ಕುಮಟಾದಲ್ಲಿ ಗ್ರಾಪಂ ನೌಕರರ ಶ್ರೇಯೋಭಿವೃದ್ಧಿ ಸಂಘದ ತಾಲೂಕುಮಟ್ಟದ ಸಮಾಲೋಚನಾ ಸಭೆ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಕುಮಟಾ ಕಲಭಾಗದ ಗ್ರಾಪಂ ಸಭಾಭವನದಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಶ್ರೇಯೋಭಿವೃದ್ಧಿ ಸಂಘದ ಆರ್.ಡಿ.ಪಿ.ಆರ್ ಕುಮಟಾ ತಾಲ್ಲೂಕಾ ಸಮಿತಿಯ ಆಯೋಜನೆಯಲ್ಲಿ
ರಾಜ್ಯಮಟ್ಟದ ಹೋರಾಟದ ಕುರಿತು ತಾಲ್ಲೂಕಾ ಮಟ್ಟದ ಸಮಾಲೋಚನ ಸಭೆ ನಡೆಯಿತು.
ಸಭೆಯನ್ನು ಉದ್ದೇಶಿಸಿ ರಾಜ್ಯಾಧ್ಯಕ್ಷ ಡಾ.ದೇವಿಪ್ರಸಾದ್ ಬೊಲ್ಮ ರ ಮಾತನಾಡಿ,ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿ ನೌಕರರು ಸಂಘಟಿತರಾಗಿ ಒಂದೇ ವೇದಿಕೆಯಡಿ ಸಿ ಮತ್ತು ಡಿ ದರ್ಜೆ ಸ್ಥಾನನಮಾನಕ್ಕಾಗಿ ಹೋರಾಟ ಮಾಡಬೇಕಾಗಿದ್ದು, ಇದು ನೌಕರರು ಮತ್ತು ಅವರನ್ನೇ ನಂಬಿರುವ ಕುಟುಂಬದ ಮುಂದಿನ ಭವಿಷ್ಯದ ಕುರಿತು ಆಲೋಚಿಸಿ ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್ ನೌಕರರು ಸ್ವಯಂ ಪ್ರೇರಿತರಾಗಿ ಭಾಗವಹಿಸಿ, ನೌಕರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಪ್ರಯತ್ನ ಪಡಬೇಕು.ಡಿಸಂಬರ್-12ರಂದು ಬೆಳಗಾವಿಯ ಸುವರ್ಣ ಸೌಧದ ಎದುರು ರಾಜ್ಯದ ಎಲ್ಲಾ ಗ್ರಾಪಂ ನೌಕರರು ಹಾಗೂ ಕುಟುಂಬದವರು ಸೇರಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಈಗಾಗಲೇ ಇದರ ಪೂರ್ವ ತಯಾರಿಗಳು ನಡೆಯುತ್ತಿದ್ದು, ಇದು ನಮ್ಮ ನಿರ್ಣಾಯಕ ಹೋರಾಟವಾಗಿದೆ. ಯಾವುದೇ ಅಡೆತಡೆಗಳು ಬರದಂತೆ, ಯಾವುದೇ ಅಹಿತರಕರ ಘಟನೆಗೂ ಆಸ್ಪದ ನೀಡದಂತೆ ಶಾಂತಿಯುತವಾಗಿ ಹಾಗೂ ನಿರ್ಣಾಯಕವಾಗಿ ಹೋರಾಟ ಮಾಡಬೇಕು ಯಾವುದೇ ಅಂಜಿಕೆ, ಹಿಂಜರಿಕೆ ಅಥವಾ ಯಾವುದೇ ವೈಯಕ್ತಿಕ ಸಮಸ್ಯೆಗಳು, ಭಿನ್ನಾಭಿಪ್ರಾಯಗಳಿದ್ದರೂ ನಾವೆಲ್ಲರೂ ಒಂದು ಎನ್ನುವ ಮನೋಭಾವನೆಯಿಂದ ಗ್ರಾಮ ಪಂಚಾಯತ ನೌಕರರು ಹೋರಾಟದಲ್ಲಿ ಪಾಲ್ಗೊಳ್ಳುವುದರೊಂದಿಗೆ ಇದೊಂದು ಐತಿಹಾಸಿಕ ಹೋರಾಟವಾಗಬೇಕು, ಇದಕ್ಕಾಗಿ ಉತ್ತರ ಕನ್ನಡ ಜಿಲ್ಲೆಯಿಂದ ಕನಿಷ್ಟ 2000 ನೌಕರರು ಪಾಲ್ಗೊಳ್ಳಬೇಕು ಎಂದು ಅವರು ಕರೆನೀಡಿದರು.

ಸಭೆಯಲ್ಲಿ ಭಾಗವಹಿಸಿದ್ದ ರಾಜ್ಯ ಪ್ರಧಾನ ಕಾರ್ಯದರ್ಶಿ ಪದ್ಮನಾಭ ಆರ್ ಕುಲಾಲ್ ನೌಕರರ ಸಮಸ್ಯೆಗಳು, ಪ್ರಸ್ತುತ ನೌಕರರ ಪರಿಸ್ಥಿತಿಗಳು, ನೌಕರರ ಜೀವನ ಮಟ್ಟ, ನೌಕರರಲ್ಲಿರುವ ಹೊಂದಾಣಿಕೆಯ ಕೊರತೆ, ಈ ಬೃಹತ್ ಹೋರಾಟದಲ್ಲಿ ನೌಕರರ ಪಾತ್ರದ ಕುರಿತು ವಿಸ್ತೃತವಾಗಿ ವಿವರಿಸಿ ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿ,ಉತ್ತರ ಕನ್ನಡ ಜಿಲ್ಲೆಯಲ್ಲಿನ ಗ್ರಾಮ ಪಂಚಾಯತ ನೌಕರರ ಸಮಸ್ಯೆಗಳು, ನಮ್ಮ ಜಿಲ್ಲೆಯಲ್ಲೆ ಸೃಷ್ಟಿಯಾಗುತ್ತಿರುವ ಅನೇಕ ಸಮಸ್ಯೆಗಳು ಹಾಗೂ ಅದರ ಪರಿಹಾರಕ್ಕಾಗಿ ನೌಕರರು ಹೋರಾಟ ನಡೆಸಬೇಕಾಗಿದೆ ಎಂದು ಹೇಳಿದರು.
ಉತ್ತರ ಕನ್ನಡ ಜಿಲ್ಲಾ ಸಮಿತಿಯ ಜಿಲ್ಲಾಧ್ಯಕ್ಷ
ಗಂಗಾಧರ ನಾಯ್ಕ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೋಗೇಶ ನಾಯ್ಕ ಉಡುಪಿ ಜಿಲ್ಲೆ ಉಪಾಧ್ಯಕ್ಷ ಹೇಮಚಂದ್ರ ನಂದಳಿಕೆ, ಸದಸ್ಯ ಗಣೇಶ, ಕುಮಟಾ ತಾಲ್ಲೂಕು ಸಮಿತಿಯ ಅಧ್ಯಕ್ಷ ರಾ
ಜೇಶ ಅಂಬಿಗ, ನಿಕಟಪೂರ್ವ ಅಧ್ಯಕ್ಷ ದೀಪಕ ನಾಯ್ಕ, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ, ಶಿರಸಿ, ಅಂಕೋಲಾ, ಹೊನ್ನಾವರ, ಭಟ್ಕಳ ತಾಲೂಕು ಸಮಿತಿಯ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು, ಸಮಿತಿಯ ಪದಾಧಿಕಾರಿಗಳು ಹಾಗೂ ತಾಲ್ಲೂಕಿನ ಗ್ರಾಮ ಪಂಚಾಯತ ನೌಕರರು ಪಾಲ್ಗೊಂಡಿದ್ದರು.
ಗ್ರಾಪಂ ನೌಕರರ ಪ್ರಮುಖ ಬೇಡಿಕೆಗಳು
1. ಗ್ರಾಮ ಪಂಚಾಯತ್ ಯಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ನೌಕರರನ್ನು ಸಿ ಮತ್ತು ಡಿ ದರ್ಜೆ ಸ್ಥಾನಮಾನ ಒದಗಿಸುವುದರ ಜೊತೆಗೆ ಪಟ್ಟಣ ಪಂಚಾಯಿತಿ ಮಾದರಿಯಂತೆ ವೇತನ ಶ್ರೇಣಿ, ESI ಮತ್ತು ಭವಿಷ್ಯ ನಿಧಿ ಸವಲತ್ತನ್ನು ಒದಗಿಸುವುದು.
2. ಸರಕಾರದ ಆದೇಶ ದಿನಾಂಕ 29.09.2020 ರ ಪೂರ್ವದಲ್ಲಿ ಜಿಲ್ಲಾ ಪಂಚಾಯತಿಯಿಂದ ಅನುಮೋದನೆಯಾಗದೆ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ನೌಕರರಿಗೆ ವಿದ್ಯಾರ್ಹತೆ ಮತ್ತು ವಯೋಮಿತಿ ಪರಿಗಣಿಸದೆ ಹಾಗೂ ಹುದ್ದೆಗಳ ಗರಿಷ್ಠ ಮಿತಿ ನಿಗದಿಪಡಿಸದೆ ಅವರ ಸೇವಾ ಜೇಷ್ಠತೆಯನ್ನು ಪರಿಗಣಿಸಿ ಒಂದು ಬಾರಿ ಜಿಲ್ಲಾ ಪಂಚಾಯತಿನಿಂದ ಅನುಮೋದನೆ ನೀಡಬೇಕು
3. ವಿದ್ಯಾರ್ಹತೆ ಮತ್ತು ವಯೋಮಿತಿ ಸಮಸ್ಯೆಯಿಂದ ಜಿಲ್ಲಾ ಪಂಚಾಯತ್ ಅನುಮೋದನೆ ಆಗದೆ ನಿವೃತ್ತಿಯಾಗುವ ಎಲ್ಲಾ ಗ್ರಾಮ ಪಂಚಾಯಿತಿ ನೌಕರರಿಗೆ ನಿವೃತ್ತಿ ಉಪಧನ ಮಂಜೂರು ಮಾಡಬೇಕು.

About the author

Adyot

Leave a Comment