ಹೊನ್ನಾವರದಲ್ಲಿ ಡಿ.ದೇವರಾಜ ಅರಸು ವಿಚಾರವೇದಿಕೆಯಿಂದ ಅರಸು 107ನೇ ಜನ್ಮದಿನಾಚರಣೆ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆ ಹೊನ್ನಾವರದಲ್ಲಿ ಡಿ.ದೇವರಾಜ ಅರಸು ವಿಚಾರವೇದಿಕೆಯವತಿಯಿಂದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸುರವರ 107ನೇಜನ್ಮದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಮುಖ್ಯಮಂತ್ರಿ ಡಾ.ವೀರಪ್ಪ ಮೋಯ್ಲಿ ಮಾತನಾಡಿ, ಅನೇಕ ಜನಪ್ರತಿನಿಧಿಗಳು ಸಾಮಾಜಿಕ,ರಾಜಕೀಯ ಮುಖ್ಯವಾಹಿನಿಗೆ ಬರಲು ಅರಸುರವರೆ ಕಾರಣ ಸ್ವಾತಂತ್ರ್ಯ ವಿಮೋಚನೆಯ ಅತಿದೊಡ್ಡ ವಕ್ತಾರರೆಂದರೆ ಇಂದಿರಾಗಾಂಧಿ ಹಾಗೂ ಅರಸುರವರಾಗಿದ್ದರು. ಇಂದು ಜಾಗತೀಕರಣದ ಪ್ರಭಾವದಿಂದ ಹಿಂದೂಳಿದ ವರ್ಗ ಅಲ್ಪ ಸಂಖ್ಯಾತರಿಗೆ ಅವಕಾಶಗಳು ವಂಚಿತವಾಗಿದೆ. ೯೦ರ ದಶಕದ ಹಿಂದುಳಿದ ವರ್ಗದವರ ಹೋರಾಟದ ಕಾವು ತಣ್ಣಗಾಗಿದೆ. ಸಾಮಾಜಿಕ ನ್ಯಾಯ ಎಂಬುದು ಸಾಮಾನ್ಯ ನ್ಯಾಯವಾಗಿದೆ.ಬಂಡವಾಳ ಶಾಹಿ, ಸಾಮಾಜಿಕ ಶೋಷಣೆ ಇನ್ನೊಂದು ಮಾರ್ಗದ ಮೂಲಕ ಬಂದಿದೆ.ಮತ್ತಷ್ಟು ದಾಸ್ಯದಲ್ಲಿ ಬದುಕಬೇಕಾದ ಸ್ಥಿತಿ ಉದ್ಭವವಾಗಿದೆ. ಜನತೆ ಎಚ್ಚೆತ್ತು ಕೊಳ್ಳಬೇಕಾದ ಪರಿಸ್ಥಿತಿ ಇದೆ ಎಂದರು.

ಪತ್ರಕರ್ತ ಶಶಿಧರ್ ಭಟ್ ಮಾತನಾಡಿ, ಇಂದು ಮಾಧ್ಯಮಕ್ಕೆ ಜನಿವಾರ ಹಾಕಲಾಗಿದ್ದು, ಸಂಪೂರ್ಣ ಬದಲಾಗಿದೆ. ಕೋಮುವಾದ ಬಿತ್ತುವ ಮೂಲಕ ವಿಜೃಂಭಿಸುತ್ತಿದೆ ಅರಸುರವರು ಭೂ ಸುಧಾರಣಾ ಕಾಯಿದೆ ಜಾರಿ ತಂದವರು. ಇಂದು ಸಾಮಾಜಿಕ ನ್ಯಾಯ ಹಿಂದೂಳಿದ ವರ್ಗದವರ ಪರವಾಗಿಲ್ಲ ಇಂದು ಕಾಂಗ್ರೆಸ್ ಪಕ್ಷದ ಒಳಗೆ ಆರ್ ಎಸ್ ಎಸ್ ನ ಗೆದ್ದಲುಹುಳುಗಳು ಸೇರಿಕೊಂಡು ನಾಶ ಮಾಡುತ್ತಿದೆ. ಅವರದು ಹಿಂದುತ್ವವೋ, ಮೃದು ಹಿಂದುತ್ವವೋ ಎನ್ನುವುದೇ ತಿಳಿಯುತ್ತಿಲ್ಲ ಎಂದರು.

About the author

Adyot

Leave a Comment