ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದ ಶ್ರೀ ಪ್ರಣವಾನಂದ ಸ್ವಾಮೀಜಿಯವರಿಂದ ಐತಿಹಾಸಿಕ ಪಾದಯಾತ್ರೆ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಕಲಬುರ್ಗಿ ಜಿಲ್ಲೆ,ಚಿತ್ತಾಪುರ ಕರದಾಳ ಗ್ರಾಮದ ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದ ಶ್ರೀ ಪ್ರಣವಾನಂದ ಸ್ವಾಮೀಜಿಯವರು ಸುದ್ದಿಗೋಷ್ಠಿ ನಡೆಸಿದರು.

ಬಿಲ್ಲವ,ಈಡಿಗ,ನಾಮಧಾರಿ ಸಮಾಜದವರು ಹಲವು ತುಳಿತಕ್ಕೆ ಒಳಗಾಗುತ್ತಿದ್ದು ಸಮುದಾಯದ ರಾಜಕಾರಣಿಗಳು ಧ್ವನಿ ಎತ್ತುತ್ತಿಲ್ಲ, ಸಮುದಾಯದ ಸ್ವಾಮೀಜಿಗಳು ಪಾದಪೂಜೆ ಮಾಡಿಸಿಕೊಳ್ಳುವುದರಲ್ಲಿ ನಿರತರಾಗಿದ್ದಾರೆ.ಇದರಿಂದ ನಮ್ಮ ಸಮಾಜದವರನ್ನು ಉಪಯೋಗಿಸಿ ಬೀಸಾಡುವ ಕೆಲಸ ಮಾಡಲಾಗುತ್ತಿದೆ.

ರಾಜ್ಯದಲ್ಲಿ ನಮ್ಮ ಸಮಾಜದವರು 70ಲಕ್ಷ ಜನರಿದ್ದಾರೆ, ದೇಶದ ಬೇರೆ ಬೇರೆ ರಾಜ್ಯದಲ್ಲೂ ನಮ್ಮವರು ಸಾಕಷ್ಟು ಜನರಿದ್ದಾರೆ ದೇಶದ ಜನಸಂಖ್ಯೆಯ ಶೇ15ರಷ್ಟು ಜನರು ನಮ್ಮವರಿದ್ದಾರೆ. ಮಂಗಳೂರು,ಉಡುಪಿ,ಕಾರವಾರ,ಶಿವಮೊಗ್ಗ ಜಿಲ್ಲೆಗಳಲ್ಲಿ ಅತಿ ಹೆಚ್ಚು ಜನರಿದ್ದು ಚುನಾವಣೆಯಲ್ಲಿ ನಮ್ಮ ಜಾತಿಯ ಮತದಾರರು ಹೆಚ್ಚು ಆದರೆ ಎಲ್ಲಾ ರಾಜಕೀಯ ಪಕ್ಷದವರು ನಮ್ಮ ಸಮಾಜವನ್ನು ಉಪಯೋಗಿಸಿಕೊಳ್ಳುತ್ತಾರೆ ಆದರೆ ಸೌಲಭ್ಯಕೊಡುತ್ತಿಲ್ಲ.ನಮ್ಮ ಸಮಾಜದ 7 ಶಾಸಕರಿದ್ದಾರೆ ಇಬ್ಬರು ಸಚೀವರಿದ್ದಾರೆ ಆದರೆ ಇವರಿಂದ ಸಮಾಜಕ್ಕೆ ಯಾವುದೇ ಉಪಯೋಗವಾಗುತ್ತಿಲ್ಲ ಬೇರೆ ಸಮಾಜದ ಶಸಕರು ತಮ್ಮ ಸಮಾಜದ ಪರವಾಗಿ ವಿಧಾನಸಭೆಯಲ್ಲಿ ಧ್ವನಿ ಎತ್ತುತ್ತಿದ್ದಾರೆ ಆದರೆ ನಮ್ಮ ಶಾಸಕರು ಧ್ವನಿ ಎತ್ತುತ್ತಿಲ್ಲ ಸಚೀವ ಶ್ರೀನಿವಾಸ ಪೂಜಾರಿಯವರು ಒಳ್ಳೆಯಮನುಷ್ಯ ಎನಿಸಿಕೊಂಡಿದ್ದಾರೆ ಆದರೆ ಒಂದೇ ಬಾರಿಯೂ ನಮ್ಮ ಸಮಾಜದ ಪರವಾಗಿ ಧ್ವನಿಎತ್ತಿಲ್ಲ. ಬೇರೆ ಸಮುದಾಯದವರು 2ಎ ಮೀಸಲಾತಿಗೆ ಆಗ್ರಹಿಸುತ್ತಿವೆ ಇದರಿಂದ ನಮ್ಮ ಸಮುದಾಯದವರಿಗೆ ಅನ್ಯಾಯವಾಗುತ್ತದೆ ಇದರ ಬಗ್ಗೆ ನಮ್ಮ ಶಾಸಕರ,ಸಚೀವರ ಸ್ಪಷ್ಟ ನಿಲುವನ್ನು ಪ್ರಕಟಿಸಲಿ ಹಾಗೂ ನಾರಾಯಣ ಗುರು ನಿಗಮ ಸ್ಥಾಪನೆ ಬಗ್ಗೆಯೂ ನಿಲುವು ಪ್ರಕಟಿಸಲಿ. ಉ.ಕ.ಜಿಲ್ಲೆಯಲ್ಲಿ ಶಿರಸಿ,ಕುಮಟ,ಭಟ್ಕಳ ಕ್ಷೇತ್ರದಲ್ಲಿ ನಮ್ಮ ಸಮುದಾಯದ ಹೆಚ್ಚಿನ ಮತಗಳಿವೆ ಆದರೆ ಇಲ್ಲಿಯ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ,ಕುಮಟಾ ಶಾಸಕ ದಿನಕರ ಶೆಟ್ಟಿಯವರು ನಮ್ಮ ಸಮಾಜದ ಯಾವ ಮುಖಂಡರನ್ನೂ ಬೆಳೆಸಲಿಲ್ಲ ನಮ್ಮವರನ್ನು ತುಳಿಯಲು ಪ್ರಯತ್ನಿಸುತ್ತಾರೆ ಎಂದು ಶ್ರೀ ಪ್ರಣವಾನಂದ ಸ್ವಾಮೀಜಿ
ಆರೋಪಿಸಿದರು.

ರಾಜ್ಯದಲ್ಲಿ ಬೇರೆ ಬೇರೆ ಸಮುದಾಯದವರು ಮೀಸಲಾತಿಗಾಗಿ ಹೋರಾಟ ನಡೆಸುತ್ತಿದ್ದಾರೆ ನಮ್ಮ ಸಮುದಾಯದವರು ಶೈಕ್ಷಣಿಕವಾಗಿ,ಆರ್ಥಿಕವಾಗಿ ಹಿಂದುಳಿದವರಾಗಿದ್ದಾರೆ. ಆದ್ದರಿಂದ ನಮ್ಮ ಸಮುದಾಯವನ್ನು ಎಸ್.ಟಿ. ಪಗಡಕ್ಕೆ ಸೇರಿಸಬೇಕು, ನಮ್ಮ ಕುಲಕಸುಬಾದ ಶೇಂದಿಯನ್ನು ನಿಷೇಧಿಸಲಾಗಿದೆ ಆದರೆ ಶೇಂದಿ ಅಮಲು ಪದಾರ್ಥವಲ್ಲ ಅದು ಕೃಷಿಗೆ ಪೂರಕವಾದ ಉದ್ಯೋಗ ಅದನ್ನು ಮಾರಲು ಅನುವು ಮಾಡಿಕೊಡಬೇಕು.ರಾಜಕೀಯ ಪ್ರಾತಿನಿಧ್ಯ ಕೊಡಬೆಕು ನಾರಾಯಣಗುರು ನಿಗಮ ಸ್ಥಾಪಿಸಿ500ಕೋಟಿರೂ. ಮಿಸಲಿಡಬೇಕು ಹೀಗೆ ನಮ್ಮ ಸಮುದಾಯದ ಹಲವು ಬೇಡಿಕೆಗಳ ಈಡೇರಿಕೆಗಾಗಿ ಜನವರಿ-6 ರಿಂದ ಮಂಗಳೂರಿನಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸಲಾಗುತ್ತಿದೆ ಎಂದು ಸ್ವಾಮೀಜಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಮಾಜದ ವೀರಭದ್ರ ನಾಯ್ಕ,ಗಾಂಧೀಜಿ ನಾಯ್ಕ,ಬಾಲಕೃಷ್ಣ ನಾಯ್ಕ,ಲಕ್ಷ್ಮಣ ನಾಯ್ಕ ಮುಂತಾಧವರು ಉಪಸ್ಥಿತರಿದ್ದರು.

ಪಾದಯಾತ್ರೆ ರಾಜಕೀಯ ಉದ್ದೇಶದ್ದಲ್ಲ ಸಮಾಜವನ್ನು ಜಾಗೃತಿಗೊಳಿಸಿ ನ್ಯಾಯಕೊಡಿಸುವ ಉದ್ದೇಶ. ಜ.6ರಂದು ಮಂಗಳೂರಿನಲ್ಲಿ ಕುದ್ರೋಳಿಯಿಂದ ಐತಿಹಾಸಿಕ ಪಾದಯಾತ್ರೆ ಪ್ರಾರಂಭವಾಗಲಿದೆ ಉಡುಪಿ,ಕುಂದಾಪುರ,ಹೊಸನಗರ,ಸಾಗರ,ಸೊರಬಾ,ಶಿಕಾರಿಪುರ,ಶಿವಮೊಗ್ಗ,ಚಿತ್ರದುರ್ಗ ಮಾರ್ಗವಾಗಿ ಬೆಂಗಳುರು ಸೇರಲಿದೆ ಫೆ14 ರಿಂದ ಆಮರಣ ಉಪವಾಸ ಸತ್ಯಾಗ್ರಹ ನಡೆಸಲಿದ್ದೆನೆ. ನನ್ನ ದೇಹತ್ಯಾಗವಾದರೂ ಸರಿ ಸಮಾಜಕ್ಕೆ ನ್ಯಾಯಕೊಡಿಸುತ್ತೇನೆ ಎಂದು ಶ್ರೀಪ್ರಣವಾನಂದ ಸ್ವಾಮೀಜಿ ಹೇಳಿದರು.

About the author

Adyot

Leave a Comment