ಬಿಜಾಪುರ ಮಹಾನಗರಪಾಲಿಕೆ ಬಿಜೆಪಿ ತೆಕ್ಕೆಗೆ

ಆದ್ಯೋತ್ ಸುದ್ದಿನಿಧಿ:
ವಿಜಯಪುರ ಮಹಾನಗರಪಾಲಿಕೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತವನ್ನು ಪಡೆದಿದೆ.
ಪಕ್ಷದ ಪ್ರಮುಖನಾಯಕರ ವಿರುದ್ದ ಸತತ ವಾಗ್ದಾಳಿ ನಡೆಸಿಯೂ ಹೈಕಮಾಂಡ್ ನಿಂದ ಯಾವುದೇ ಶಿಸ್ತುಕ್ರಮಕ್ಕೂ ಒಳಪಡದೆ ಇದ್ದ ಬಸವರಾಜ ಪಾಟೀಲ ಯತ್ನಾಳರು ಬಿಜೆಪಿಗೆ ತಾನು
ಅನಿವಾರ್ಯ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ.
ಒಟ್ಟು 35 ವಾರ್ಡ್‌ ಗಳಲ್ಲಿ ಬಿಜೆಪಿ 33 ಕಡೆಗಳಲ್ಲಿ ಸ್ಪರ್ಧೆ ಮಾಡಿ 17 ಸ್ಥಾನಗಳಲ್ಲಿ ಜಯಗಳಿಸಿದೆ. ಬಿಜೆಪಿ ವಿರುದ್ಧ ಬಹುತೇಕ ವಾರ್ಡಗಳಲ್ಲಿ ಬಂಡೆದ್ದು, ಪಕ್ಷೇತರರಾಗಿ ಸ್ಪರ್ಧಿಸಿದ್ದ ಬಿಜೆಪಿ ಟಿಕೆಟ್‌ ವಂಚಿತರು ಕೇವಲ 5 ಸ್ಥಾನಗಳಲ್ಲಿ ಜಯಗಳಿಸಿದ್ದಾರೆ. ಇನ್ನು ಪಾಲಿಕೆಯಲ್ಲಿ ಅಧಿಕಾರ ಸ್ಥಾಪಿಸುವ ಹುಮ್ಮಸ್ಸಿನಿಂದ ಪೀಲ್ಡಿಗಿಳಿದಿದ್ದ ಕಾಂಗ್ರೆಸ್‌ ಕೇವಲ 10 ಸ್ಥಾನಗಳಲ್ಲಿ ಗೆದ್ದು ತೃಪ್ತಿ ಪಟ್ಟುಕೊಂಡಿದೆ. ಇದೇ ಮೊದಲ ಬಾರಿ ವಿಜಯಪುರ ಮಹಾನಗರ ಪಾಲಿಕೆಯಲ್ಲಿ ಸ್ಪರ್ಧೆಗಿಳಿದ ಎಐಎಂಐಎಂ ಪಕ್ಷ 2 ಸ್ಥಾನಗಳಲ್ಲಿ ಗೆದ್ದು ಖಾತೆಯನ್ನು ತೆರೆದಿದೆ‌ ಜೆಡಿಎಸ್‌ ಒಂದೇ ಒಂದು ಸ್ಥಾನದಲ್ಲಿ ಗೆದ್ದು ನಿರಾಸೆ ಅನುಭವಿಸಿದೆ.

ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ಗೆದ್ದವರು
ವಾರ್ಡ್ 01 – ಕಾಂಗ್ರೆಸ್ – ಆಶೀಪ್ ಶಾನವಾಲೆ
ವಾರ್ಡ್ ನಂ 2 – ಪಕ್ಷೇತರ – ಅಲ್ತಾಪ್ ಇಟಗಿ
ವಾರ್ಡ್ ನಂ 3 – ಬಿಜೆಪಿ – ಸುನಿತಾ ಒಡೆಯರ್
ವಾರ್ಡ್ ನಂ 4 – ಜೆಡಿಎಸ್ – ರಾಜು ಚೌಹಾನ್
ವಾರ್ಡ್ ನಂ 5 – ಬಿಜೆಪಿ – ಎಂ ಎಸ್ ಕರಡಿ
ವಾರ್ಡ್ ನಂ 06 – ಬಿಜೆಪಿ -ಮಲ್ಲುಗೌಡ ಪಾಟೀಲ್
ವಾರ್ಡ್ ನಂ 07 – ಬಿಜೆಪಿ – ರಾಹುಲ್ ಜಾಧವ
ವಾರ್ಡ್ ನಂ 08 – ಪಕ್ಷೇತರ – ಅಶೋಕ ನ್ಯಾಮಗೌಡ
ವಾರ್ಡ್ ನಂ 09 – ಬಿಜೆಪಿ – ರಾಜಶೇಖರ್ ಮಗಿಮಠ
ವಾರ್ಡ್ ನಂ 10 – ಬಿಜೆಪಿ – ಸುನಂದ ಕುಮಸಿ
ವಾರ್ಡ್ ನಂ 11 – ಬಿಜೆಪಿ – ವಿಠ್ಠಲ ಹೊಸಪೇಟ್
ವಾರ್ಡ್ ನಂ 12 – ಬಿಜೆಪಿ – ರಶ್ಮಿ ಕೊರಿ
ವಾರ್ಡ್ ನಂ 13 – ಬಿಜೆಪಿ – ದೇವಗಿರಿ ಮೋಹನ್
ವಾರ್ಡ್ ನಂ 14 – ಬಿಜೆಪಿ – ಹನಮಂತ ಗೋಸಾವಿ
ವಾರ್ಡ್ ನಂ 15 – ಬಿಜೆಪಿ – ಸ್ವಪ್ನಾ ನಕಮುಚನಾಳ
ವಾರ್ಡ್ ನಂ 16 – ಕಾಂಗ್ರೆಸ್ – ಅಂಜುಮಾರ್ ಮನಗೂಳಿ
ವಾರ್ಡ್ ನಂ 17 – ಪಕ್ಷೇತರ – ಸುಮಿತ್ರ ಜಾಧವ
ವಾರ್ಡ್ ನಂ 18 – ಕಾಂಗ್ರೆಸ್ – ದಿನೇಶ್ ಹಳ್ಳಿ
ವಾರ್ಡ್ ನಂ 19 – ಪಕ್ಷೇತರ – ನಿಶತ್ ನದಾಫ್
ವಾರ್ಡ್ 20 – ಕಾಂಗ್ರೆಸ್ – ಶಹೀನ್ ಬಾಗಿ
ವಾರ್ಡ್ ನಂ 21 – ಬಿಜೆಪಿ – ಮಲ್ಲಿಕಾರ್ಜುನ ಗದಗಿ
ವಾರ್ಡ್ ನಂ 22 – ಬಿಜೆಪಿ – ಪ್ರೇಮಾನಂದ ಬಿರಾದಾರ್
ವಾರ್ಡ್ ನಂ 23 – ಕಾಂಗ್ರೆಸ್ – ಮಹಮ್ಮದ್ ನಾಡೇವಾಲಾ
ವಾರ್ಡ್ ನಂ 24 – ಪಕ್ಷೇತರ – ವಿಮಲಾ ಖಾನೆ
ವಾರ್ಡ್ ನಂ 25 – AIMIM – ಸುಪೀಯಾ ವಾಟಿ
ವಾರ್ಡ್ ನಂ 26 – ಬಿಜೆಪಿ – ಕಿರಣ ಪಾಟೀಲ್
ವಾರ್ಡ್ ನಂ 27 – ಕಾಂಗ್ರೆಸ್ – ಶಹಿಸ್ತಾ ಜುರೇಶಿ
ವಾರ್ಡ್ ನಂ 28 – AIMIM – ರಿಜ್ವಾನ್ ಬಾನು ಇನಾಮ್‌ದಾರ್
ವಾರ್ಡ್ 29 – ಬಿಜೆಪಿ – ವಿಜಯಕುಮಾರ್ ಬಿರಾದಾರ್
ವಾರ್ಡ್ ನಂ 30 – ಕಾಂಗ್ರೆಸ್ – ಅಪ್ಪು ಪೂಜಾರಿ
ವಾರ್ಡ್ ನಂ 31 – ಕಾಂಗ್ರೆಸ್ – ಸಿದಾರಾ ಬೀಳಗಿ
ವಾರ್ಡ್ ನಂ 32 – ಬಿಜೆಪಿ – ಶಿವರುದ್ರಪ್ಪ ಬಾಗಲಕೋಟ
ವಾರ್ಡ್ ನಂ 33 – ಕಾಂಗ್ರೆಸ್ – ಆರತಿ ಶಹಾಪೂರ
ವಾರ್ಡ್ ನಂ 34 – ಕಾಂಗ್ರೆಸ್ – ಮೆಹಜಬಿನ್ ಹೊರ್ತಿ
ವಾರ್ಡ್ ನಂ 35 – ಬಿಜೆಪಿ – ರಾಜಶೇಖರ್ ಕುರಿವಾರ್
#####

About the author

Adyot

Leave a Comment