ಆದ್ಯೋತ್ ಸುದ್ದಿನಿಧಿ:
ಚಿತ್ರದುರ್ಗ ಜಿಲ್ಲೆಯ ಭರಮಸಾಗರದಲ್ಲಿ ನೂತನವಾಗಿ ರೋಟರಿ ಕ್ಲಬ್ಬನ್ನು ಉದ್ಘಾಟಿಸಲಾಯಿತು.
ರೋಟರಿ ಮುಖ್ಯಸ್ಥರ ಆಯ್ಕೆ ಕಾರ್ಯಕ್ರಮದಲ್ಲಿ ತಿರುಪತಿ ನಾಯ್ಡು, ಸತೀಶ್. ಚಿತ್ರದುರ್ಗ ರೋಟರಿ ಕ್ಲಬ್ ನ ಶಿವಕುಮಾರ್, ಸುರೇಶ್ ರಾಜ್, ಮಹಡಿ ಶಿವಮೂರ್ತಿ, ಆಗಮಿಸಿದ್ದರು,
ಕೆಪಿಸಿಸಿ ಸದಸ್ಯ,ಮಾಜಿ ಜಿಪಂ ಉಪಾಧ್ಯಕ್ಷ,ಸ್ಥಳೀಯ ಮುಖಂಡ
ಎಚ್.ಎನ್.ತಿಪ್ಪೇಸ್ವಾಮಿ,ಟಿಎಪಿಎಂಎಸ್ ಮಾಜಿ ಅಧ್ಯಕ್ಷ ಎಚ್.ಎಂ.ಹನುಮಂತಪ್ಪ ಉಪಸ್ಥಿತರಿದ್ದರು.
ಭರಮಸಾಗರ ರೋಟರಿಯ ನೂತನ ಅಧ್ಯಕ್ಷರಾಗಿ ಸಿ.ಟಿ.ಮಹಂತೇಶ,ಉಪಾಧ್ಯಕ್ಷರಾಗಿ ಶಮೀಮ್ ಪಾಷಾ, ಪ್ರಧಾನ ಕಾರ್ಯದರ್ಶಿಯಾಗಿ ಮೌನೇಶ್ ಕೆಟಿಸಿ. ಖಜಾಂಚಿಯಾಗಿ ಬಿ.ಟಿ.ನಿರಂಜನ್ ಮೂರ್ತಿ.ಸಂಘಟನಾ ಕಾರ್ಯದರ್ಶಿಯಾಗಿ ಹರೀಶ್ ಬಿ.ಸಿ., ಜಹೀರ್ ಖಾನ್,ಕೆ.ಪಿ.
ಹರೀಶ್,ಕೆ.ಜಿ.ವೀರೇಶ್ ಸೇರಿದಂತೆ 25 ಸದಸ್ಯರ ನೂತನ ರೋಟರಿ ಕ್ಲಬ್ ಅಸ್ತಿತ್ವಕ್ಕೆ ತರಲಾಯಿತು.
ಇದೇ ಸಂದರ್ಭದಲ್ಲಿ 100 ಹೆಚ್ಚು ಆಶಾ ಕಾರ್ಯಕರ್ತರಿಗೆ ಗೌರವ ಸಮರ್ಪಿಸಲಾಯಿತು.
ಪ್ರಾಸ್ತಾವಿಕ ಮಾತನಾಡಿದ ಎಸ್ ಎಂ ಎಲ್ ಪ್ರವೀಣ್, ರೋಟರಿ ಕ್ಲಬ್ ಅಂತರಾಷ್ಟ್ರೀಯ ಸಂಘ ಈ ಸಂಘ ಸ್ಥಾಪನೆಯಾಗಿ 137 ವರ್ಷವಾಗಿದೆ ವಿಶ್ವದಾದ್ಯಂತ ಮುಂಚೂಣಿಯಲ್ಲಿರುವ ಸಂಸ್ಥೆಯಿದು ಪಲ್ಸ್ ಪೊಲಿಯೊ
ಹೋಗಲಾಡಿಸಲು ನಿರಂತರ ಸೇವೆಯಲ್ಲಿ ಇದ್ದಿದ್ದು ವಿಶ್ವದ ಆದ್ಯಂತ ತಮ್ಮ ಸಂಘದಿಂದ ಉಚಿತವಾಗಿ ಪಲ್ಸ್ ಪೊಲಿಯೊ ಔಷಧಿ ನೀಡುತ್ತಿದೆ. ಭಾರತದಲ್ಲಿ ಸುಮಾರು 11 ವರ್ಷದಿಂದ ಒಂದೂ ಪೊಲಿಯೊ ಕೇಸ್ ಇಲ್ಲ. ಒತ್ತಡ ಜೀವನದಲ್ಲಿ ಸೇವಾ ಮನೋಭಾವನೆ ಬೆಳೆಸಿಕೊಂಡರೆ ಕಡುಬಡವರಿಗೂ ಒಳ್ಳೆಯ ರೀತಿಯಿಂದ ಸಹಾಯ ಮಾಡಬಹುದು ಎಂದು ಹೇಳಿದರು.
########################################
ಭರಮಸಾಗರ ಸಹಕಾರಿ ಸಂಘಕ್ಕೆ ನೂತನ ಅಧ್ಯಕ್ಷರ ಆಯ್ಕೆ
ಭರಮಸಾಗರ ವ್ಯವಸಾಯ ಸೇವಾ ಸಹಕಾರ ಸಂಘದ ನೂತನ
ಅಧ್ಯಕ್ಷರಾಗಿ ಹಂಪನೂರು ಕೃಷ್ಣಪ್ಪ ಆಯ್ಕೆಯಾದರು.
ಸಂಘದ ಎಲ್ಲಾ ನಿರ್ದೇಶಕರು ಒಮ್ಮತದಿಂದ ಆಯ್ಕೆಮಾಡಿದರು. ಭರಮಸಾಗರ ಮುಖಂಡ ಎಸ್ಎಂಎಲ್ ತಿಪ್ಪೇಸ್ವಾಮಿ. ಕೊಡಿ ರಂಗವನಹಳ್ಳಿ ಹನುಮಂತಪ್ಪ. ತುರುನುರ್ ಮಲ್ಲಣ್ಣ. ಕೆಟಿಸಿ ಮಂಜುನಾಥ್. ಕೃಷ್ಣಮೂರ್ತಿ. ಎಸ್ಎಂಎಲ್ ಪ್ರವೀಣ್. ಗೌಡ ರಾಜಪ್ಪ. ನ್ಯಾಕ್ ಸಂತೋಷ್. ದುರ್ಗೇಶ್ ಪೂಜಾರ್. ನಿರಂಜನ್ ಮೂರ್ತಿ. ಶಮೀಮ್ ಪಾಷಾ. ಪರ್ವಿಸ್. ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಉಪಸ್ಥಿತರಿದ್ದರು.