ಆದ್ಯೋತ್ ಸುದ್ದಿನಿಧಿ:
ಚಿಕ್ಕಮಗಳೂರು ಜಿಲ್ಲೆಯ ಕಡೂರು ಕ್ಷೇತ್ರಶಿಕ್ಷಣಾಧಿಕಾರಿ ಜಯಣ್ಣ ಶಿಕ್ಷಕರೊಬ್ಬರಿಂದ ಲಂಚಸ್ವೀಕರಿಸುತ್ತಿದ್ದಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದು ಲೋಕಾಯುಕ್ತ ನಿರೀಕ್ಷಕ ಸಚಿನ್ ಕುಮಾರ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಕಡೂರು ತಾಲೂಕಿನ ಹುಲಿಗೊಂದಿ ಶಾಲೆಯ ಶಿಕ್ಷಕ ರಾಜಪ್ಪನವರನ್ನು ಅಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವ ಕಾರಣ ಲಿಂಗ್ಲಾಪುರ ಶಾಲೆಗೆ ನಿಯೋಜನೆ ಮಾಡಲಾಗಿತ್ತು.ಕಾರಣ ರಾಜಪ್ಪನವರು ತನ್ನನ್ನು ಲಿಂಗ್ಲಾಪುರದಿಂದ ಮೂಲ ಶಾಲೆ ಹುಲಿಗೊಂದಿ ಶಾಲೆಗೆ ಮರುನೇಮಕ ಮಾಡುವಂತೆ ಮನವಿ ಮಾಡಿದ್ದರು.
ಮರು ನೇಮಕ ಮಾಡಬೇಕಾದರೆ 50,000 ರೂ ಲಂಚಕ್ಕೆ ಜಯಣ್ಣ ಬೇಡಿಕೆ ಇಟ್ಟಿದ್ದು, ಈ ಭಾಗವಾಗಿ ಈ ದಿನ ಮೇಲ್ಕಂಡ ಸ್ಥಳದಲ್ಲಿ 15,000 ರೂ ಹಣ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಆರೋಪಿತನನ್ನು ವಶಕ್ಕೆ ಪಡೆದಿದ್ದಾರೆ.