ಶಿರಸಿ ಆಭರಣ ಅಂಗಡಿಯಲ್ಲಿ ಸರ ಕಸಿದು ಪರಾರಿ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಶಿರಸಿ ಪಟ್ಟಣದಲ್ಲಿ ಶುಕ್ರವಾರ ಆಭರಣ ಖರೀದಿಯ ನೆಪದಲ್ಲಿ ಬಂದು ಬಂಗಾರದ ಸರವನ್ನು ಕಸಿದುಕೊಂಡು ಪರಾರಿಯಾದ ಘಟನೆ ನಡೆದಿದೆ.

ಶಿರಸಿ ಝೂಸರ್ಕಲ ಹತ್ತಿರದ ಬಣ್ಣದ ಕಾಂಪ್ಲೇಕ್ಸನಲ್ಲಿರುವ ರತ್ನ ದೀಪ ಆಭರಣದ ಅಂಗಡಿಗೆ ಸಂಜೆ ಅಪರಿಚಿತನೋರ್ವ ಬಂದು ಆಭರಣ ಖರೀದಿ ಮಾಡುವುದಕ್ಕೆ ಬಂಗಾರದ ಸರ ತೋರಿಸುವಂತೆ ತಿಳಿಸಿ ಅಂಗಡಿಯ ಮಾಲಿಕ ರವಿ ವೆರ್ಣೇಕರ ತೋರಿಸುತ್ತಿರುವಾಗ 22 ಗ್ರಾಂ ತೂಕದ 2 ಬಂಗಾರದ ಚೈನನ್ನು ಕಸಿದುಕೊಂಡು ಓಡಿ ಹೋಗಿ ರಸ್ತೆಯಲ್ಲಿ ನಿಂತಿದ್ದ ಕೆಂಪುಬಣ್ಣದ ಕೆ.ಎ.22 ನೊಂದಣಿ ಸಂಖ್ಯೆಯ ಸ್ವೀಪ್ಟ್ ಕಾರಿನಲ್ಲಿ ಪರಾರಿಯಾಗಿದ್ದಾನೆ.

###
ಆರೋಪಿಯ ಚಲನವಲನ ಹಾಗೂ ಸರವನ್ನು ಕಸಿದುಕೊಳ್ಳುತ್ತಿರುವುದು ಸಿಸಿ ಕ್ಯಾಮರದಲ್ಲಿ ಸೆರೆಯಾಗಿದ್ದು ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

About the author

Adyot

Leave a Comment