ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆ ಶಿರಸಿಯಲ್ಲಿ ಪರಿವಾರ ಸಹಕಾರಿ ಸಂಘ ಸ್ಥಳೀಯ ಶಾಖೆಯನ್ನು ಗೃಹಸಚೀವ ಅರಗ ಜ್ಞಾನೇಂದ್ರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಅರಗ ಜ್ಞಾನೇಂದ್ರ ಮಾತನಾಡಿ,ಪರೇಶ ಮೇಸ್ತ ಸಾವು ಪ್ರಕರಣದಲ್ಲಿ ಸಿಬಿಐ ತನ್ನ ವರದಿಯನ್ನು ನೀಡಿದೆ ಆದರೆ ಅವರ ತಂದೆ ಹಾಗೂ ಸಾರ್ವಜನಿಕರು ಈ ವರದಿಯನ್ನು ಒಪ್ಪುತ್ತಿಲ್ಲ ಸರಕಾರ ಈ ಪ್ರಕರಣದ ಪುನರ್ ಪರಿಶೀಲಿಸುವ ಕುರಿತು ಚಿಂತನೆ ನಡೆಸುತ್ತಿದೆ.ಇದರಲ್ಲಿ ಯಾವುದೇ ರಾಜಕೀಯವಿಲ್ಲ ಮೇಸ್ತ ಸಾವು ಕೊಲೆಯೋ,ಸಹಜವಾದುದ್ದೋ ಎಂದು ಜನತೆಗೆ ತಿಳಿಸಬೇಕಾಗಿದೆ.ಹಿಂದೆ ಸಿಮಿ ಎಂಬ ಸಂಘಟನೆಯ ಹೆಸರಿನಲ್ಲಿ ದೇಶದ್ರೋಹದ ಚಟುವಟಿಕೆ ನಡೆಯುತ್ತಿತ್ತು ಅದನ್ನು ನಿಷೇಧಿಸಿದ ಮೇಲೆ ಪಿ.ಎಪ್.ಐ. ಹೆಸರಿನಲ್ಲಿ ಚಟುವಟಿಕೆ ನಡರಸಲಾಗುತ್ತಿತ್ತು ಈಗ ಬೇರೆ ಹೆಸರಿನಲ್ಲಿ ಇಂತಹ ಚಟುವಟಿಕೆ ನಡೆಸುವ ಪ್ರಯತ್ನ ನಡೆಯುತ್ತಿದೆ.ಆದರೆ ಗೃಹಇಲಾಖೆ ಇಂತಹವರ ಮೇಲೆ ತೀವ್ರ ನಿಗಾ ಇಟ್ಟಿದೆ ಎಂದು ಹೇಳಿದರು.
ಉಕ ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಕೇತ್ರದಲ್ಲಿ ಮಾಡಿದ ಕೆಲಸ ನನಗೆ ನೆಮ್ಮದಿ ತಂದಿದೆ ಸಹಕಾರಿ ಸಂಘಗಳಲ್ಲಿ ವೃತ್ತಿ ನೈಪುಣತೆ ಬರಬೇಕು. ಸಹಕಾರಿ ಸಂಘದಲ್ಲಿ ಚುನಾವಣೆಯನ್ನೆ ಪ್ರಾಮುಖ್ಯತೆಯನ್ನಾಗಿ ಮಾಡಿಕೊಳ್ಳಬಾರದು ಸಹಕಾರಿ ಕ್ಷೇತ್ರ ಉಳಿಯಲು ಬೆಳೆಯಲು ಷೇರುದಾರರು, ಜನರು ಜಾಗೃತರಾಗಬೇಕು.ಅಡಿಕೆ ಬೆಳೆ ಬಿದ್ದರೆ ಸಮೂದಾಯದ ಜೀವನ ಬಿದ್ದು ಹೋಗುತ್ತದೆ.ಶಿವಮೊಗ್ಗದಲ್ಲಿ ಅಡಿಕೆ ಮಹಾಮಂಡಳ ರಚನೆ ಮಾಡಿಕೊಂಡಿದ್ದೆವೆ.ಇಂಡೊನೇಶಿಯಾದಿಂದ ಬರುವ ಅಡಿಕೆ ಗುಣ ಮಟ್ಟ ಸರಿಯಾಗಿಲ್ಲ. ಅದನ್ನು ಅಧ್ಯಯನ ಮಾಡಲಾಗಿದೆ. ಅಡಿಕೆ ಬೆಳೆಗಾರರ ಹಿತಕಾಯಲು ಎಲ್ಲಾ ಪ್ರಯತ್ನ ಮಾಡಲಾಗುವುದು ಎಂದು ಅರಗ ಜ್ಞಾನೇಂದ್ರ ಹೇಳಿದರು.
ಕಾರ್ಮಿಕ ಸಚೀವ ಶಿವರಾಮ ಹೆಬ್ಬಾರ ಮಾತನಾಡಿ,
ಸಹಕಾರಿ ಕ್ಷೇತ್ರ ಇದ್ದಲ್ಲಿ ರೈತರಿಗೆ ಅನೂಕೂಲವಾಗಿದೆ. ಹಾವೇರಿಯಲ್ಲಿ ಸಹಕಾರಿ ಕ್ಷೇತ್ರದ ಕೊರತೆಯಿಂದ ರೈತರಿಗೆ ಅನೂಕೂಲವಾಗಿಲ್ಲ. ಸೌಲಭ್ಯ ದೊರೆಯಲಿಲ್ಲ. ರೈತರು ಕಷ್ಟದಲ್ಲಿದ್ದಾರೆ.ರೈತರಿಗೊಸ್ಕರ ಸಹಕಾರಿ ಕ್ಷೇತ್ರ ಬಲಪಡಿಸಬೇಕಿದೆ.ನಮ್ಮ ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರದಲ್ಲಿ ಠೇವಣಿದಾರರ ಅವಶ್ಯಕತೆ ಇಲ್ಲ, ಉತ್ತಮ ಸಾಲಗಾರರ ಅವಶ್ಯವಿದೆ ಎಂದರು.