ಹಳಿಯಾಳ: ಬೀದಿ ನಾಯಿಗಳನ್ನು ಹಿಂಸಾತ್ಮಕವಾಗಿ ಹಿಡಿದಿದ್ದಾರೆಂದು ಆರೋಪಿಸಿ ಪುರಸಭೆ ಮುಖ್ಯಾಧಿಕಾರಿಗಳ ವಿರುದ್ದ ದೂರು ದಾಖಲು

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆ ಹಳಿಯಾಳದಲ್ಲಿ ಬೀದಿನಾಯಿಗಳನ್ನು ಹಿಂಸಾತ್ಮಕವಾಗಿ ಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ ಎಂದು ಆರೋಪಿಸಿ ಸ್ಥಳೀಯ ಪುರಸಭೆ ಮುಖ್ಯಾಧಿಕಾರಿ ಪರಶುರಾಮ ಶಿಂಧೆ ವಿರುದ್ದ ಪಶುಸಂಗೋಪನಾ ಇಲಾಖೆಯ ವೈದ್ಯಾಧಿಕಾರಿ
ಡಾ. ಖಾಲಿದಾಲಿ ನಧಾಪ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ‌.

ಉತ್ತರ ಕನ್ನಡ ಜಿಲ್ಲೆಯ ನಗರ ಪ್ರದೇಶದಲ್ಲಿ ಬೀದಿ ನಾಯಿಗಳ ಕಾಟ ಮಿತಿಮೀರಿದೆ.ಜಿಲ್ಲೆಯಲ್ಲಿ ಬೀದಿ ನಾಯಿಗಳಿಂದ ಸುಮಾರು 65೦೦ ಜನರು ಕಚ್ಚಿಸಿಕೊಂಡಿದ್ದಾರೆ. ಬೀದಿ ನಾಯಿಗಳ ನಿಯಂತ್ರಣಕ್ಕಾಗಿ ಸ್ಥಳೀಯ ಆಡಳಿತಗಳು ನಾಯಿಗಳ ಸಂತಾನ ಹರಣ ಚಿಕಿತ್ಸೆ ಮಾಡುತ್ತಿವೆ. ಆದರೆ ಹಳಿಯಾಳ ಪುರಸಭೆಯ ಸಿಬ್ಬಂದಿಗಳು ಬೀದಿನಾಯಿಗಳನ್ನು ಹಿಡಿಯುವುದರಲ್ಲಿ ರಾಕ್ಷಸತನ ತೋರಿದ್ದಾರೆ ಎಂದು ಆರೋಪಿಸಲಾಗಿದೆ.


ಸುಮಾರು 80 ಬೀದಿ ನಾಯಿಗಳನ್ನು ಹಿಂಸಾತ್ಮಕವಾಗಿ ಹಿಡಿದು ಹಳಿಯಾಳ ದಿಂದ ಯಲ್ಲಾಪುರ ಭಾಗದ ಕಾಡಿನಲ್ಲಿ ತಂದು ಬಿಡಲಾಗಿದೆ.ಈ ಭಾಗದಲ್ಲಿ ಹುಲಿ,ಚಿರತೆಗಳಿದ್ದು ಅವುಗಳಿಗೆ ಈ ಬೀದಿನಾಯಿಗಳು ಆಹಾರವಾಗುವ ಸಾಧ್ಯತೆ ಇದೆ ಅಲ್ಲದೆ ಅವುಗಳಿಗೆ ಆಹಾರವೂ ಸಿಗುವ ಸಾಧ್ಯತೆ ಇಲ್ಲ
ಹಳಿಯಾಳದ ಮಾತೃಭೂಮಿ ಪ್ರತಿಷ್ಠಾನದ ಉಪಾಧ್ಯಕ್ಷ ಎಸ.ಕೆ.
ಯೋಗರಾಜ್ ರವರು ಪುರಸಭೆ ಸಿಬ್ಬಂದಿಗಳ ಈ
ಅಮಾನುಷ ವರ್ತನೆಯ ವಿರುದ್ಧ ಪಶುಸಂಗೋಪನಾ ಇಲಾಖೆಯ ಸಹಾಯವಾಣಿಯ ಮೂಲಕ ದೂರು ದಾಖಲಿಸಿದ್ದು ಪಶುಸಂಗೋಪನಾ ಇಲಾಖೆಯ ವೈದ್ಯರು ಈ ದೂರಿನನ್ವಯ ಪೊಲೀಸ್ ದೂರು ದಾಖಲಿಸಿದ್ದಾರೆ.

About the author

Adyot

Leave a Comment