ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಮಗೆಗಾರಿನ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಸುಷಿರ ಸಂಗೀತ ಪರಿವಾರ ಭುವನಗಿರಿ,ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಬೆಂಗಳೂರು ಇವರ ಸಹಯೋಗದೊಂದಿಗೆ ಸಂಗೀತ ಸಂಧ್ಯಾ ಕಾರ್ಯಕ್ರಮ ನಡೆಯಿತು
ಕಾರ್ಯಕ್ರಮವನ್ನು ಉದ್ಘಾಟಿಸಿದ ಖ್ಯಾತ ಯಕ್ಷಗಾನ ಅರ್ಥಧಾರಿ ಜಯರಾಮ ಭಟ್ಟ ಮಾತನಾಡಿ,ಸಂಗೀತ ಮನಸ್ಸಿಗೆ ಮುದ ನೀಡುತ್ತದೆ.ಸಂಗೀತ ನಮ್ಮ ಸಮಾಜದ ಅವಿಭಾಜ್ಯದ ಅಂಗವಾಗಿದೆ ಇಂಥ ಕಾರ್ಯಕ್ರಮಗಳಿಂದ ಸಮಾಜದಲ್ಲಿ ಸಂಸ್ಕಾರ ಬೆಳೆಯುತ್ತದೆ ಎಂದರು.
ಎಂ.ಎಂ. ಹೆಗಡೆ ಮಾತನಾಡಿ, ಇಂಥ ಕಾರ್ಯಕ್ರಮಗಳಿಂದ ಜನರನ್ನು ಮೊಬೈಲ್ ಮತ್ತು ಟಿವಿಯಿಂದ ಹೊರತರಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷ ದೇವಸ್ಥಾನ ಅಧ್ಯಕ್ಷ ಎನ್.ಎನ್.ಹೆಗಡೆ ಇಂಥ ಕಾರ್ಯಕ್ರಮಗ ಸಂಘಟಿಸಿ ಕಲೆಯನ್ನು ಉಳಿಸುವ ಜೊತೆಗೆ ಕಲಾವಿದರನ್ನು ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿರುತ್ತದೆ ಎಂದರು.
ನಂತರ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಮೊದಲಿಗೆ ರಾಜೇಶ್ವರಿ ಭಟ್ಟ ಡೊಂಬೆಕೈ ಮತ್ತು ಶ್ರೀನಿಧಿ ಭಟ್ಟ ಭಕ್ತಿ ಸಂಗೀತವನ್ನು ಪ್ರಸ್ತುತ ಪಡಿಸಿದರು ನಂತರ ಸುಧೀರ್ ಬೇಂಗ್ರೆಯವರು ಲಘು ಶಾಸ್ತ್ರೀಯ ಗಾಯನ ಹಾಡಿ ಪ್ರೇಕ್ಷಕರನ್ನು ರಂಜಿಸಿದರು.ಕಾರ್ಯಕ್ರಮದ ಕೊನೆಯಲ್ಲಿ ರಾಂಜೇಂದ್ರ ಹೆಗಡೆಯವರು ಶಾಸ್ತ್ರೀಯ ಹಾಗೂ ನಾಟ್ಯ ಸಂಗೀತ ಪ್ರಸ್ತುತಪಡಿಸಿದರು.
ಜಯರಾಂ ಭಟ್ಟ ಹೆಗ್ಗಾರಳ್ಳಿ ಹಾರ್ಮೋನಿಯಂನಲ್ಲಿ ಮತ್ತು ಮಂಜುನಾಥ ಹೆಗಡೆ ಮೋಟಿನಸರ ತಬಲಾದಲ್ಲೂ ಸಹಕರಿಸಿದರು.ಬಾಲಚಂದ್ರ ಹೆಗಡೆ ಮಗೆಗಾರ ಸ್ವಾಗತಿಸಿದರು,
ಸಂಚಾಲಕ ನಾರಾಯಣ ಕಲ್ಲಾರೆಮನೆ ನಿರ್ವಹಿಸಿದರು.