ಮೋದಿ ಜನ್ಮದಿನಾಚರಣೆ ಪ್ರಯುಕ್ತ ಗೆಳೆಯರ ಬಳಗದವರಿಂದ ರಕ್ತದಾನ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆ ಸಿದ್ದಾಪುರದಲ್ಲಿ ಪ್ರದಾನಿ ನರೇಂದ್ರ ಮೋದಿಯವರ 71ನೇ ಜನ್ಮದ ಪ್ರಯುಕ್ತ ಸಿದ್ದಾಪುರ
ಗೆಳೆಯರಬಳಗದವರಿಂದ ರಕ್ತದಾನ ಶಿಬಿರ ನಡೆಯಿತು.
ಶಿಬಿರ ಉದ್ಘಾಟಿಸಿ ಮಾತನಾಡಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ,ನಮ್ಮ ಜೀವನದಲ್ಲಿ ಅಕ್ಷರದಾನಕ್ಕೆ ಎಷ್ಟು ಮಹತ್ವವಿದೆಯೋ ಜೀವವನ್ನು ಉಳಿಸುವ ರಕ್ಷದಾನಕ್ಕೂ ಅಷ್ಟೆ ಮಹತ್ವವಿದೆ ರಕ್ತದಾನ ಶಿಬಿರವು ಜನಸಮುದಾಯದ ಮಧ್ಯೆ ಆಗಬೇಕು ಇದರಿಂದ ರಕ್ತದಾನದ ಬಗ್ಗೆ ಜನರಲ್ಲಿ ಅರಿವು ಹೆಚ್ಚುತ್ತದೆ. ಯುವಜನತೆ ಇಂತಹ ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ ಸಮಾಜದಲ್ಲಿ ಸಾಕಷ್ಟು ಜನರು ಬೇರೆ ಬೇರೆ ರೀತಿಯ ಕಷ್ಟಕ್ಕೆ ಸಿಲುಕುತ್ತಿದ್ದಾರೆ ಅವರ ಕಷ್ಟ ಪರಿಹರಿಸುವಲ್ಲಿ ನಾವು ನಮ್ಮ ಪ್ರಯತ್ನ ಮಾಡಬೇಕು ಸ್ವಾಮಿ ವಿವೇಕಾನಂದರು ಹೇಳುವಂತೆ ತ್ಯಾಗ ಮತ್ತು ಸೇವೆಯನ್ನು ನಮ್ಮ ಜೀವನದಲ್ಲಿ ಅತ್ಯವಶ್ಯಕವಾಗಿ ಅಳವಡಿಸಿಕೊಳ್ಳಬೇಕು ಇದರಿಂದ ಜನಜೀವನಕ್ಕೆ ಮತ್ತು ಸಮಾಜಕ್ಕೆ ಒಳ್ಳೆಯದಾಗುತ್ತದೆ ಸ್ಥಳೀಯ ಗೆಳೆಯರ ಬಳಗ ನಾಲ್ಕೆನೇ ಬಾರಿ ನರೇಂದ್ರ ಮೋದಿಯವರ ಜನ್ಮದಿನದ ಪ್ರಯುಕ್ತ ಇಂತಹ ಸ್ತುತ್ಯಾರ್ಹ ಕಾರ್ಯಮಾಡುತ್ತಿರುವುದು ಪ್ರಶಂಸಾರ್ಹವಾಗಿದೆ ಎಂದು ಹೇಳಿದರು.

ರಾಜ್ಯದ ಪ್ರತಿಯೊಂದ ಸರಕಾರಿ ಆಸ್ಪತ್ರೆಯಲ್ಲೂ ಡಯಾಲಿಸಿಸ್ ಕೇಂದ್ರ ಸ್ಥಾಪನೆ ಮಾಡಲಾಗುತ್ತಿದೆ ಇದು ಪ್ರತಿಷ್ಠೆಯ ಕೆಲಸವಾಗಿದೆ.ಹಿಂದೆ ಖಾಸಗಿಯವರೊಂದಿಗೆ ಒಪ್ಪಂದ ಮಾಡಿಕೊಂಡು ಡಯಾಲಿಸಿಸ್ ಕೇಂದ್ರ ನಡೆಸಲಾಗುತ್ತಿತ್ತು ಆದರೆ ಕಳೆದ ನಾಲ್ಕು ತಿಂಗಳಿಂದ ಆರ್ಥಿಕ ಮುಗ್ಗಟ್ಟು ಉಂಟಾದ ಕಾರಣ ಕೆಲವು ಕಡೆ ಒಂದಿಷ್ಟು ತೊಂದರೆಯಾಗುತ್ತಿದೆ. ಇರುವ ಸಮಸ್ಯೆ ಬಗೆಹರಿಸುವ ಬಗ್ಗೆ ವಿಧಾನಸಭಾ ಅಧಿವೇಶನದಲ್ಲೂ ಪ್ರಸ್ತಾಪಿಸಲಾಗಿದೆ ಮತ್ತು ಸರಕಾರಕ್ಕೆ ಸೂಚಿಸಲಾಗಿದೆ ಸಿದ್ದಾಪುರ ಆಸ್ಪತ್ರೆಯಲ್ಲಿ ಎರಡು ಡಯಾಲಿಸಿಸ್ ಕೇಂದ್ರವಿದ್ದು ಮೂರು ಶಿಪ್ಟ್‍ನಲ್ಲಿ ಕಾರ್ಯನಿರ್ವಹಿಸುತ್ತಿವೆ ಈ ಜನೋಪಯೋಗಿ ಕೆಲಸವೂ ನಿಲ್ಲಬಾರದೆಂದು ಆರೋಗ್ಯ ರಕ್ಷಾ ಸಮಿತಿಯಿಮದ ಧನಸಹಾಯ ಮಾಡಲಾಗುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ತಾಪಂ ಮುಖ್ಯಕಾರ್ಯನಿರ್ವಾಹಕ ಪ್ರಶಾಂತ ರಾವ್, ಗೆಳೆಯರ ಬಳಗದ ಅಣ್ಣಪ್ಪ ನಾಯ್ಕ,ಮಂಜುನಾಥ ಭಟ್ಟ,ಸುರೇಶ ನಾಯ್ಕ ಬಾಲಿಕೊಪ್ಪ,ವಿಜಯ ಹೆಗಡೆ ಮುಂತಾಧವರು ಉಪಸ್ಥಿತರಿದ್ದರು.
ಸ್ಥಳೀಯ ತಾಲೂಕು ಆಸ್ಪತ್ರೆ,ಪಂಡಿತ ಸಾರ್ವಜನಿಕ ಆಸ್ಪತ್ರೆ ಶಿರಸಿ,ಐ.ಎಂ.ಎ.ಲೈಪ್‍ಲೈನ್ ಶಿರಸಿ ಇವರ ಸಹಯೋಗದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಒಟ್ಟೂ 55 ಯುವಕರು ರಕ್ತದಾನ ಮಾಡಿದರು.

About the author

Adyot

Leave a Comment