ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ಬಂಗಾರಮಕ್ಕಿಯ ಶ್ರೀ ಮಾರುತಿ ರೆಸಿಡೆನ್ಸಿಯಲ್ ಸ್ಕೂಲ್ ನ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚೀವ ಬಿ.ಸಿ.ನಾಗೇಶ ಸುದ್ದಿಗಾರರೊಂದಿಗೆ ಮಾತನಾಡಿದರು.
ಕಾಂಗ್ರೆಸ್ ಪಕ್ಷವು ಸ್ಬಂತಿಕೆಯನ್ನು ಕಳೆದುಕೊಂಡಿದ್ದು ಬಿಜೆಪಿಯವರು ಯಾವುದೇ ಒಳ್ಳೆಯ ಕೆಲಸ ಮಾಡಿದರೂ ಅದನ್ನು ಟೀಕಿಸುವ ಅಭ್ಯಾಸ ಬೆಳೆಸಿಕೊಂಡಿದೆ ಎಲ್ಲದರಲ್ಲೂ ಜಾತಿ,ಧರ್ಮವನ್ನು ಹುಡುಕುವ ಕೆಲಸ ಮಾಡುತ್ತಿದೆ ಓಟಿಗಾಗಿ ಧರ್ಮವನ್ನು ಬಳಸುವುದು ಕಾಂಗ್ರೆಸಿಗರ ಹಣೆಬರಹ.ಕಾಂಗ್ರೆಸ್ ಆಡಳಿತಪಕ್ಷವಾಗಿ ವರ್ತಿಸಿ ಗೊತ್ತಿದೆಯೇ ಹೊರತು ವಿರೋಧಪಕ್ಷವಾಗಿ ಹೇಗಿರಬೇಕು ಎಂದು ಗೋತ್ತಿಲ್ಲ ಎಂದು ಶಿಕ್ಷಣ ಸಚೀವರು ಟೀಕಿಸಿದರು.
ಮಕ್ಕಳಿಗೆ ನೀಡುವ ಪಠ್ಯ ಸರಿಯಾಗಿದೆಯೇ ಎಂದು ಪರಿಶೀಲಿಸಲು ಸಮಿತಿ ರಚಿಸಲಾಗಿದೆ.ಯಾವುದೇ ಪಠ್ಯಕ್ರಮ ಮಾಡಿದಾಗ 10-15ವರ್ಷ ಇರುತ್ತದೆ.ಕಾಲಕಾಲಕ್ಕೆ ಅವಶ್ಯಕವಿದ್ದರೆ ಬದಲಾವಣೆ ಮಾಡಬೇಕಾಗುತ್ತದೆ.ಆದರೆ ಕಾಂಗ್ರೆಸ್ ನವರು ತಮಗೆ ಬೇಕಾದಾಗ ಪಠ್ಯಪುಸ್ತಕ ಬದಲು ಮಾಡುತ್ತಾರೆ ಕಸ್ತೂರಿ ರಂಗನ್‌ನಂತಹ ಮೇಧಾವಿಯ ನೇತೃತ್ವದಲ್ಲಿ ಸ್ಥಾಪನೆ ಮಾಡಿದ ನ್ಯಾಷನಲ್ ಎಜ್ಯುಕೇಶನ್ ಪಾಲಿಸಿಯನ್ನು ಈಗ ಅನುಷ್ಠಾನಗೊಳಿಸಲಾಗುತ್ತಿದೆ ಇದನ್ನೇ ಡಿ.ಕೆ.ಶಿವಕುಮಾರ್, ಸಿದ್ಧರಾಮಯ್ಯ ಟೀಕೆ ಮಾಡ್ತಾರೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ 10 ವರ್ಷ ಅಡ್ವೈಸರ್ ಆಗಿದ್ದವರ ಬಗ್ಗೆಯೇ ಟೀಕೆ ಮಾಡ್ತಾರೆ. ಕಾಂಗ್ರೆಸ್ ಪಕ್ಷದ ಮನಮೋಹನ್ ಸಿಂಗ್ ಜತೆಗಿದ್ದಾಗ ಅವರು ಸರಿ, ಈಗ ಅವರು ಆರ್‌ಎಸ್‌ಎಸ್ ಎಂದು ಹೇಳುತ್ತಿರುವುದಕ್ಕೆ ಅರ್ಥವಿದೆಯೇ? ಎಂದು ಪ್ರಶ್ನಿಸಿದ ಬಿ.ಸಿ.ನಾಗೇಶ ಕಾಂಗ್ರೆಸ್ ನವರು ಇನ್ನು ಇಪ್ಪತ್ತುವರ್ಷ ವಿರೋಧಪಕ್ಷವಾಗಿ ಕುಳಿತುಕೊಂಡರೆ ವಿರೋಧಪಕ್ಷ ಹೇಗಿರಬೇಕು ಎನ್ನುವುದು ರೂಡಿಯಾಗುತ್ತದೆಯೇನೋ ಎಂದು ಹೇಳಿದರು
ಇನ್ನೂ ಕೆಲವೇ ದಿನದಲ್ಲಿ ತಾಂತ್ರಿಕ ಸಲಹಾ ಸಮಿತಿಯ ಅಭಿಪ್ರಾಯ ಪಡೆದು 1-5 ನೇ ತರಗತಿಯನ್ನು ಪ್ರಾರಂಭಿಸಲಾಗುತ್ತದೆ.ಶೇ.85ರಷ್ಟು ಪಠ್ಯಪುಸ್ತಕಗಳನ್ನು ಎಲ್ಲಾ ಶಾಲೆಗಳಿಗೆ ತಲುಪಿಸಲಾಗಿದೆ ಇದೇ ತಿಂಗಳ 15ನೇ ತಾರೀಖಿನ ಒಳಗೆ ಉಳಿದ ಪಠ್ಯಪುಸ್ತಕಗಳನ್ನು ತಲುಪಿಸಲಾಗುವುದು ಎಂದು ಸಚೀವರು ಹೇಳಿದರು.