ಆದ್ಯೋತ ಲೋಕಲ್ ನ್ಯೂಸ್

ಆದ್ಯೋತ್ ನ್ಯೂಸ್ ಡೆಸ್ಕ್: ಸಿದ್ದಾಪುರ ಪಟ್ಟಣ ಪಂಚಾಯತ್ ನಿಂದ ಶುಕ್ರವಾರ ಪಟ್ಟಣದ ಕೆಲವು ಭಾಗದಲ್ಲಿ ಸೊಡಿಯಂ ಹೈಪೊಲೋರೈಟ್ ದ್ರಾವಣವನ್ನು ಸಿಂಪಡಿಸಲಾಯಿತು. ಅಗ್ನಿಶಾಮಕ ವಾಹನದ ಮೂಲಕ ರಾಜಮಾರ್ಗ, ಪಟ್ಟಣ ಪಂಚಾಯತ ರಸ್ತೆ, ಕಾಳಿದಾಸಗಲ್ಲಿ, ಕನಕದಾಸಗಲ್ಲಿ, ಕೊಂಡ್ಲಿ, ಹಾಳದಕಟ್ಟಾ, ರವೀಂದ್ರನಗರ, ಎಪಿಎಂಸಿ ರಸ್ತೆ ಮುಂತಾದ ಕಡೆ ದ್ರಾವಣವನ್ನು ಸಿಂಪಡಿಸಲಾಯಿತು. ತಹಸೀಲ್ದಾರ ಮಂಜುಳಾ ಭಜಂತ್ರಿ, ಪಪಂ ಮುಖ್ಯಾಧಿಕಾರಿ ಕುಮಾರ ನಾಯ್ಕ, ತಾಪಂ ಮುಖ್ಯಾಧಿಕಾರಿ ಪ್ರಶಾಂತ, ಸಿಪಿಐ ಪ್ರಕಾಶ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕೆ.ಎಫ್.ಡಿ ಶಂಕಿತ ವ್ಯಕ್ತಿ ಆಸ್ಪತ್ರೆಯಿಂದ ಪರಾರಿ – ಮಂಗನಖಾಯಿಲೆ ಪೀಡಿತ ಪ್ರದೇಶವಾಗಿರುವ ಸಿದ್ದಾಪುರ ತಾಲೂಕಿನ ಹೊನ್ನೆಘಟಕಿಯ 28 ವರ್ಷದ ವ್ಯಕ್ತಿಯೊಬ್ಬ ಸ್ಥಳೀಯ ತಾಲೂಕಾ ಆಸ್ಪತ್ರೆಯಿಂದ ಪರಾರಿಯಾಗಿರುವ ಘಟನೆ ಗುರುವಾರ ನಡೆದಿದೆ. ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಈ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಈತನ ರಕ್ತದ ಮಾದರಿಯನ್ನು ಪರಿಶೀಲನೆಗಾಗಿ ಶಿವಮೊಗ್ಗಕ್ಕೆ ಕಳುಹಿಸಲಾಗಿತ್ತು. ಆದರೆ ಗುರುವಾರ ಸಂಜೆ ಈ ವ್ಯಕ್ತಿ ಕಾಣೆಯಾಗಿರುವುದು ತಿಳಿದು ಬಂದಿದೆ. ಗಾಬರಿಗೊಂಡ ಆಸ್ಪತ್ರೆಯವರು ಹುಡುಕಿಕೊಡುವಂತೆ ಪೊಲೀಸ್ ಮೊರೆ ಹೋಗಿದ್ದಾರೆ. ಶುಕ್ರವಾರ ತಡರಾತ್ರಿಯವರೆಗೂ ವ್ಯಕ್ತಿಯು ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.

About the author

Adyot

2 Comments

Leave a Comment