ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡಜಿಲ್ಲೆಯ ಯಲ್ಲಾಪುರ ತುಡಗುಣಿಯ ವಿಶಾಲನಗರದ ಸರೋಜಾ ಅಶೋಕ ನಾಯರ್ ಎನ್ನುವ ನಲವತ್ತೈದು ವರ್ಷದ ಮಹಿಳೆಯನ್ನು ಚಾಕುವಿನಿಂದ ತಿವಿದು ಕೊಲೆ ಮಾಡಲಾಗಿದ್ದು ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸ್ ರು ಯಶಸ್ವಿಯಾಗಿದ್ದಾರೆ.
ಶಿರಸಿ ತಾಲೂಕು ಕೆರೆಕೊಪ್ಪದ ಕೃಷ್ಣ ನಾಯ್ಕ ಆರೋಪಿಯಾಗಿದ್ದು
ಕೊಲೆಯಾದ ಸರೋಜ ನಾಯರ್ ತಂಗಿ ಹಾಗೂ ಆರೋಪಿ ಕೃಷ್ಣಾ ನಾಯ್ಕ ನಡುವೆ ಅನೈತಿಕ ಸಂಬಂಧವಿದ್ದು ಇತ್ತೀಚೆಗೆ ಆರೋಪಿಯ ಜೊತೆ ಜಗಳ ಮಾಡಿಕೊಂಡು ಅಕ್ಕನ ಮನೆಗೆ ಬಂದಿದ್ದಳು.ಈಗ್ಗೆ ಕೆಲವು ದಿನಗಳ ಹಿಂದೆ ಮೃತ ಸರೋಜ ತಂಗಿಯನ್ನು ಬೆಳಗಾವಿಗೆ ಕಳುಹಿಸಿದ್ದಳು.ಈ ಸಂಬಂಧ
ಗುರುವಾರ ರಾತ್ರಿ ಆರೋಪಿ ಕೃಷ್ಣಾ ನಾಯ್ಕ ಸರೋಜಾಳ ಮನೆಗೆ ಬಂದು ಗಲಾಟೆ ಮಾಡಿದ್ದಲ್ಲದೆ ಸರೋಜಾಳನ್ನು ಚಾಕುವಿನಿಂದ ತಿವಿದು ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿತ್ತಿದೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.