ವಿದ್ಯುತ್ ಖಾಸಗೀಕರಣ ವಿರೋಧಿಸಿ ರೈತಸಂಘ-ಹಸಿರುಸೇನೆಯವರಿಂದ ಪ್ರತಿಭಟನೆ

ಅದ್ಯೋತ್ ಸುದ್ದಿನಿಧಿ:
ವಿದ್ಯುತ್ ಖಾಸಗೀಕರಣ ವಿರೋಧಿಸಿ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದ ಮಿನಿವಿಧಾನಸೌಧದ ಎದುರು ತಾಲೂಕು ರೈತಸಂಘ-ಹಸಿರು ಸೇನೆ ಅಧ್ಯಕ್ಷ ವೀರಭದ್ರ ನಾಯ್ಕ ಮಲವಳ್ಳಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಜೊತೆ ಸೇರಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವೀರಭದ್ರ ನಾಯ್ಕ,ಚುನಾವಣೆಯ ಪೂರ್ವದಲ್ಲಿ ನರೇಂಧ್ರ ಮೋದಿಯವರು ರೈತರಿಗೆ ಲಾಭವನ್ನು,ಯುವಕರಿಗೆ ಉದ್ಯೋಗವನ್ನು ಕೊಡುತ್ತೇನೆ ಎಂದು ಭರವಸೆಯನ್ನು ನೀಡಿದ್ದರು ಇದರಿಂದ ಜನರು ಇವರನ್ನು ಗೆಲ್ಲಿಸಿ ಪ್ರದಾನಿಯನ್ನಾಗಿ ಮಾಡಿದರು ಆದರೆ ಮೋದಿಯವರು ಈ ದೇಶದ ಬೆನ್ನೆಲುಬಾದ ರೈತರನ್ನು ಕಡೆಗಣಿಸಿ ಅವರನ್ನು ತುಳಿದು ಉದ್ಯಮಿಗಳಿಗೆ ಲಾಭ ಮಾಡಿಕೊಡುವ ದೃಷ್ಠಿಯಿಂದ ಈಡೀ ದೇಶವನ್ನು ಖಾಸಗೀಕರಣದ ಗುಲಾಮಿತನಕ್ಕೆ ಮಾರಲು ಹೊರಟಿದ್ದಾರೆ. ಬಂಗಾರಪ್ಪ ರೈತರಿಗೆ ಉಚಿತ ವಿದ್ಯುತ್ ನೀಡಿದ್ದರು ಅದನ್ನು ಕುಮಾರಸ್ವಾಮಿ ಹಾಗೂ ಯಡಿಯೂರಪ್ಪನವರು ಅದನ್ನು ಮುಂದುವರಿಸಿದ್ದರು ಆದರೆ ಮೋದಿಯವರು ವಿದ್ಯುತ್ ಇಲಾಖೆಯನ್ನು ಖಾಸಗೀಕರಣಗೊಳಿಸಿ ಅವರ ಪಕ್ಷಕ್ಕೆ ಚುನಾವಣೆ ದೇಣಿಗೆ ನೀಡುವ ಉದ್ಯಮಿಗಳಿಗೆ ಅನುಕೂಲ ಮಾಡಿಕೊಡಲು ಹೊರಟಿದ್ದಾರೆ ಇದನ್ನು ರೈತರು ಉಗ್ರವಾಗಿ ವಿರೋಧಿಸುತ್ತಿದ್ದು ಕೂಡಲೇ ಖಾಸಗೀರಣ ಪ್ರಕ್ರಿಯೆಯನ್ನು ಕೈಬಿಡಬೇಕು ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ರೈತಸಂಘದ ಕಾರ್ಯಾಧ್ಯಕ್ಷ ಪಿ.ವಿ.ಹೆಗಡೆ ಹೊಸಗದ್ದೆ ಮಾತನಾಡಿ, ದೇಶದ ಶೇ.75ರಷ್ಟು ಇರುವ ರೈತರನ್ನು ಕಡೆಗಣಿಸಿ ಶ್ರೀಮಂತರಿಗೆ ಅನುಕೂಲ ಮಾಡಿಕೊಡುವ ಕೆಲಸಕ್ಕೆ ನರೇಂದ್ರ ಮೋದಿ ಸರಕಾರ ಮುಂದಾಗಿದೆ ಕೊವಿಡ್ ಸಂದರ್ಭದಲ್ಲಿ ಅಧಿವೇಶನವನ್ನು ಕರೆಯದೆ ರೈತರಿಗೆ ಮಾರಕವಾದ ಮೂರು ಕೃಷಿಕಾಯ್ದೆಯನ್ನು ಜಾರಿಗೆ ತಂದಿದೆ ಈಗ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸಲು ಹೊರಟಿದೆ ಇದರಿಂದ ರೈತರಿಗೆ ಸಾಕಷ್ಟು ತೊಂದರೆಯಾಗುತ್ತದೆ ಅಲ್ಲದೆ ಉದ್ಯೋಗ ನಷ್ವಾಗುತ್ತದೆ ರೈತರು,ಯುವಕರು ಸೇರಿದಂತೆ ದೇಶದ ಜನರು ಇಂತಹ ಜನವಿರೋಧಿ ಕಾಯ್ದೆಗಳನ್ನು ವಿರೋಧಿಸಬೇಕು ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಮುಖಂಡ ವಿ.ಎನ್.ನಾಯ್ಕ ಬೆಡ್ಕಣಿ,ದಲಿತಸಂಘರ್ಷಸಮಿತಿಯ ಹೆಚ್.ಕೆ.ಶಿವಾನಂದ ಮಾತನಾಡಿದರು.
ಪ್ರತಿಭಟನೆಯಲ್ಲಿ ರೈತಸಂಘದ ಪದಾದಿಕಾರಿಗಳು, ಕಾಂಗ್ರೆಸ್ ಸೇವಾದಳದ ತಾಲೂಕು ಅಧ್ಯಕ್ಷ ಗಾಂಧೀಜಿ ನಾಯ್ಕ,ರಾಮಕೃಷ್ಣ ನಾಯ್ಕ ಜೆಡಿಎಸ್ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಇಲಿಯಾಸ್ ಮುಂತಾಧವರು ಭಾಗವಹಸಿದ್ದರು.

About the author

Adyot

Leave a Comment