ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಶಿರಸಿ ತೋಟಗಾರಿಕಾ ಮಹಾವಿದ್ಯಾಲಯದಲ್ಲಿ ಅಂಗಾಂಶ ಸಸಿ ಪ್ರದರ್ಶನ ಮತ್ತು ಮಾರಾಟ ಸಂತೆಗೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ
ಚಾಲನೆ ನೀಡಿದರು.
ವಿಶ್ವೇಶ್ವರ ಹೆಗಡೆ ಕಾಗೇರಿ, ರೈತರ ಪರ ಸಂಶೋಧನೆಗಳಲ್ಲಿ ತೋಟಗಾರಿಕಾ ವಿದ್ಯಾರ್ಥಿಗಳು ಹೆಚ್ಚೆಚ್ಚು ತೊಡಗಿಕೊಳ್ಳಬೇಕು
ರೈತರ ಬದುಕು ಕಷ್ಟದಲ್ಲಿದೆ. ಕಷ್ಟದಲ್ಲಿ ಇರುವ ಅನ್ನದಾತರಿಗೆ ಸಂಶೋಧನೆಗಳು, ತಂತ್ರಜ್ಞಾನಗಳು ಕೈ ಹಿಡಿಯಬೇಕು. ಕೃಷಿಕರ ಬದುಕು ಎತ್ತರಿಸಲು, ರೈತರ ಆರ್ಥಿಕತೆ ಸಂಪನ್ನವಾಗಲು ತೋಟಗಾರಿಕಾ ಕಾಲೇಜಿನ ಸಂಶೋಧನೆಗಳು ಕಾರಣವಾಗಬೇಕು. ಅಂಗಾಂಶ ಸಸಿಗಳನ್ನು ಇನ್ನೂ ಯಾವ ಗಿಡದಲ್ಲಿ ಮಾಡಬಹುದು ಎಂಬ ಶೋಧನೆ ಮಾಡಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ತೋಟಗಾರಿಕಾ ಕ್ರಾಂತಿಗೆ ಕಾರಣರಾದ ಎಂ.ಎಚ್.ಮರಿಗೌಡರ ಸ್ಮರಣೆ ಕೂಡ ಮಾಡಿದರು.
ಖಾಸಗಿ ತೋಟಗಾರಿಕಾ ಕಾಲೇಜು ನಡೆಸಲು ೧೫೦ ಎಕರೆ ಭೂಮಿ ಬೇಕಿರುವದರಿಂದ ಸರಕಾರಿ ಕಾಲೇಜು ಮಾತ್ರ ನಡೆಯುತ್ತಿದೆ ಮುಂದಿನ ದಿನದಲ್ಲಿ ಇದೂ ಸಾಧ್ಯವಾಗಬಹುದು ಎಂದು ಕಾಗೇರಿ ಹೇಳಿದರು.

ಬಾಗಲಕೋಟೆ ತೋಟಗಾರಿಕಾ ವಿವಿಗೆ ಎಂಟು ತೋಟಗಾರಿಕಾ ಕಾಲೇಜು, ಒಂದು ಆಹಾರ ತಂತ್ರಜ್ಞಾನ ಕಾಲೇಜಿದೆ. ಮೂರು ವರ್ಷಗಳಿಂದ ಎಂಟುಕೋಟಿ ರೂ. ಇದ್ದ ಅನುದಾನ ೪ ಕೋಟಿಗೆ ಇಳಿದಿದೆ. ಇದನ್ನು ಹೆಚ್ಚಿಸಿ ಕೊಡಬೇಕು ಎಂದು ಮನವಿ ಮಾಡಿದ ವಿದ್ಯಾರ್ಥಿ ಕಲ್ಯಾಣಾಧಿಕಾರಿ ಡಾ.ರಾಮಚಂದ್ರ ನಾಯಕ ಐದು ಸಾವಿರ ಅಂಗಾಂಶ ಸಿಸಿ ಮಾರಾಟಕ್ಕೆ ಸಜ್ಜಾಗಿದೆ. ಮಾರುಕಟ್ಟೆಗಿಂತ ೬ ರೂ.ಕಡಿಮೆ ದರದಲ್ಲಿ ನೀಡಲಾಗುತ್ತದೆ ಎಂದು ಹೇಳಿದರು.

ಈ ವೇಳೆ ವಿಸ್ತರಣಾ ನಿರ್ದೇಶಕ ಡಾ. ಎಸ್.ಐ.ಅಥಣಿ, ಡೀನ್ ಡಾ.ಎನ್.ಕೆ.ಹೆಗಡೆ, ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ರಾಜೇಶ ಶೆಟ್ಟಿ, ಸುಬ್ರಾಯ ಹೆಗಡೆ ಇತರರು ಇದ್ದರು.
ಪ್ರದರ್ಶನ ಮಾರಾಟ ಘಟಕಕ್ಕೆ ಚಾಲನೆ ನೀಡಿದ ಕಾಗೇರಿ ಅಂಗಾಂಶ ಸಸಿ ಉತ್ಪಾದನಾ ಕೇಂದ್ರಕ್ಕೂ ಭೇಟಿ ನೀಡಿದರು. ಪ್ರಥಮ ವರ್ಷದ ವಿದ್ಯಾರ್ಥಿಗಳ ಜೊತೆಗೂ ಸಂವಾದ ನಡೆಸಿದರು. ಕಾಗೇರಿ ಅವರಿಗೂ ಅಂಗಾಂಶ ಬಾಳೆಸಸಿ ಗುಚ್ಚ ನೀಡಿ ಗೌರವಿಸಿದರು.

ಮಾರಾಟ ಸಂತೆಯಲ್ಲಿ ಏನೇನು ಇದೆ?
ನೇಂದ್ರ, ಏಲಕ್ಕಿ ಬಾಳೆಯ ವಿವಿಧ ಅಂಗಾಸ ಸಸಿಗಳು, ಕಾಳು ಮೆಣಸು, ಏಲಕ್ಕಿ, ಅಡಿಕೆ, ನೆಲ್ಲಿ, ನುಗ್ಗೆ, ಟೊಮೇಟೋ ಸೇರಿದಂತೆ ತರಾವರಿ ತೋಟಗಾರಿಕಾ ಹೈಬ್ರೀಡ್ ಸಸ್ಯ ಗಳು, ಜೈವಿಕ ಪೀಡೆ ನಾಶಕಗಳು, ಟ್ರೈಕೋಡರ್ಮಗಳು ಸೇರಿದಂತೆ ಹಲವು ಮಾದರಿಗಳು ಇವೆ
