ಆದ್ಯೋತ್ ಸುದ್ದಿನಿಧಿ:
ಎರಡು ವರ್ಷಕ್ಕೊಮ್ಮೆ ಜರಗುವ ಉತ್ತರಕನ್ನಡ ಜಿಲ್ಲೆಯ ಶಿರಸಿ ಮಾರಿಕಾಂಬಾ ಜಾತ್ರೆಯು ಈ ವರ್ಷ ಮಾರ್ಚ-15 ರಿಂದ ಮಾರ್ಚ-23 ವರೆಗೆ ಜರುಗಲಿದೆ.
ಕಳೆದ ಬಾರಿ ವಿಜೃಂಭಣೆಯಿಂದ ಜಾತ್ರೆ ಪಾರಂಭವಾಗಿತ್ತು ಲಕ್ಷಾಂತರ ಭಕ್ತರು ಬಂದಿದ್ದರು. ಆದರೆ 5 ದಿನ ಮುಗಿಯುತ್ತಿದ್ದಂತೆ ಕೊವಿಡ್ ಮಹಾಮಾರಿ ವಕ್ಕರಿಸಿ ಜಾತ್ರೆಯ ಉತ್ಸಾಹವನ್ನು ಹಾಳುಗೆಡುವಿತ್ತು ಕೋಟ್ಯಾಂತರ ರೂ. ನಷ್ಟವುಂಟಾಗಿತ್ತು ನಾಟಕ ಕಂಪನಿಯವರಂತೂ ತಿಂಗಳುಗಟ್ಟಲೆ ಕೆಲಸವಿಲ್ಲದೆ ವಾಸ್ತವ್ಯ ಹೂಡುವಂತಾಗಿತ್ತು. ಈ ಬಾರಿಯೂ ಕೊವಿಡ್ ಆತಂಕ ದೂರವಾಗಿಲ್ಲ. ಸರಕಾರ ವಿಜೃಂಭಣೆಯಿಂದ ಜಾತ್ರೆ ನಡೆಸಲು ಅವಕಾಶ ಕೊಡುತ್ತದೆಯೋ ಅಥವಾ ಧಾರ್ಮಿಕ ಕಾರ್ಯಕ್ರಮಗಳಿಗೆ ಮಾತ್ರಾ ಅವಕಾಶ ನೀಡುತ್ತದೆಯೋ ಕಾದು ನೋಡಬೇಕಾಗಿದೆ
ಈ ಕುರಿತು ಶುಕ್ರವಾರ ಧರ್ಮದರ್ಶಿಗಳ ಮಂಡಳಿ ಅಧ್ಯಕ್ಷ ರವೀಂದ್ರ ಜಿ.ನಾಯ್ಕ ನೇತೃತ್ವದಲ್ಲಿ ಮಾರಿಕಾಂಬಾ ಜಾತ್ರಾ ಮುಹೂರ್ತ ಘೋಷಣಾ ಸಭೆ ನಡೆಯಿತು.
ಶಿರಶಿಯ ಮಾರಿಕಾಂಬಾ ದೇವಾಲಯದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ನಗರಸಭೆ ಅಧ್ಯಕ್ಷರ ಗಣಪತಿ ನಾಯ್ಕ, ತಹಸೀಲ್ದಾರ ಎಂ.ಆರ್.ಕುಲಕರ್ಣಿ,ಉಪಾಧ್ಯಕ್ಷೆ ವೀಣಾ ಶೆಟ್ಟಿ,ಬಾಬುದಾರರ ಮುಖಂಡ ಜಗದೀಶ ಗೌಡ ಭಾಗವಹಿಸಿದ್ದರು.
ತಹಸೀಲ್ದಾರ ಎಂ.ಆರ್.ಕುಲಕರ್ಣಿ ಮಾತನಾಡಿ, ಎರಡು ವರ್ಷಕ್ಕೊಮ್ಮೆ ನಡೆಯುವ ಜಾತ್ರಾಮಹೋತ್ಸವ ಯಶಸ್ವಿಯಾಗಿ ನಡೆಯಬೇಕು ಕೊವಿಡ ಕಡಿಮೆಯಾದರೆ ನಿರಾತಂಕವಾಗಿ ಜಾತ್ರೆ ನಡೆಸಬಹುದು ಸರಕಾರದ ನಿಯಮಾನುಸಾರ ಎಲ್ಲವೂ ನಡೆಯಲಿ ಎಂದು ಹೇಳಿದರು
ಗಣಪತಿ ನಾಯ್ಕ ಮಾತನಾಡಿ, ಜಾತ್ರೆ ಸುಸೂತ್ರವಾಗಿ ನಡೆಯಬೇಕು ಎನ್ನುವುದು ನಮ್ಮೆಲ್ಲರ ಆಶಯವಾಗಿದೆ. ಆದರೆ
ಮುಂದಿನದಿನದಲ್ಲಿ ಕೋವೀಡ ಯಾವ ರೀತಿ ಇರುವುದೆಂದು ಹೇಳಲು ಸಾಧ್ಯವಿಲ್ಲ. ಒಳ್ಳೆಯ ಭರವಸೆ ಇಟ್ಟುಕೊಂಡು ಜಾತ್ರೆಯ ಮುಂದಿನ ತಯಾರಿ ಮಾಡಿಕೊಳ್ಳೊಣ . ಮುಂದಿನ ದಿನ ಜಾತ್ರೆ ಸಂಬಂಧ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧಿಕಾರಿಗಳ ಸಭೆಯನ್ನು ಕೂಡ ಮಾಡಲಾಗುವುದು ಎಂದರು.
ಬಾಬುದಾರರ ಮುಖಂಡ ಜಗದೀಶ ಗೌಡ ಮಾತನಾಡಿ,
ಮರ ಕಚ್ಚು ಹಾಕು ಸಂಪ್ರದಾಯವನ್ನು ಬಾಬುದಾರರು ಮುಂದುವರೆಸುತ್ತೆವೆ. ಮರ ಕಡಿಯುವ ಸಂಪ್ರದಾಯಕ್ಕೆ ಅರಣ್ಯ ಇಲಾಖೆಯವರು ಅಡ್ಡಿಪಡಿಸಬಾರದು. ಎಲ್ಲಾ ಇಲಾಖೆಯವರು ಸಹಕರಿಸಬೇಕು ಎಂದು ಮನವಿ ಮಾಡಿದರು
ಧರ್ಮದರ್ಶಿ ಮಂಡಳಿಯ ಅಧ್ಯಕ್ಷ ರವಿಂದ್ರ ಜಿ.ನಾಯ್ಕ,ಬಂದಿರುವ ಎಲ್ಲಾ ಆತಂಕಗಳು ದೂರವಾಗಿ ಜಾತ್ರೆಯು ಯಶಸ್ವಿಯಾಗಿ ನಡೆಯಲಿ ಎಂದು ಆಶೀಸೋಣ
ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳೂ ಸಂಪ್ರದಾಯದಂತೆ ನಡೆಯಬೇಕು ಮರ ಕಡಿಯುವ ಚಟುವಟಿಕೆ ಕಾಯಿದೆ ಕಾನೂನು ಅಡಿಯಲ್ಲಿ ನಡೆಯಬೇಕು.ಈ ಬಗ್ಗೆ ಇಲಾಖಾ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.
########