ಬೊಲೆರೋ- ಆಕ್ಟಿವ್ ಹೊಂಡಾ ನಡುವೆ ಡಿಕ್ಕಿ ಯುವಕ ಸಾವು

ಆದ್ಯೋತ್ ಸುದ್ದಿನಿಧಿ
ಉತ್ತರಕನ್ನಡ ಜಿಲ್ಲೆಯ ಶಿರಸಿ– ಸಿದ್ದಾಪುರ ಮುಖ್ಯರಸ್ತೆಯ ಕಳೆನಹಳ್ಳಿ ಸಮೀಪ ಬೊಲೆರೋ ಪಿಕಪ್ ಹಾಗೂ ಆಕ್ಟಿವ್ ಹೊಂಡಾ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ನಡೆದಿದ್ದು ಬೈಕ್ ಸವಾರ ಸಾವನ್ನಪ್ಪಿದ ಘಟನೆ ಇಂದು ಸಂಜೆ ನಡೆದಿದೆ.


ಸಿದ್ದಾಪುರ ತಾಲೂಕಿನ ದೊಡ್ಡಜಿಡ್ಡಿ ಗ್ರಾಮದ ಹರೀಶ ರಾಮಚಂದ್ರನಾಯ್ಕ ( 28) ಮೃತಪಟ್ಟ ವ್ಯಕ್ತಿಯಾಗಿದ್ದು
ಬೈಕ್ ನ ಹಿಂದೆ ಕುಳಿತಿದ್ದ ಶಶಾಂಕ್ ಎನ್ನುವವನು ತೀವ್ರವಾಗಿ ಗಾಯಗೊಂಡಿದ್ದಾನೆ. ಚಿಕಿತ್ಸೆಗಾಗಿ ಸಿದ್ದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸ್ ರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
########################################
ಶಂಕರಮೂರ್ತಿಗೆ ಕರ್ನಾಟಕ ಸೇವಾರತ್ನ ಪ್ರಶಸ್ತಿ
ಕರ್ನಾಟಕ ನವಚೇತನ ಕಲಾನೀಕೆತನ ( ರಿ) ಸಂಸ್ಥೆ ನೀಡುವ ಕರ್ನಾಟಕ ಸೇವಾ ರತ್ನ ಪ್ರಶಸ್ತಿಗೆ ಸಿದ್ದಾಪುರ
ತಾಲೂಕಿನ ಅವರಗುಪ್ಪದ ಶಂಕರಮೂರ್ತಿ ನಾಯ್ಕ ಭಾಜನರಾಗಿದ್ದಾರೆ.

ಬೆಂಗಳೂರು ನಯನ ಸಾಹಿತ್ಯ ಭವನದಲ್ಲಿ ಸಿನಿಮಾ ವಿತರಕರಾದ ಚಿನ್ನ ಗೌಡರು ಈ ಪ್ರಶಸ್ತಿ ಪ್ರಧಾನ ಮಾಡಿದರು. ಸಂಸ್ಥೆಯ ಅಧ್ಯಕ್ಷೆ ಲೀಲಾವತಿ ಎಸ್ ನಾರಾಯಣ, ಸಂತೋಷ ಜಿ. ಖ್ಯಾತ ಡ್ಯಾನ್ಸ ಮಾಸ್ಟರ ಗಣೇಶ ಹಾಗೂ ಇತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

About the author

Adyot

Leave a Comment