“ಹರ್ ಘರ್ ತಿರಂಗಾ” ಪ್ರೇರೇಪಿಸಲು ಶಿರಸಿಯಲ್ಲಿ ಕಾಗೇರಿಯವರಿಂದ ಜಾಥಾ

ಆದ್ಯೋತ್ ಸುದ್ದಿನಿಧಿ:

ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ, ಅಗಷ್ಟ್ 13 ರಿಂದ 15 ರವರೆಗೆ “ಹರ್ ಘರ್ ತಿರಂಗಾ” ಕಾರ್ಯಕ್ರಮದ ಅಂಗವಾಗಿ ಪ್ರತಿ ಮನೆ ಮತ್ತು ಕಟ್ಟಡಗಳ ಮೇಲೆ ರಾಷ್ಟ್ರ ಧ್ವಜವನ್ನು ಹಾರಿಸಿ, ರಾಷ್ಟ್ರ ಗೌರವ ತೋರಲು ಸಾರ್ವಜನಿಕರನ್ನು ಪ್ರೇರೇಪಿಸಲು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಶಿರಸಿಯ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ರಾಷ್ಟ್ರ ಜಾಗೃತಿ ಅಭಿಯಾನ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕಾಗೇರಿಯವರು,ನಮಗೆ ಸ್ವಾತಂತ್ರ್ಯ ಬಂದು ೭೫ ವರ್ಷ ಕಳೆದಿದೆ.ನಮಗೆ ಸ್ವಾತಂತ್ರ್ಯ ದೊರಕಿದ್ದು ಕೇವಲ ಬ್ರಿಟಿಷ್‌ ರಿಂದ ಮಾತ್ರವಲ್ಲ ಇದಕ್ಕೂ ಹಿಂದೆ ನಮ್ಮ ದೇಶದ ಮೇಲೆ ಮೊಗಲರು,ಡಚ್ಚರು, ಪೋರ್ಚುಗೀಸ್ ರು ದಾಳಿ ಮಾಡುತ್ತಲೇ ಬಂದಿದ್ದರು ಇವರೆಲ್ಲರ ವಿರುದ್ದ ನಮ್ಮ ಪೂರ್ವಿಕರು ನಿರಂತರ ಹೋರಾಟ ನಡೆಸುತ್ತಾ ಬಂದಿದ್ದರು. ಇವರೆಲ್ಲರ ಹೋರಾಟದ ಫಲವಾಗಿ ಇಂದು ನಾವು ಸ್ವತಂತ್ರ ಭಾರತದಲ್ಲಿ ಜೀವಿಸುತ್ತಿದ್ದೇವೆ ಎಂದು ಹೇಳಿದರು.

About the author

Adyot

Leave a Comment