ಗೋಪೂಜೆಯ ದಿನ ಜೊಯಿಡಾದಲ್ಲಿ ವಿಷ ಆಹಾರ ಸೇವಿಸಿ ಮೂರು ಆಕಳು ಮರಣ ಏಳರ ಸ್ಥಿತಿ ಗಂಭೀರ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ಸಾಂಗ್ವೆಯಲ್ಲಿ ವಿಷಯುಕ್ತ ಅಕ್ಕಿ ಸೇವಿಸಿ ಎರಡು ಎತ್ತು ಹಾಗೂ ಒಂದು ಆಕಳು ಮರಣ ಹೊಂದಿದ್ದು ಸುಮಾರು ಏಳು ಆಕಳುಗಳ ಸ್ಥಿತಿ ಗಂಭೀರವಾಗಿದೆ.
ಮಮತಾ ಮಹಾಬಲೇಶ್ವರ ಗಾಳಕರ ಹಾಗೂ ಭಾರತಿ ವಿಠೋಬಾ ಗಾವಡೆ ಎನ್ನುವವರಿಗೆ ಸೇರಿದ ಆಕಳುಗಳು ಇದಾಗಿದ್ದು
ಈ ಕುರಿತು ಜೊಯಿಡಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪೊಟೋಳಿ ನಿವಾಸಿ ಅನಂತ ನರಸಿಂಹ ಭಾಗವತ ಎನ್ನುವವರು ಅಕ್ಕಿಯಲ್ಲಿ ವಿಷಬೆರೆಸಿ ತನ್ನ ತೋಟದಲ್ಲಿ ಇಟ್ಟಿದ್ದು ಅದನ್ನು ತಿಂದು ಆಕಳು ಮರಣ ಹೊಂದಿವೆ ಸುಮಾರು ಐವತ್ತು ಸಾವಿರರೂ. ನಷ್ಟವಾಗಿದೆ ಎಂದು ಮಮತಾ ಗಾಳಕರ ಪೊಲೀಸ್ ದೂರು ನೀಡಿದ್ದಾರೆ‌.
#########

ಸಿದ್ದಾಪುರದಲ್ಲಿ ಸಂಭ್ರಮದ ಗೋ ಪೂಜೆ: ಚಿನ್ನದ ಸರ ನುಂಗಿದ ಗೋ ಮಾತೆ
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಸಂಭ್ರಮದಿಂದ ಗೋಪೂಜೆ ನಡೆಸಲಾಯಿತು.

ಸಿದ್ದಾಪುರ ತಾಲೂಕಿನ ಭುವನಗಿರಿ ಸಮೀಪದ ಹೊಸಳ್ಳಿಯಲ್ಲಿ ಗೋಪೂಜೆ ಹಾಗೂ ಗೋಕ್ರೀಡೆಯನ್ನು ಶ್ರದ್ಧಾ ಭಕ್ತಿ ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು.
ರೈತರು ತಮ್ಮ ದನಕರುಗಳಿಗೆ ಸ್ನಾನ ಮಾಡಿಸಿ, ಅಲಂಕಾರ ಮಾಡಿ ಕೊಟ್ಟಿಗೆಯಲ್ಲಿ ಪೂಜೆ ಸಲ್ಲಿಸಿದರು. ಗೋ ಗ್ರಾಸ ನೀಡಿದ ನಂತರ ಊರಿನ ಎಲ್ಲಾ ದನಕರುಗಳನ್ನು ಬೆಚ್ಚುವ ಕಟ್ಟೆಯವರಿಗೆ ಕರೆತಂದರು. ನಂತರ ಬೆಚ್ಚುವ ಕಟ್ಟೆಯ ಭೂತಪ್ಪನಿಗೆ ಸುಳಿಗಾಯಿ ಒಡೆದು ಪೂಜೆ ಸಲ್ಲಿಸಲಾಯಿತು. ಅದಾದ ನಂತರ ಗ್ರಾಮದ ಸುತ್ತಲಿನ ಎಲ್ಲಾ ದೇವತೆಗಳಿಗೆ ಹಣ್ಣು ಕಾಯಿ ಸಮರ್ಪಿಸಿದರು.

ಸಿದ್ದಾಪುರ ತಾಲೂಕಿನ ಮುಠ್ಠಳ್ಳಿ ಸಮೀಪದ ಊರತೋಟ ರಾಘವ ರಾಮಪ್ಪ ಹೆಗಡೆ ಅವರ ಮನೆಯಲ್ಲಿ ದೀಪಾವಳಿಯಂದು ಗೋಪೂಜೆ ಮಾಡುವುದಕ್ಕೆ ಗೋವಿನ ಪಾದದ ಸಮೀಪ ಇಟ್ಟ ಚಿನ್ನದ ಸರವನ್ನು ಆಕಳೊಂದು ನುಂಗಿದ ಘಟನೆ ನಡೆದಿದೆ

ಪ್ರತಿವರ್ಷದಂತೆ ದೀಪಾವಳಿಯಂದು ಚಿನ್ನದ ಸರವನ್ನು ಆಕಳಿಗೆ ಕಟ್ಟಿ ಗೋಪೂಜೆ ಮಾಡುತ್ತಿದ್ದ ರಾಘವ ರಾಮಪ್ಪ ಹೆಗಡೆ ಅವರು ಚಿನ್ನದ ಸರವನ್ನು ತಂದು ಆಕಳ ಸಮೀಪ ಇಟ್ಟಿದ್ದರು. ಕ್ಷಣಾರ್ಧದಲ್ಲಿ ಆಕಳು ಚಿನ್ನದ ಸರವನ್ನು ನುಂಗಿದೆ ಎಂದು ರಾಘವ ಹೆಗಡೆ ತಿಳಿಸಿದ್ದಾರೆ.
#####


About the author

Adyot

Leave a Comment