ಸಿದ್ದಾಪುರದಲ್ಲಿ ಶಿಕ್ಷಕರ ದಿನೋತ್ಸವ -ಸನ್ಮಾನ ಕಾರ್ಯಕ್ರಮ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಪಟ್ಟಣದ ರಾಘವೇಂದ್ರಮಠದ ಸಭಾಭವನದಲ್ಲಿ ಶಿಕ್ಷಕರ ದಿನೋತ್ಸವ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ,ಕೆಲಸದಿಂದ ನಿವೃತ್ತರಾದವರು ಬದುಕಿನ ಇತರ ಚಟುವಟಿಕೆಯಿಂದ ನಿವೃತ್ತರಾಗಬೇಕಾದ ಅವಶ್ಯಕತೆಯಿಲ್ಲ ಅವರು ಇನ್ನಿತರ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು ನಿವೃಥ್ತರಾದ ಶಿಕ್ಷಕರ ಅನುಭವ ಹಾಗೂ ಜ್ಞಾನವನ್ನು ಶಿಕ್ಷಣ ಇಲಾಖೆ ಪಡೆಯಬೇಕು.ನಾವು ಬ್ರಿಟೀಷ್‍ರು ಬಿಟ್ಟು ಹೋಗಿರುವ ಗುಲಾಮಿ ಶಿಕ್ಷಣವನ್ನು ಪಡೆಯುತ್ತಿದ್ದೇವೆ ನಮ್ಮ ಸಂಸ್ಕøತಿಯನ್ನು ಎತ್ತಿಹಿಡಿಯುವ ಹೊಸಶಿಕ್ಷಣ ನೀತಿಯನ್ನು ಜಾರಿಗೆ ತರಲು ಕೇಮದ್ರ ಸರಕಾಋ ಮನಸ್ಸು ಮಾಡಿದೆ ಕೆಲವರು ಇದಕ್ಕೆ ಅಪಸ್ವರ ತೆಗೆಯುತ್ತಿದ್ದಾರೆ ಶಿಕ್ಷಕರು ಹೊಸಶಿಕ್ಷಣ ನೀತಿಯ ಬಗ್ಗೆ ಜನರಿಗೆ ತಿಳುವಳಿಕೆ ನೀಡಬೇಕು. ಶಿಕ್ಷಕರು ಮಕ್ಕಳನ್ನು ಕೇವಲ ಪಠ್ಯಪುಸ್ತಕಗಳಿಗೆ ಸೀಮಿತಗೊಳಿಸದೆ ಅವರ ಬೌದ್ಧಿಕ ಶಕ್ತಿ ಹೆಚ್ಚಾಗುವಂತಹ ಜ್ಞಾನವನ್ನು ನೀಡಬೇಕು. ನಾನು ಶಿಕ್ಷಣ ಮಂತ್ರಿಯಾಗಿದ್ದ ಸಮಯದಲ್ಲಿ ಚದುರಂಗ ದಿನಾಚರಣೆಯನ್ನು ಆಚರಿಸಲು ಸೂಚಿಸಿದ್ದೆ ಇದರಿಂದ ಮಕ್ಕಳ ಬುದ್ದಿಶಕ್ತಿ ಚುರುಕಾಗುತ್ತದೆ ಆದರೆ ನಂತರ ಬಂದ ಸರಕಾರ ಇದನ್ನು ನಿಲ್ಲಿಸಿದೆ ಈಗ ಈ ದಿನಾಚರಣೆಯನ್ನು ಪುನಃ ಪ್ರಾರಂಭಿಸಬೇಕೆಂದು ಈಗೀನ ಶಿಕ್ಷಣ ಸಚೀವರಿಗೆ ಸೂಚಿಸುತ್ತೇನೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಪಂ ಅಧ್ಯಕ್ಷೆ ಚಂದ್ರಕಲಾ ನಾಯ್ಕವಹಸಿದ್ದರೆ, ಮುಖ್ಯ ಅತೀಥಿಯಾಗಿ ತಹಸೀಲ್ದಾರ ಪ್ರಸಾದ ಎಸ್.ಎ.ಭಾಗವಹಿಸಿದ್ದರು.
ಕ್ಷೇತ್ರಶಿಕ್ಷಣಾಧಿಕಾರಿ ಸದಾನಂದ ಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು. ಸುಮನಾ ಹೆಗಡೆ ಮತ್ತು ಸಂಗಡಿಗರು ಪ್ರಾರ್ಥನೆ ಹಾಡಿದರು. ವೆಂಕಟೇಶ ಮಡಿವಾಳ,ಟಿ.ಎನ್.ಭಟ್ಟ ನಿರೂಪಣೆ ಮಾಡಿದರು.ಜಿ.ಐ.ನಾಯ್ಕ ವಂದನಾರ್ಪಣೆ ಮಾಡಿದರು.
ಇದೇ ಸಂದರ್ಭದಲ್ಲಿ ಪ್ರಾಥಮಿಕ ಶಾಲೆ,ಪ್ರೌಢಶಾಲೆ ಹಾಗೂ ಅನುದಾನಿತ ಪ್ರೌಢಶಾಲೆಗಳ ಇಪ್ಪತ್ತು ನಿವೃತ್ತ ನೌಕರರಿಗೆ ಸನ್ಮಾನಿಸಲಾಯಿತು. 2020-21 ಹಾಗೂ 2021-22ನೇ ಸಾಲಿನ ಜಿಲ್ಲಾ ಪ್ರಶಸ್ತಿ ಪಡೆದ ಅಂಜನಾ ಎಸ್.ಭಟ್,ಪುರುಷೋತ್ತಮ ಜಿ.ನಾಯ್ಕ,ಪುಟ್ಟಪ್ಪ ತಿಮ್ಮಣ್ಣ ವಾಲ್ಮೀಕಿ,ಲಲಿತಾ ಗಣಪತಿ ಹೆಗಡೆ,ಕೆ.ಪಿ.ರವಿ,ರಾಘವೇಂದ್ರ ನಾಯ್ಕರನ್ನು ಸನ್ಮಾನಿಸಲಾಯಿತು.ಹಾಗೂ ಡಾ.ಎಪಿಜೆ ಅಬ್ದುಲ್ ಕಲಾಂ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಭಾರತಿ ನಾಯ್ಕ,ಶ್ರೀಮತಿ ಭಟ್ಟ,ಮೋಹಿನಿ ದೇಶಭಂಡಾರ,ಇಂದಿರಾ ಪಾವಸ್ಕರ್,ದತ್ತಾತ್ರೇಯ ಭಾಗವತ್ ಎನ್.ಬಿ.ಪಟಗಾರರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎಸ್.ಎಸ್.ಎಲ್.ಸಿ.ಯಲ್ಲಿ ಅತ್ಯಧಿಕ ಅಂಕಗಳಿಸಿದ ರೇಷ್ಮಾ ಗಣೇಶ ಹೆಗಡೆ,ಎಸ್.ಎನ್.ಸುನಯ,ಹೇಮಾ ಉಮೇಶ ಹೆಗಡೆ,ತೇಜಸ್ವಿ ವಸಂತ ಹೆಗಡೆ ಶ್ರೀರಾಮ ಪ್ರಕಾಶ ಹೆಗಡೆ,ಶ್ರವಣ ಹೆಗಡೆ,ಚಿನ್ಮಯ ಕೆ.ನಾಯ್ಕರನ್ನು ಸನ್ಮಾನಿಸಲಾಯಿತು.
####

####

#####

####

####

####

About the author

Adyot

Leave a Comment