ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಭುವನಗಿರಿ ಭುವನೇಶ್ವರಿದೇವಾಲಯದಲ್ಲಿ ಸ್ಥಳೀಯ ಸುಷಿರ ಸಂಗೀತ ಪರಿವಾರದ ಸಂಯೋಜನೆಯಲ್ಲಿ ಶಿರಸಿ ರಾಜದೀಪಟ್ರಸ್ಟ್ ಮತ್ತು ಸಿದ್ಧಾಪುರದ ಧರ್ಮಶ್ರೀ ಫೌಂಡೇಶನ್‌ಇವರ ಸಹಕಾರದೊಂದಿಗೆ ಜ. 26ರ ಭಾನುವಾರ 23 ನೇ ಸಂಗೀತ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.
ಯುವಕಲಾವಿದರಿಗೆ ವೇದಿಕೆ ಕಲ್ಪಿಸುವ ಮತ್ತು ಭಾರತೀಯ ಸಂಗೀತ ಪರಂಪರೆಯನ್ನು ಮುಂದಿನ ತಲೆಮಾರಿಗೆ ಪರಿಚಯಿಸುವ ಉದ್ದೇಶದಿಂದ ಕಳೆದ 22 ವರ್ಷಗಳಿಂದ ನಿರಂತರವಾಗಿ ಸಂಗೀತ ಮಹೋತ್ಸವವನ್ನು ನಡೆಸಿಕೊಂಡು ಬರಲಾಗುತ್ತಿದೆ. ಅಂತಯೇ ಈ ಬಾರಿ ಜ. 26 ರ ಭಾನುವಾರ ಸಂಜೆ 6 ಗಂಟೆಯಿ0ದ ಸಂಗೀತಕಾರ್ಯಕ್ರಮ ನಡೆಲಿದೆ. ಆರಂಭದಲ್ಲಿ ಸುವರ್ಣಾ ಹೆಗಡೆ ಎಮ್ಮೆನೊಂಡ ಇವರಿಂದ ಸಂಗೀತಕಾರ್ಯಕ್ರಮ ನಡೆಯಲಿದ್ದು, ನಿತಿನ್ ಹೆಗಡೆ ಕಲಗದ್ದೆ ತಬಲಾದಲ್ಲಿ ಮತ್ತು ಜಯರಾಂ ಭಟ್ ಹೆಗ್ಗಾರಳ್ಳಿ ಹಾರ್ಮೋನಿಯಂದಲ್ಲಿ ಸಹಕರಿಸಲಿದ್ದಾರೆ.
ನಂತರ 6.35 ಕ್ಕೆ ನಡೆಯುವ ಸಭಾಕಾರ್ಯಕ್ರಮವನ್ನು ಸಂಯುಕ್ತ ಕರ್ನಾಟಕ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಮತ್ತು ಲೋಕ ಶಿಕ್ಷಣ ಟ್ರಸ್ಟ್ ಸಿಇಓ ಮೋಹನ ಹೆಗಡೆ ಉದ್ಘಾಟಿಸುವರು. ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಶ್ರೀಕಾಂತ ಹೆಗಡೆ ಗುಂಜಗೋಡು ಅಧ್ಯಕ್ಷತೆ ವಹಿಸುವರು. ಅಭ್ಯಾಗತರಾಗಿ ನ್ಯಾಯವಾದಿ ರವಿ ಹೆಗಡೆ ಹೂವಿನಮನೆ ಮತ್ತು ಶಿರಸಿ ರಾಜದೀಪಟ್ರಸ್ಟ್ ನ ಅಧ್ಯಕ್ಷ ದೀಪಕ ದೊಡ್ಡೂರು ಭಾಗಿಯಾಗುವರು. ಈ ವರ್ಷ ವಿಶೇಷವಾಗಿ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು,ಹಿರಿಯ ಪತ್ರಕರ್ತ ರವೀಂದ್ರ ಭಟ್ಟ ಐನಕೈ, ಸಾಧಕರಾದ ದೀಪಾ ರವೀಂದ್ರ ಭಟ್ಟ ಐನಕೈ ಮತ್ತು ಸಿದ್ದಾಪುರ ನಿವೇದಿತಾ ಮಹಿಳಾ ಮಂಡಳಿಯ ಅಧ್ಯಕ್ಷೆ ಗ್ರಾಯತ್ರೀ ವೆಂಕಟ್ರಮಣ ಭಟ್ಟ ಕೊಳಗಿ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಗುವುದು. ನಾಣಿಕಟ್ಟಾ ಸರ್ಕಾರಿ ಪದವಿ ಪೂರ್ವಕಾಲೇಜಿನ ಪ್ರಾಚಾರ್ಯ ಎಂ ಕೆ ನಾಯ್ಕ ಹೊಸಳ್ಳಿ ಅಭಿನಂದನಾ ನುಡಿಗಳನ್ನಾಡುವರು. ರಾತ್ರಿ 8 ರಿಂದ ಅಂತಾರಾಷ್ಟ್ರೀಯ ವಾಯಲಿನ್ ವಾದಕ ರಂಜನಕುಮಾರ ಬೇವುರಾ ಭುವನೇಶ್ವರ ಇವರಿಂದ ವಾಯಲಿನ್, ಆಕಾಶವಾಣಿ ಎ ಗ್ರೇಡ್‌ಕಲಾವಿದ ಪ್ರಕಾಶ ಹೆಗಡೆಕಲ್ಲಾರೆಮನೆ ಇವರಿಂದ ಬಾಂಸುರಿ ಮತ್ತು ಪ್ರಸಿದ್ಧ ತಬಲಾ ವಾದಕ ರಾಜೇಂದ್ರ ನಾಕೋಡು ಬೆಂಗಳೂರು ತಬಲಾ ವಾದನ ನಡೆಯುವುದು. ಈ ಕಾರ್ಯಕ್ರಮಕ್ಕೆ ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸುಷಿರ ಪರಿವಾರದ ನಾರಾಯಣ ಹೆಗಡೆ ಕಲ್ಲಾರೆಮನೆ ಕೋರಿದ್ದಾರೆ