ಆದ್ಯೋತ್ ಸುದ್ದಿನಿಧಿ:
ಹಿರಿಯ ಸಾಹಿತಿ ಡಾ. ಸಂಗಮೇಶ ಹಂಡಿಗಿ ಅವರ ಸ್ಮರಣೆಯಲ್ಲಿ ಡಾ.ಸಂಗಮೇಶ ಹಂಡಿಗಿ ಸಾಹಿತ್ಯ ಪ್ರತಿಷ್ಠಾನ ರಚನೆಗೊಂಡಿದ್ದು ಇದರಡಿ ವಚನಸಾಹಿತ್ಯದಲ್ಲ ಸಾಧನೆ ಮಾಡಿದವರನ್ನು ಗುರುತಿಸಿ ‘ಸಂಗಮ ಸಿರಿ’ ಪ್ರಶಸ್ತಿ ನೀಡಲಾಗುತ್ತಿದೆ.
ಪ್ರಶಸ್ತಿಯು 10 ಸಾವಿರ ರೂ.ನಗದು ಹಾಗೂ ಫಲಕವನ್ನೊಳಗೊಂಡಿದ್ದು, ಈ ವರ್ಷದಿಂದ ನೀಡಲಾಗುತ್ತಿದೆ.
ಸಂಗಮ ಸಿರಿ ಪ್ರಶಸ್ತಿಗೆ ಗುಲಬರ್ಗಾ ವಿಶ್ವವಿದ್ಯಾಲಯದ ನಿವೃತ್ತ ಪ್ರಧ್ಯಾಪಕರಾದ ಡಾ.ವೀರಣ್ಣ ದಂಡೆ ಹಾಗೂ ಡಾ. ಜಯಶ್ರೀ ದಂಡೆ ದಂಪತಿಯನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಹಾಗೂ ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಉಪ ಆಯುಕ್ತ ಜಿ.ಜಿ.ಗೌಡಪ್ಪಗೊಳ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಂಡೆ ದಂಪತಿಗಳು ವಚನ ಸಾಹಿತ್ಯ ಸಂಶೋಧನೆಯಲ್ಲಿ ಹಿರಿದಾದ ಸಾಧನೆ ಮಾಡಿದ್ದಾರೆ. ಈ ಪ್ರಶಸ್ತಿಯನ್ನು ಅ.2 ರಂದು ವಿತರಿಸಲಾಗುವುದು.ಇದೇ ಸಂದರ್ಭದಲ್ಲಿ ಡಾ. ಸಂಗಮೇಶ ಹಂಡಿಗಿ ಹಾಗೂ ಬೀದರಿನ ಹಂಶಕವಿ ಅವರು ಸಂಪಾದಿಸಿದ ‘ಆಧುನಿಕ ವಚನಗು ಭಾಗ -10’ ಕೃತಿಯನ್ನು ಬಿಡುಗಡೆ ಮಾಡಲಾಗುವುದು.ಡಾ.ಸಂಗಮೇಶ ಹಂಡಿಗಿ ಅವರು 46 ಕೃತಿಗಳನ್ನು ರಚಿಸಿ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಒಂದು ಬಳಗ ಸೃಷ್ಟಿಸಿಕೊಂಡಿದ್ದರು. ಅವರ ನೆನಪಿಗಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಪ್ರಶಸ್ತಿ ಆಯ್ಕೆಯ ಮುಖ್ಯಸ್ಥರಾಗಿ ಹಿರಿಯ ಸಾಹಿತಿ ಮಹಾಂತಪ್ಪ ನಂದೂರು ಕಾರ್ಯ ನಿರ್ವಹಿಸಿದರು. ಆಯ್ಕೆ ಸಮಿತಿ ಸಭೆಯಲ್ಲಿ ಸಾಹಿತಿ ಎಸ್.ವಿ.ಪಟ್ಟಣಶೆಟ್ಟಿ, ಹಿರಿಯ ಪತ್ರಕರ್ತರಾದ ಗಣಪತಿ ಗಂಗೊಳ್ಳಿ,,ಡಾ.ರಾಮು ಮುಲಗಿ, ಡಾ. ಮಹೇಶ ಹೊರಕೇರಿ, ಜಿ.ವಿ. ಹಿರೇಮಠ, ರವೀಂದ್ರ ರಾಮದುರ್ಗಕರ ,ಬಸವರಾಜ ಕರ್ಕಿ ಇತರರು ಪಾಲ್ಗೊಂಡಿದ್ದರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಾಹಿತಿ ಮಹಾಂತಪ್ಪ ನಂದೂರ,ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಡಾ. ವೀರೇಶ್ ಹಂಡಿಗಿ ,ಖಜಾಂಚಿ ಬಸವರಾಜ ಕರ್ಕಿ ಇತರರು ಇದ್ದರು.