ಸೆ.1 ಬುಧವಾರ ದಿಂದ ಸೆ.4.ಶನಿವಾರದ ವರೆಗೆ ಕೊವಿಡ್ ಲಸಿಕಾ ಮಹಾಮೇಳ

ಆದ್ಯೋತ್ ಸುದ್ದಿನಿಧಿ:
ತಾಲೂಕಿನಾದ್ಯಂತ ಸೆ.1 ರಿಂದ ಸೆ.4ರವರೆಗೆ ನಾಲ್ಕು ದಿನಗಳ ಕಾಲ ತಾಲೂಕಿನ 14 ಸ್ಥಳಗಳಲ್ಲಿ ಕೊವಿಡ್ ಲಸಿಕೆ ಮಹಾಮೇಳ ನಡೆಯಲಿದ್ದು ಒಟ್ಟೂ 12000 ಜನರಿಗೆ ಲಸಿಕೆ ನೀಡಲಾಗುವುದು ಎಂದು ತಹಸೀಲ್ದಾರ ಪ್ರಸಾದ ಎಸ್.ಎ. ಹೇಳಿದರು.
ಅವರು ಮಂಗಳವಾರ ತಹಸೀಲ್ದಾರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಕೊವಿಡ್ ಲಸಿಕೆ ನೀಡುವಲ್ಲಿ ನಮ್ಮ ತಾಲೂಕು ಮೂರನೇ ಸ್ಥಾನದಲ್ಲಿದೆ ಇಲ್ಲಿಯವರೆಗೆ ಶೇ71ರಷ್ಟು ಲಸಿಕೆಯನ್ನು ನಾವು ನೀಡಿದ್ದೇವೆ ನಾಳೆಯಿಂದ ಪ್ರಾರಂಭವಾಗುವ ಈ ಲಸಿಕಾ ಮೇಳ ಮುಂದುವರಿಯಲಿದೆ ಮುಂದಿನ ದಿನಗಳಲ್ಲಿ ಪ್ರತಿಬುಧವಾರ ಲಸಿಕಾ ಮಹಾಮೇಳ ನಡೆಯಲಿದೆ. ಬುಧವಾರ ಒಟ್ಟೂ 4300 ಜನರಿಗೆ ಲಸಿಕೆ ನೀಡಲಿದ್ದು ಗುರುವಾರ 8 ಸ್ಥಳದಲ್ಲಿ 2100 ಜನರಿಗೆ, ಶುಕ್ರವಾರ 11 ಸ್ಥಳಗಳಲ್ಲಿ 3250 ಜನರಿಗೆ,ಶನಿವಾರ 8 ಸ್ಥಳಗಳಲ್ಲಿ 2350 ಜನರಿಗೆ ಲಸಿಕೆ ನೀಡಲಾಗುವುದು. ಲಸಿಕೆ ನೀಡುವ ಕೇಂದ್ರದಲ್ಲಿ ಅವಶ್ಯಕವಿರುವ ಮೂಲಭೂತ ಸೌಕರ್ಯ ಹಾಗೂ ಭದ್ರತೆಯನ್ನು ಒದಗಿಸಲಾಗುವುದು ಎಂದು ಹೇಳಿದರು.
ತಾಲೂಕು ವೈದ್ಯಾಧಿಕಾರಿ ಡಾ.ಲಕ್ಷ್ಮೀಕಾಂತ ನಾಯ್ಕ ಮಾತನಾಡಿ,ಈಗಾಗಲೇ ನಾವು ಲಸಿಕೆ ನೀಡುವಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸಿದ್ದೇವೆ ಇನ್ನೂ 18431 ಜನರಿಗೆ ಲಸಿಕೆ ನೀಡಬೇಕಾಗಿದೆ. 50 ವರ್ಷಕ್ಕಿಂತ ಮೇಲಿನವರು ಈಗಾಗಲೇ ಲಸಿಕೆ ಪಡೆದಿದ್ದಾರೆ 18-44 ವರ್ಷದವರು ಪಡೆಯಬೇಕಾಗಿದೆ ತಾಲೂಕಿನ ಹಲವು ಸ್ಥಳಗಳಲ್ಲಿ ಲಸಿಕಾ ಮೇಳವನ್ನು ನಡೆಸಲಾಗುವುದು ಆದರೂ ಕೆಲವು ಸ್ಥಳಗಳಿಂದ ಜನರಿಗೆ ಲಸಿಕಾ ಕೇಂದ್ರಕ್ಕೆ ಬರಲು ಸಾಧ್ಯವಾಗುತ್ತಿಲ್ಲ ಆದ್ದರಿಂದ ನಾವು ಅಂತಹ ಸ್ಥಳಗಳಿಗೆ ಹೋಗಿ ಲಸಿಕೆ ನೀಡುವ ಯೋಜನೆಯನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.
ಬುಧವಾರ ನಡೆಯುವ ಲಸಿಕಾ ಕೇಂದ್ರಗಳು:– ಕ್ಯಾದಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಹಳ್ಳಿಬೈಲ್ ಪ್ರೌಢಶಾಲೆ,ಬಿಳಗಿ ಕೇಂದ್ರದ ಬೇಡ್ಕಣಿ ಗ್ರಾಪಂ ಸಭಾಭವನ,ಹೇರೂರು ಕೇಂದ್ರದ ಗ್ರಾಪಂ ಸಭಾಭವನ ಹೇರೂರು,ಹೆಗ್ಗರಣೆ ಉಪಕೇಂದ್ರ,ಕೋಲಸಿರ್ಸಿ ಕೇಂದ್ರದ ಬಿದ್ರಕಾನ ಗ್ರಾಪಂ ಸಭಾಭವನ,ಬಿಕ್ಕಳಸಿ ಕೊಂಡ್ಲಿ ಪ್ರೌಢಶಾಲೆ,ಸಿದ್ದಾಪುರ ಗಂಡುಮಕ್ಕಳ ಪ್ರೌಢಶಾಲೆ,ಕೊರ್ಲಕೈ ಕೇಂದ್ರ ಗ್ರಾಪಂ ಸಭಾಭವನ ಮನಮನೆ,ಹಸವಂತೆ ಹೆಚ್‍ಪಿಎಸ್ ನೆಜ್ಜೂರು,ಹೆಚ್.ಪಿಎಸ್ ಅರೆಂದೂರು,ಕೊರ್ಲಕೈ ಆರೋಗ್ಯ ಉಪಕೇಂದ್ರ,ದೊಡ್ಮನೆ ಕೇಂದ್ರ ಬಾಳಗೋಡು ಹೆಚ್‍ಪಿಎಸ್,ಕಾನಸೂರು ತ್ಯಾಗಲಿ ಎಸ್. ಸಿ ಕೇಂದ್ರ, ಹಾರ್ಸಿಕಟ್ಟಾ ಸಭಾಭವನ,ಭಂಡಾರಕೇರಿ ಅಂಗನವಾಡಿ ಕೇಂದ್ರ
######

About the author

Adyot

Leave a Comment