ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರಪಟ್ಟಣದ ಎಲ್.ಬಿ.ನಗರದಲ್ಲಿ ಎಸ್‍ಎಪ್‍ಸಿಯಲ್ಲಿ ವಿಶೇಷ ಅನುದಾನದಡಿಯಲ್ಲಿ 53ಲಕ್ಷರೂ.ವೆಚ್ಚದಲ್ಲಿ ನಿರ್ಮಾಣಗೊಂಡಿರುವ 850ಮೀ.ಸಿಮೆಂಟ್ ರಸ್ತೆಯನ್ನು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವೆಶ್ವರ ಹೆಗಡೆ ಕಾಗೇರಿ,ಆಡಳಿತಾತ್ಮಕ ವೆಚ್ಚವೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಈ ವೆಚ್ಚವನ್ನು ತಗ್ಗಿಸದಿದ್ದರೆ ಅಭಿವೃದ್ಧಿ ಕಾರ್ಯವನ್ನು ಮಾಡುವುದು ಅಸಾಧ್ಯ. ನಾವು ನೀಡುತ್ತಿರುವ ತೆರಿಗೆ ಹಣದಲ್ಲಿ ಸರಕಾರಿ ನೌಕರರಿಗೆ ನೀಡುವ ಸಂಬಳ,ನಿವೃತ್ತಿಯ ನಂತರ ನೀಡುವ ಪಿಂಚಣಿ ಹಾಗೂ ಹಿಂದೆನ ಸಾಲದ ಬಡ್ಡಿ ನೀಡುವುದಕ್ಕೆ ಶೇ70ರಷ್ಟು ಹಣ ಖರ್ಚಾಗುತ್ತದೆ ಉಳಿದ ಶೇ30ರಷ್ಟು ಹಣದಲ್ಲಿ ಅಭಿವೃದ್ಧಿ ಕಾರ್ಯವನ್ನು ಮಾಡಬೇಕಾಗುತ್ತದೆ ಇದರಿಂದ ಜನರ ನಿರೀಕ್ಷೆಗೆ ತಕ್ಕಷ್ಟು ಅಭಿವೃದ್ಧಿ ಮಾಡುವುದು ಕಷ್ಟವಾಗುತ್ತಿದೆ.ಆದರೂ ಅಭಿವೃದ್ಧಿ ಕೆಲಸವನ್ನು ಸಾಧ್ಯವಾದಷ್ಟು ಮಾಡಲಾಗುತ್ತಿದೆ ಮುಂದಿನ ಅಧಿವೇಶನದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸುವ ಬಗ್ಗೆ ಚರ್ಚೆ ಮಾಡಲಾಗುವುದು. ಫಾರ್ಮನಂ3 ರ ಬಗ್ಗೆ ಸಾಕಷ್ಟು ಜನರು ಮನವಿ ನೀಡಿದ್ದಾರೆ ಆದರೆ ಇದು ಸ್ಥಳೀಯ ಅಧಿಕಾರಿಗಳಿಂದಾಗಲಿ,ಜಿಲ್ಲಾ ಮಟ್ಟದ ಅಧಿಕಾರಿಗಳಿಮದಾಗಲಿ ಬಗೆಹರಿಸಲು ಸಾಧ್ಯವಿಲ್ಲ ಸರಕಾರದ ಮಟ್ಟದಲ್ಲಿ ಇದು ಆಗಬೇಕಿದೆ ಈ ಬಗ್ಗೆ ಸರಕಾರದ ಮಟ್ಟದಲ್ಲಿ ಮಾತನಾಡಲಾಗುವುದು ಎಂದು ಭರವಸೆ ನೀಡಿದರು.
ತಾಲೂಕಿಗೆ ಸಾಕಷ್ಟು ಅಭಿವೃದ್ಧಿ ಕೆಲಸವನ್ನು ಮಾಡಲಾಗಿದೆ ಪಪಂಗೆ 3ಕೋಟಿರೂ. ವೀಶೇಷ ಅನುದಾನ ನೀಡಲಾಗಿದೆ ಬಗೆಹರಿಸಲು ಸಾಧ್ಯವಾಗದ ಹೊನ್ನೆಗುಂಡಿ ಗಟಾರಕ್ಕೆ 47 ಲಕ್ಷರೂ. ಅನುದಾನ ನೀಡಿ ಸಮಸ್ಯೆ ಬಗೆಹರಿಸಲಾಗಿದೆ. 5ಕೋಟಿರೂ.ವೆಚ್ಚದಲ್ಲಿ ಚತುಷ್ಪತ ರಸ್ತೆ ನಿರ್ಮಾಣವಾಗುತ್ತಿದೆ ಪಟ್ಟಣದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ 90ಕೋಟಿರೂ. ಯೋಜನೆ ಮಾಡಲಾಗಿದೆ ಈ ಎಲ್ಲ ಅಭಿವೃದ್ಧಿ ಕೆಲಸಕ್ಕೆ ಸ್ಥಳೀಯರ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.
ಪ್ರಾಸ್ತಾವಿಕ ಮಾತನಾಡಿದ ಪಪಂ ಸದಸ್ಯ ಮಾರುತಿ ನಾಯ್ಕ, ಜನಪ್ರತಿನಿಧಿಗಳಾದವರು ಜನರ ಸಮಸ್ಯೆ ಪರಿಹರಿಸಿ ಅಭಿವೃದ್ಧಿ ಕಾರ್ಯ ಮಾಡುವುದರಲ್ಲಿ ಮಂಚೂಣಿಯಲ್ಲಿರಬೇಕು ನಮ್ಮ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಈ ವಿಚಾರದಲ್ಲಿ ಎಲ್ಲಾ ಜನಪ್ರತಿನಿಧಿಗಳಿಗೆ ಮಾದರಿಯಾಗಿದ್ದಾರೆ. ನಾವು ಇಂತಹ ಕೆಲಸವಾಗಬೇಕು ಎಂದು ಹೇಳಿದರೆ ಸರಕಾರದ ಮಟ್ಟದಲ್ಲಿ ಪ್ರಯತ್ನಿಸಿ ಕೆಲಸವಾಗುವಂತೆ ಮಾಡುತ್ತಾರೆ ಈಗಾಗಲೇ ಎಲ್.ಬಿ.ನಗರಕ್ಕೆ 53ಲಕ್ಷರೂ. ವೆಚ್ಚದಲ್ಲಿ ಸಿಮೆಂಟ್ ರಸ್ತೆ ಮಾಡಿಕೊಟ್ಟಿದ್ದಾರೆ. ಇನ್ನೂ 50ಲಕ್ಷದಷ್ಟು ಅನುದಾನವನ್ನು ಮಂಜೂರು ಮಾಡಿಸಿದ್ದಾರೆ ಎಂದು ಹೇಳಿದರು.
ವೇದಿಕೆಯಲ್ಲಿ ಪಪಂ ಅಧ್ಯಕ್ಷೆ ಚಂದ್ರಕಲಾ ನಾಯ್ಕ,ಉಪಾಧ್ಯಕ್ಷ ರವಿಕುಮಾರ ನಾಯ್ಕ ಹಾಗೂ ಪಪಂ ಸದಸ್ಯರು,ಸ್ಥಳೀಯ ಬಿಜೆಪಿ ಮುಖಂಡ ರಮೇಶ ಬೇಡರ್ ಮುಂತಾಧವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸಿಮೆಂಟ್ ರಸ್ತೆ ನಿರ್ಮಾಣ ಕಾರ್ಯ ನಡೆಸಿಕೊಟ್ಟಿದ್ದ ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಮರಣಹೊಂದಿದ್ದ ಲೊಕೋಪಯೋಗಿ ಇಂಜನೀಯರ್ ಮುದಕಣ್ಣನವರಿಗೆ ಒಂದುನಿಮಿಷದ ಮೌನಾಚರಣೆ ಮಾಡಲಾಯಿತು.
#####
ವಿಶ್ವೇಶ್ವರ ಹೆಗಡೆ ಕಾಗೇರಿಯವರು ಸಿದ್ದಾಪುರ ತಾಲೂಕಿನ ಕೊರ್ಲಕೈ ಪಂಚಾಯತ ಜಿಡ್ಡಿಯಲ್ಲಿ ಊರೊಳಗಿನ ರಸ್ತೆ ಕಾಮಗಾರಿಯನ್ನು ಉದ್ಘಾಟಿಸಿ, ಜಲಜೀವನ ಮಿಷನ್ ಯೋಜನೆ ನೀರಾವರಿ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿದರು ಹಾಗೂ ಜಿಡ್ಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕೊಠಡಿಗಳನ್ನು ಉದ್ಘಾಟಿಸಿದರು.
ನಂತರ ಮನಮನೆ ಪಂಚಾಯತದ ಕನ್ನೆಕೊಪ್ಪ ಜಲಜೀವನ ಮಿಷನ್ ಯೋಜನೆಯ ನೀರಾವರಿ ಕಾಮಗಾರಿ ಭೂಮಿ ಪೂಜೆ ನೆರವೇರಿಸಿ, ಕವಂಚೂರು ಪಂಚಾಯತ ಹೊಸಳ್ಳಿಯಲ್ಲಿ ಜಲಜೀವನ ಮಿಷನ್ ನೀರಾವರಿ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿದರು.
#####
ಸನ್ಮಾನ್ಯ ಸಭಾಧ್ಯಕ್ಷರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಇಂದು, ಸಿದ್ದಾಪುರ ತಾಲೂಕಿನ ಕವಂಚೂರು ಪಂಚಾಯತ ಗೊಳಗೋಡ ಸರಕಾರಿ ಹಿ.ಪ್ರಾ. ಶಾಲಾ ಕೊಠಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಪಟ್ಟಣದ ಹೊನ್ನೆಗುಂಡಿ ರಾಜಕಾಲುವೆ ನಿರ್ಮಾಣ ಕಾಮಗಾರಿ ಉದ್ಘಾಟಿಸಿ, ಸಾಯಿ ನಗರದಲ್ಲಿ ಕಾಲುವೆ ತಡೆಗೋಡೆ ನಿರ್ಮಾಣ ಕಾಮಗಾರಿಯನ್ನು ಉದ್ಘಾಟಿಸಿದರು.
ಹೊಸೂರು ಎಲ್.ಬಿ. ನಗರದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಕಾಲೊನಿ ರಸ್ತೆ ನಿರ್ಮಾಣದ ಕಾಮಗಾರಿಯನ್ನು ಉದ್ಘಾಟಿಸಿದರು.
####
ಕಾನಸೂರಿನಲ್ಲಿ ಮನೆ ಕೆಲಸ ಮಾಡುವ ಸಂದರ್ಭದಲ್ಲಿ ಮೇಲ್ಛಾವಣಿ ಕುಸಿದು ಮೃತರಾದ ಗಟ್ಟಿಕೈ ಮಂಜುನಾಥ ನಾಯ್ಕ್ ಅವರ ಪತ್ನಿ ಇಂದಿರಾ ಮಂಜುನಾಥ ನಾಯ್ಕ್ ಇವರಿಗೆ ಕಾರ್ಮಿಕ ಇಲಾಖೆಯ 2 ಲಕ್ಷ ರೂಪಾಯಿಗಳ ಪರಿಹಾರ ಚೆಕ್ ನ್ನು ವಿಶ್ವೇಶ್ವರ ಹೆಗಡೆ ಕಾಗೇರಿ ವಿತರಿಸಿದರು.