೆ.ವಿದ್ಯಾರ್ಥಿಗಳಿಗೆ ಉತ್ತಮ ವಾರವಾಗಲಿದೆ.
ಗುರು ಆರಾಧನೆ ಮಾಡುವುದು ಉತ್ತಮ
#####
ಕುಂಭ
ಹೊಸ ಕೆಲಸದಿಂದ ಹೊಸ ಉತ್ಸಾಹ ಬರಲಿದೆಮನೆಯಲ್ಲಿ ಸಂತೋಷದ ವಾತಾವರಣ ಇರುತ್ತದೆ.ಬಂಧುಗಳ ಆಗಮನವಾಗಲಿದೆ.ಹೊಸವಸ್ತುಗಳ ಖರೀದಿ ಮಾಡಲಿದ್ದಿರಿ
ಆರೋಗ್ಯದಲ್ಲಿ ತೊಂದರೆಯಾಗಲಿದ್ದು ತಲೆ ನೋವಿನಿಂದ ಬಳಲಲಿದ್ದರಿ. ಬಟ್ಟೆ ವ್ಯಾಪಾರಿಗಳಿಗೆ ಉತ್ತಮ ವ್ಯವಹಾರವಾಗಲಿದೆ ರಾಜಕಾರಣಿಗಳಿಗೆ ಅನಿರೀಕ್ಷಿತ ಹುದ್ದೆ ದೊರಕಲಿದೆ.ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶವಿದೆ.
#####
ಮೀನ
ಕುಟುಂಬದಲ್ಲಿ ಮನಸ್ತಾಪವಾಗುವುದರಿಂದ ಅಶಾಂತಿ ಕಾಡಲಿದೆ.
ವಾಹನದಲ್ಲಿ ಓಡಾಡುವಾಗ ಎಚ್ಚರಿಕೆ ಅಗತ್ಯ.ಬಂಗಾರದ ಒಡವೆಗಳನ್ನು ಖರೀದಿಸಲಿದ್ದಿರಿ.ವ್ಯಾಪಾರಿಗಳಿಗೆ ಉತ್ತಮ ವ್ಯವಹಾರವಾಗಲಿದೆ.ಹಿಂದೆ ನಿಮ್ಮಿಂದ ದೂರ ಸರಿದಿದ್ದ ಸ್ನೇಹಿತರು ಮರಳಿ ನಿಮ್ಮಲ್ಲಿಗೆ ಬರಲಿದ್ದಾರೆ.ಕಚೇರಿಯಲ್ಲಿ ನಿಮ್ಮ ಪರವಾದ ವಾತಾವರಣ ಇರುತ್ತದೆ.ರಾಜಕಾರಣಿಗಳಿಗೆ ಉತ್ತಮ ಅವಕಾಶ.ವಿದ್ಯಾರ್ಥಿಗಳಿಗೆ ಪ್ರಯತ್ನದಿಂದ ಫಲವಿದೆ.
ಆಂಜನೇಯನ ಆರಾಧನೆ ಉತ್ತಮ
######