ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಶಿರಸಿ ಪತ್ರಿಕಾ ಭವನದಲ್ಲಿ ಆಮ್ ಆದ್ಮಿ ಪಕ್ಷದ ಪ್ರಚಾರ ಸಮಿತಿಯ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಪತ್ರಿಕಾಗೋಷ್ಠಿ ನಡೆಸಿದರು
ದೇಶದಲ್ಲಿ ಕಾಂಗ್ರೆಸ್ ಪಕ್ಷವು ಹೀನಾಯಸ್ಥಿತಿಯಲ್ಲಿದ್ದು ಬರಲಿರುವ ಚುನಾವಣೆಯಲ್ಲಿ ನಮ್ಮ ಎದುರಾಳಿ ಬಿಜೆಪಿಯಾಗಿದೆ.ದೆಹಲಿ ಹಾಗೂ ಪಂಜಾಬ್ನಲ್ಲಿ ಆಮ್ ಆದ್ಮಿ ಪಾರ್ಟಿ ಸರ್ಕಾರಗಳು ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿವೆ. ಪಕ್ಷವು ಸ್ವಚ್ಛ ರಾಜಕೀಯ ಹಾಗೂ ಪ್ರಾಮಾಣಿಕ ಆಡಳಿತ ನೀಡುತ್ತಿದೆ. ಇದನ್ನು ಕರ್ನಾಟಕದ ಜನತೆಗೆ ತಿಳಿಸಿ, ಇಲ್ಲಿ ಕೂಡ ಎಎಪಿಯನ್ನು ಅಧಿಕಾರಕ್ಕೆ ತರಬೇಕಿದೆ. ಈ ನಿಟ್ಟಿನಲ್ಲಿ ಜನಸಂಪರ್ಕ ಹಾಗೂ ಪ್ರಚಾರ ಸಮಿತಿಯು ಶ್ರಮಿಸಲಿದೆ.ರಾಜ್ಯದಲ್ಲಿ 60-70 ವರ್ಷದಿಂದ ಆಡಳಿತ ಮಾಡಿದ ಕಾಂಗ್ರೆಸ್ ಒಂದು ಕಡೆಯಾದರೆ ಕಳೆದ 10 ವರ್ಷಗಳಿಂದ ಆಡಳಿತ ಮಾಡುವ ಬಿಜೆಪಿ ರಾಷ್ಟ್ರೀಯ ಪಕ್ಷಗಳ ಹಾಗೂ ಇತರೆ ಪ್ರಾದೇಶಿಕ ಪಕ್ಷಗಳ ನಡುವೆ ಆಮ್ ಆದ್ಮಿ ಪಕ್ಷ ದೆಹಲಿಯಲ್ಲಿ ಈಗಾಗಲೇ ಅಧಿಕಾರದಲ್ಲಿದೆ ಈ ಬಾರಿ ಪಂಜಾಬ್ ಚುಣಾವಣೆಯಲ್ಲಿಯೂ ಸಹ ನಮ್ಮ ಪಕ್ಷ ಜಯಬೇರಿ ಭಾರಿಸಿದೆ. ಗುಜರಾತ್ ನಲ್ಲಿ ಖಾತೆ ತೆರೆದಿದ್ದೇವೆ. ಅದ್ದರಿಂದ ನಮ್ಮ ಪಕ್ಷವೂ ಸಹ ರಾಷ್ಟ್ರೀಯ ಪಕ್ಷವಾಗಿದೆ. ಗುಜರಾತ್ ನಲ್ಲಿ ಪ್ರಧಾನಿಗಳು, ಹಾಗೂ ಅಮಿತ್ ಶಾ ಘಟಾನುಘಟಿಗಳ ಗುಜರಾತನಲ್ಲಿ ಎರಡು ತಿಂಗಳು ಪ್ರಚಾರಮಾಡಿದರೂ ಸಹ ಆಮ್ ಆದ್ಮಿ ಪಕ್ಷ ಬಿಜೆಪಿಗೆ ಸೆಡ್ಡು ಹೊಡೆದು ಖಾತೆ ತೆರೆದಿದ್ದೇವೆ ಎಂದು ಹೇಳಿದರು.

ನಾವು ಸುಳ್ಳು ಭರವಸೆಗಳನ್ನು ನೀಡುವುದಿಲ್ಲ. ಹಾಗೂ ಪ್ರಣಾಳಿಕೆಯನ್ನು ನಾವು ಬಿಡುಗಡೆ ಮಾಡುವುದಿಲ್ಲ. ದೇಶದಲ್ಲಿ ಬ್ರಷ್ಟಾಚಾರ ತಾಂಡವಾಡುತ್ತದೆ. 10 ರಿಂದ 40 ಪರ್ಸೆಂಟ್ ಕಮಿಷನ್ ಎಂದು ಎರಡೂ ಪಕ್ಷದವರೂ ಸಹ ಒಬ್ಬರ ಮೇಲೆ ಒಬ್ಬರು ಗೂಬೆ ಕೂರಿಸುತ್ತಿದ್ದಾರೆ. ದೆಹಲಿಯಲ್ಲಿ 1 ರಿಂದ 12 ತರಗತಿಯವರೆಗೆ ಉಚಿತ ಶಿಕ್ಷಣ ಕೊಡುತ್ತಿದ್ದೇವೆ. 120 ಟೆಸ್ಟ್ ಗಳನ್ನು ಆಸ್ಪತ್ರೆಗಳಲ್ಲಿ ಉಚಿತವಾಗಿ ಮಾಡಲಾಗುತ್ತದೆ. ಶಾಲೆಯಲ್ಲಿ ಶಿಕ್ಷಕರಿಗೆ ವಿದೇಶದವರಿಂದ ತರಬೇತಿ ಕೊಡಲಾಗಿತ್ತಿದೆ. 200 ಯುನಿಟ್ ವಿದ್ಯುತ್ ಉಚಿತ ಕೊಡುತ್ತಿದ್ದೇವೆ. ಹೆಣ್ಣು ಮಕ್ಕಳಿಗೆ ಉಚಿತವಾಗಿ ಬಸ್ ಪ್ರಯಾಣ ವ್ಯವಸ್ಥೆ ಮಾಡುತ್ತಿದ್ದೇವೆ.ಬಿಜೆಪಿ ಸರಕಾರ 10 ಲಕ್ಚ ಕೋಟಿ ರೂ.ಅಂಬಾನಿ, ಮಲ್ಯ ರವರ ಸಾಲ ವೇವ್ ಅಪ್ ಮಾಡಿದ್ದಾರೆ. ನಾವು ರೈತರಿಗೆ ಕಡುಬಡವರಿಗೆ ಉಚಿತವಾಗಿ ವಿದ್ಯುತ್, ಆರೋಗ್ಯ ಶಿಕ್ಷಣ, ನೀಡುತ್ತಿದ್ದೆವೆ ಇದು ತಪ್ಪಾ? ಎಂದು ಚಂದ್ರು ಪ್ರಶ್ನಿಸಿದರು.

ಗಡಿವಿವಾದ ಇತ್ಯರ್ಥವಾಗಬೇಕಾದರೆ ಮಹಾಜನ್ ವರದಿ ಜಾರಿಯಾಗಬೇಕು ಕೇಂದ್ರ ಹಾಗೂ ರಾಜ್ಯದಲ್ಲಿ ಪಕ್ಕದ ಗೋವಾ ಮಹಾರಾಷ್ಟ್ರಗಳಲ್ಲಿ ಸಹ ಬಿಜೆಪಿ ನೇತೃತ್ವದ ಆಡಳಿತವಿದ್ದು ಅವರು ಇಚ್ಚಾ ಶಕ್ತಿ ತೋರಿದಲ್ಲಿ ಈ ಗಡಿ ವಿವಾದವನ್ನು ಎಂದೋ ಬಗೆಹರಿಸಬಹುದಿತ್ತು.ರಾಜಕೀಯ ಉದ್ದೇಶದಿಂದ ಗಡಿ ವಿವಾದವನ್ನು ಮಹಾರಾಷ್ಟ್ರ ಹಾಗೂ ಕರ್ನಾಟಕ ಸರ್ಕಾರಗಳು ಜೀವಂತವಾಗಿ ಇರಿಸಿಕೊಂಡಿವೆ. ಯಾವುದೇ ಪರಿಸ್ಥಿತಿಯಲ್ಲೂ ಕರ್ನಾಟಕದ ಯಾವುದೇ ಭಾಗವನ್ನು ಮಹಾರಾಷ್ಟ್ರ ಗರಿಗೆ ಬಿಟ್ಟುಕೊಡಲು ನಾವು ಸಿದ್ಧರಿಲ್ಲ ಹೋರಾಟ ಮಾಡಲೇಬೇಕಾದ ಅನಿವಾರ್ಯತೆ ಎದುರದಲ್ಲಿ ಕತ್ತಿ ಗುರಾಣಿ ಹಿಡಿದು ನಾವು ಸಹ ಹೋರಾಟಕ್ಕೆ ಸಿದ್ಧ ಎಂದು ಹೇಳಿದ ಮುಖ್ಯಮಂತ್ರಿ ಚಂದ್ರು,ಎಎಪಿ ಪಕ್ಷಕ್ಕೆ ಸೇರುವಾಗಲೇ ನಾನು ಚುನಾವಣಾ ರಾಜಕಿಯದಿಂದದೂರ ಇರುತ್ತೇನೆ ಎಂದು ಹೇಳಿದ್ದೆ. ಚುಣಾವಣೆಗೆ ಸ್ಪರ್ದಿಸುವುದಿಲ್ಲ. ಅದ್ದರಿಂದಲೇ ಪಕ್ಷವು ನನಗೆ ಪ್ರಚಾರ ಸಮೀತಿ ಅದ್ಯಕ್ಷನನ್ನಾಗಿ ಮಾಡಿದೆ ರಾಜ್ಯಾದ್ಯಂತ ಸಂಚರಿಸಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದು ಹೇಳಿದರು.
