ಕಾರವಾರ ಎಸ್.ಪಿ. ಡಾ.ಸುಮನ್ ಪೆನ್ನೆಕರ ವರ್ಗಾವಣೆ ವಿರೋಧಿಸಿ ಅರೆಬೆತ್ತಲೆ ಪ್ರತಿಭಟನೆ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆ ಎಸ್.ಪಿ.ಡಾ.ಸುಮನ್ ಪೆನ್ನೆಕರ ಧಿಡೀರ್ ವರ್ಗಾವಣೆಯಾಗಿದ್ದು ಅವರ ಜಾಗಕ್ಕೆ ವಿಷ್ಣುವರ್ಧನ್ ಬಂದಿದ್ದಾರೆ.

ಕಳೆದ ಒಂದು ವರ್ಷದಿಂದ ಜಿಲ್ಲೆಯ ಅಕ್ರಮ ಚಟುಟಿಕೆಗೆ ಸಾಕಷ್ಟು ಕಡಿವಾಣ ಹಾಕಿದ್ದ ಡಾ.ಸುಮನ್ ಇಲಾಖೆಯಲ್ಲೂ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಿದ್ದರು. ಇದರಿಂದ ಕೆಲವು ರಾಜಕಾರಣಿಗಳಿಗೆ ಕಿರಿಕಿರಿಯಾಗಿತ್ತು. ಕಳೆದ ಮೂರು- ನಾಲ್ಕು ತಿಂಗಳಿಂದ ಅವರ ವರ್ಗಾವಣೆಗೆ ಭಾರಿ ಪ್ರಯತ್ನ ನಡೆದಿತ್ತು.ಜಿಲ್ಲೆಯ ಪ್ರಭಾವಿ ಸಚೀವರು ಡಾ.ಸುಮನ್ ವರ್ಗಾವಣೆಗೆ ಪಟ್ಟು ಹಿಡಿದಿದ್ದರು ಎನ್ನಲಾಗಿದೆ. ಒಟ್ಟಾರೆ ಈಗ ಎಸ್.ಪಿ.ಯವರ ವರ್ಗಾವಣೆಯಾಗಿದೆ.

ಜಿಲ್ಲೆಯ ಜನರಿಗೆ ಇದರಿಂದ ಅಸಮಧಾನವಾಗಿದೆ.ಅಲ್ಲಲ್ಲಿ
ಜನರು ಈ ಕುರಿತು ಚರ್ಚಿಸುತ್ತಿದ್ದಾರೆ‌. ಆದರೆ ಜಿಲ್ಲಾ ವಿದ್ಯಾರ್ಥಿ ಒಕ್ಕೂಟ ಅದರ ಅಧ್ಯಕ್ಷ ರಾಘು ನಾಯ್ಕ ನೇತೃತ್ವದಲ್ಲಿ ಕಾರವಾರದ ಠಾಗೂರು ಕಡಲತೀರದಲ್ಲಿ ಅರೆಬೆತ್ತಲೆಯಾಗಿ ಪ್ರತಿಭಟನೆ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ರಾಘು ನಾಯ್ಕ,
ಜಿಲ್ಲೆಯಲ್ಲಿ ನಡೆಯುತ್ತಿದ್ದ ಅಕ್ರಮಚಟುವಟಿಕೆಯಾದ ಗಾಂಜಾ ಸಾಗಾಟ,ಕೊಳಿಅಂಕ,ಮಟಕಾ,ಸಾರಾಯಿ ಮಾರಾಟವನ್ನು ನಿಯಂತ್ರಣಕ್ಕೆ ತಂದಿದ್ದ ಎಸ್.ಪಿ.ಡಾ.ಸುಮನ್ ಪೆನ್ನೇಕರರ ವರ್ಗಾವಣೆ ಜನಸಾಮಾನ್ಯರಿಗೆ ಆಘಾತವಾಗಿದೆ ಸರಕಾರದ ಈ ಕ್ರಮವನ್ನು ನಾವು ವಿರೋಧಿಸುತ್ತೆವೆ ಕೂಡಲೇ ಸರಕಾರ ವರ್ಗಾವಣೆಯನ್ನು ರದ್ದುಗೊಳಿಸಿ ಅವರನ್ನು ಮುಂದುವರಿಸಬೇಕು ಎಂದು ಆಗ್ರಹಿಸಿದರು

About the author

Adyot

Leave a Comment