ಆದ್ಯೋತ್ ಸುದ್ದಿನಿಧಿ:
ಸರ್ಕಾರಿ ನೌಕರಿ ಕೊಡಿಸುವುದಾಗಿ ನಂಬಿಸಿ ಸುಮಾರು 25 ಲಕ್ಷ 50 ಸಾವಿರ ಹಣವನ್ನು ಬೇರೆ ಬೇರೆ ಜನರಿಂದ ಪಡೆದು ಮೋಸ ಮಾಡಿ,ಬೇರೆ ಬೇರೆ ಜಿಲ್ಲೆಯ ಎಸ್.ಪಿ.ಯಬರ ನಕಲಿ ಸಹಿ ಮತ್ತು ದಾಖಲೆಯನ್ನು ಸೃಷ್ಟಿ ಮಾಡುತ್ತಿದ್ದ ಮಾಜಿ ಪೊಲೀಸಪ್ಪನನ್ನು ಬಂಧಿಸುವಲ್ಲಿ ಉತ್ತರಕನ್ನಡ ಜಿಲ್ಲೆಯ
ಮುಂಡಗೋಡು ಪೊಲೀಸ್ ರು ಯಶಸ್ವಿಯಾಗಿದ್ದಾರೆ.
ಆರೋಪಿಯನ್ನು ಸಂತೋಷ ತಿಪ್ಪಣ್ಣ ಗುದಗಿಯಾಗಿದ್ದು ಹಾವೇರಿ ಜಿಲ್ಲೆಯ ಬ್ಯಾಡಗಿ ನಗರದವನು. 2007 ರಲ್ಲಿ ನಾಗರೀಕ ಪೊಲೀಸ್ ಕಾನಸ್ಟೇಬಲ್ ಆಗಿ ಬೆಂಗಳೂರಿನಲ್ಲಿ ನೇಮಕಾತಿ ಹೊಂದಿದ್ದು ಬೆಂಗಳೂರು ಡಿ.ಜೆ ಹಳ್ಳಿ ಠಾಣೆಯಲ್ಲಿ ಕರ್ತವ್ಯ ನಿರ್ವಹಣೆ ಮಾಡುವಾಗ ಇದೇ ರೀತಿಯಲ್ಲಿ ಬೆಂಗಳೂರಿನಲ್ಲಿ ಕೆಲವು ಅಭ್ಯರ್ಥಿಗಳಿಗೆ ನೇಮಕಾತಿ ಮಾಡಿಸುವುದಾಗಿ ಮೋಸ ಮಾಡಿದ ಬಗ್ಗೆ ತಿಳಿದು ಇಲಾಖೆಯಿಂದ ಇವನನ್ನು ತೆಗೆದುಹಾಕಲಾಗಿದೆ ಎಂದು ತಿಳಿದು ಬಂದಿದೆ.
####
ಹೊನ್ನಾವರದಲ್ಲಿ ಸಮುದ್ರದಲ್ಲಿ ಬೋಟ್ ಮುಳುಗಡೆ
ಹೊನ್ನಾವರ ತಾಲೂಕಿನ ಬಸವನ ದುರ್ಗದ ಬಳಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಬೋಟ್ ಮುಳುಗಡೆಯಾಗಿದ್ದು ಮೀನು ಮತ್ತು ಬೋಟ್ ನಲ್ಲಿರುವ ಸಲಕರಣೆ ಸಮುದ್ರದ ಪಾಲಾಗಿದ್ದು ಲಕ್ಷಾಂತರರೂ.ಹಾನಿಯಾಗಿದೆ.
ಕುಂದಾಪುರ ಶಿವರಾಮ ಮಹಾಲಿಂಗ ನಾಯ್ಕರಿಗೆ ಸೇರಿದ ಬೋಟ್ ಇದಾಗಿದ್ದು ಕಳೆದ ಎರಡು ದಿನದ ಹಿಂದೆ ಆಳ ಸಮುದ್ರಕ್ಕೆ ಮೀನುಗಾರಿಕೆ ತೆರಳಿ ವಾಪಸ್ಸು ಕಾಸರಕೋಡ ಬಂದರು ಪ್ರದೇಶಕ್ಕೆ ಆಗಮಿಸುವ ವೇಳೆ ಈ ದುರ್ಘಟನೆ ಸಂಭವಿಸಿದೆ.ಬೋಟನಲ್ಲಿದ್ದ ಆರು ಜನ ಮೀನುಗಾರರನ್ನು ಮತ್ತೊಂದು ಬೋಟ್ ಹಾಗೂ ಕರಾವಳಿ ಕಾವಲುಪಡೆಯ ಸಿಬ್ಬಂದಿಗಳು ರಕ್ಷಣೆ ಮಾಡಿದ್ದಾರೆ.
