ಹೊಸಶಿಕ್ಷಣ ನೀತಿ ಜಾರಿಗೆ ತರುವುದು ತಪ್ಪಲ್ಲ ಆದರೆ ಚರ್ಚೆ ಇಲ್ಲದೆ ಜಾರಿಗೆ ತರಲು ಹೊರಟಿರುವುದು ತಪ್ಪು

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಕವಂಚೂರು ಗ್ರಾಪಂ ವ್ಯಾಪ್ತಿಯ ಬಸೂರಮನೆ ಹಳ್ಳಕ್ಕೆ ರಾಜ್ಯಸಭಾ ಕ್ಷೇತ್ರಾಭಿವೃದ್ಧಿ ನಿಧಿಯಿಂದ ನಿರ್ಮಿಸಲಾದ ನೂತನ ಸೇತುವೆಯನ್ನು ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ ಲೋಕಾರ್ಪಣೆ ಮಾಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದಜಿ.ಸಿ.ಚಂದ್ರಶೇಖರ,
ಸಾಮಾಜಿಕ ಜಾಲತಾಣದಲ್ಲಿ ಇಲ್ಲಿಯ ವಿದ್ಯಾರ್ಥಿಗಳಿಗೆ,ಜನರಿಗೆ ಮಳೆಗಾಲದಲ್ಲಿ ಓಡಾಡಲು ತೊಂದರೆಯಾಗುತ್ತಿದೆ ಎಂಬ ವಿಷಯವನ್ನು ತಿಳಿದು ಇಲ್ಲಿಗೆ ಅನುದಾನವನ್ನು ನೀಡಿದ್ದೆನೆ ಅಭಿವೃದ್ಧಿಗೆ ರಾಜಕೀಯ ತರುವುದು ಸರಿಯಲ್ಲ ತಮಿಳುನಾಡು,ಆಂದ್ರಪ್ರದೇಶದಂತೆ ನಮ್ಮ ಸಂಸದರು ರಾಜ್ಯದ ಅಭಿವೃದ್ಧಿ ವಿಷಯ ಬಂದಾಗ ಪಕ್ಷಾತೀತವಾಗಿ ಒಗ್ಗಟ್ಟಾಗಬೇಕು ಎಂದು ಹೇಳಿದರು.

ಮೂಲಭೂತ ಸೌಕರ್ಯವಿಲ್ಲದೆ ಹೊಸಶಿಕ್ಷಣ ನೀತಿಯನ್ನು ಜಾರಿಗೆ ತರಲು ಹೊರಟಿರುವ ಕೇಂದ್ರಸರಕಾರದ ನಡೆ ಸರಿಯಾದುದಲ್ಲ ಹೊಸಶಿಕ್ಷಣ ನೀತಿ ತರುವುದು ತಪ್ಪಲ್ಲ ಆದರೆ ಅದರ ಸಾಧಕ-ಬಾಧಕವನ್ನು ಚರ್ಚಿಸಬೇಕು ಸದನದಲ್ಲಿ ಈ ಕುರಿತು ಚರ್ಚೆಯನ್ನು ಮಾಡಬೇಕಿತ್ತು ಆದರೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಸದನದಲ್ಲಿ ಯಾವುದೇ ವಿಧೇಯಕವನ್ನೂ ಚರ್ಚೆ ಮಾಡದೆ ಅಂಗೀಕರಿಸಲಾಗಿದೆ. ಬೇರೆ ಬೇರೆ ಯೋಜನೆಯಂತೆ ಇದು ಬಿಜೆಪಿಯ ಹೇಳಿಕೆಗೆ ಸೀಮಿತವಾಗಿರುತ್ತದೆ. ಹಣಕಾಸು ಸಚೀವರು ಯುಪಿಎ ಸರಕಾರದ ಅವಧಿಯಲ್ಲಿ ಆಯಿಲ್ ಬಾಂಡ್ ತರಲಾಗಿದೆ ಎಂದು ಹೇಳುತ್ತಾರೆ ಆದರೆ 1995ರಲ್ಲೆ ಆಯಿಲ್ ಬಾಂಡ್ ಬಿಡುಗಡೆ ಮಾಡಲಾಘಿತ್ತು ವಾಜಪೇಯಿ ಸರಕಾರದಲ್ಲಿ ಹತ್ತುಸಾವಿರ ಕೋಟಿರೂ. ಆಯಿಲ್ ಬಾಂಡ್ ಬಿಡುಗಡೆ ಮಾಡಲಾಗಿತ್ತು ಸರಕಾರ ನಡೆಸುವಾಗ ಇದೆಲ್ಲ ಅನಿವಾಯ್ ಆದರೆ ಇದನ್ನು ಹಿಂದಿನ ಸರಕಾರದ ಮೇಲೆ ಆರೋಪವಾಗಿ ಹೊರಿಸುತ್ತಿರುವುದು ಬಿಜೆಪಿ ನೈತಿಕವಾಗಿ ದಿವಾಳಿಯಾಗಿದೆ ಎನ್ನಬಹುದು ಎಂದು ಹೇಳಿದರು.

ಉತ್ತರಕನ್ನಡ ಜಿಲ್ಲೆಯಲ್ಲಿ ಅಭಿವೃದ್ಧಿಯಾಗುತ್ತಿಲ್ಲ 2015 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುತ್ತಿರುವ ಜಿಲ್ಲೆಗೆ ಕೇವಲ 115 ಮೆಗಾವ್ಯಾಟ್ ವಿದ್ಯುತ್ ನೀಡಲಾಗುತ್ತಿದೆ ಜಿಲ್ಲೆಯ ಎಷ್ಟೋ ಗ್ರಾಮಗಳಲ್ಲಿ ವಿದ್ಯುತ್ ಇಲ್ಲ. ಜಿಲ್ಲೆಯಲ್ಲಿ ಕಳೆದ ಒಂದುವರ್ಷದ ಅವಧಿಯಲ್ಲಿ 1128 ಅಪಘಾತ ನಡೆದಿದೆ 230 ಜನರು ಮರಣ ಹೊಂದಿದ್ದಾರೆ 500ಕ್ಕೂ ಹೆಚ್ಚು ಜನರು ಮಾರಣಾಂತಿಕ ಗಾಯಗೊಂಡಿದ್ದಾರೆ ಆದರೆ ಇಲ್ಲಿ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ ಇಲ್ಲಿ ಒಂದು ಮಲ್ಟಿಸ್ಪೆಷಲ್ ಆಸ್ಪತ್ರೆಯ ಅವಶ್ಯಕತೆ ಇದೆ ಇಲ್ಲಿಯ ಸಂಸದರು,ವಿಧಾನಸಭಾಧ್ಯಕ್ಷರು ಈ ಬಗ್ಗೆ ಕೇಂದ್ರ ಸರಕಾರದ ಮುಂದೆ ಮನವಿ ಸಲ್ಲಿಸಿದರೆ ಇದನ್ನು ನಾನು ಸಂಪೂಣ್ವಾಗಿ ಬೆಂಬಲಿಸುವುದಲ್ಲದೆ ಒತ್ತಡ ಹೇರುತ್ತೇನೆ. ಅಭಿವೃದ್ಧಿ ಮಾಡುವಾಗ ರಾಜಕೀಯ ಮಾಡಬಾರದು ಪಕ್ಷವೂ ರಾಜಕೀಯಕ್ಕೆ ಸೀಮಿತವಾಗಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕರಾವಳಿ ಪ್ರಾದಿಕಾರದ ಮಾಜಿ ಅಧ್ಯಕ್ಷ ನಿವೇದಿತಾ ಆಳ್ವಾ,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಮನಮನೆ,ಕಾಂಗ್ರೆಸ್ ಮುಖಂಡರಾದ ಸಾವೆರ್ ಡಿಸಿಲ್ವಾ,ಎಸ್.ಕೆ.ಭಾಗವತ,ಸತೀಶ ನಾಯ್ಕ,ವಿ.ಎನ್.ನಾಯ್ಕ ಗಾಂಧಿಜಿ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

About the author

Adyot

Leave a Comment