ಆದ್ಯೋತ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹೆಗ್ಗೋಡು ಮನೆ ಬಾಳೆಕುಳಿಯಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಶ್ರೀ ವೀರಶೈವ ಕ್ಷೇಮಾಭಿವೃದ್ಧಿ ಸಂಸ್ಥೆ ಸಿದ್ದಾಪುರ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಬೆಂಗಳೂರು ಸಿದ್ದಾಪುರ ತಾಲೂಕು ಘಟಕ ಹಾಗೂ ವೀರಶೈವ ಸಮಾಜ ಬಾಂಧವರು ಸನ್ಮಾನಿಸಿ,ಗೌರವಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ವೀರಶೈವ ಕ್ಷೇಮಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಪರಮೇಶ್ವರಯ್ಯ ಕಾನಳ್ಳಿ ಮಠ ಹಾಗೂ ಎಮ್ ಎಸ್ ಗೌಡರ್ ವಕೀಲರು ಸಾಗರ ಹಾಗೂ ಆರ್ ಎಂ ಪಾಟೀಲ್ ಅಡಿಕೆ ವರ್ತಕರು ಸಿದ್ದಾಪುರ ಉಪಸ್ಥಿತರಿದ್ದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ವಿಶ್ವೇಶ್ವರ ಹೆಗಡೆ ಕಾಗೇರಿ, ನಮ್ಮ ಕ್ಷೇತ್ರದಲ್ಲಿ ಅವಿರತ ಪ್ರಯತ್ನದಿಂದ ಪ್ರತಿಯೊಂದು ಗ್ರಾಮಗಳಿಗೂ ಅತಿ ಹೆಚ್ಚಿನ ಅನುದಾನವನ್ನು ನೀಡಿ ಜನಪರ ಕಾರ್ಯಕ್ರಮಗಳನ್ನು ಮಾಡುತಿದ್ದೇವೆ. ತಾಲೂಕಿಗೆ ಅವಶ್ಯಕತೆ ಇದ್ದ ಇಲಾಖೆಗಳ ಕಟ್ಟಡಗಳು ಹಾಗೂ ಶಾಲಾ ಕಾಲೇಜುಗಳನ್ನು ಹೆಚ್ಚಿಸಲಾಗಿದೆ. ಆದರೂ ಕೂಡ ರಸ್ತೆಗಳ ಬಗ್ಗೆ ಜನತೆಯ ಕೋರಿಕೆ ಇದೆ ಈ ನಿಟ್ಟಿನಲ್ಲಿ ನಾವು ಪ್ರಯತ್ನಿಸುತ್ತೇವೆ ಎಂಬ ಭರವಸೆಯನ್ನು ನೀಡಿದರು. ಹಾಗೆಯೇ ವೀರಶೈವ ಸಮಾಜದ ಕೋರಿಕೆಯಂತೆ ಶ್ರೀ ಬಸವೇಶ್ವರ ದೇವಸ್ಥಾನಕ್ಕೆ ಅನುದಾನವನ್ನು ಬಿಡುಗಡೆ ಮಾಡುವಲ್ಲಿ ಪ್ರಯತ್ನಿಸುತ್ತೇವೆ ಎಂಬ ಆಶ್ವಾಸನೆಯನ್ನು ನೀಡಿದರು.
ಕಾರ್ಯಕ್ರಮವನ್ನು ಆಯೋಜಿಸಿರುವ ಸುಧೀರ್ ಗೌಡರ ಯಾವಾಗಲೂ ಪಾದರಸದಂತೆ ಇದ್ದು ಸದಾಕಾಲ ಜನಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ ಸಮಾಜಕ್ಕೆ ಅವರ ಕೊಡುಗೆ ತುಂಬಾ ಇದೆ ಅವರನ್ನು ಈ ಮೂಲಕ ಅಭಿನಂದಿಸುತ್ತೇನೆ.ಹೆಗ್ಗೋಡ್ಮನೆ ಕುಟುಂಬ ತಾಲೂಕಿನ ಪ್ರತಿಷ್ಠಿತ ಕುಟುಂಬವಾಗಿದ್ದು ಧಾರ್ಮಿಕ,ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡ ಕುಟುಂಬವಾಗಿದೆ ಎಂದು ಹೇಳಿದರು.
ಸಮಾಜದ ಅಧ್ಯಕ್ಷ ಪರಮೇಶ್ವರಿಯ ಕಾನಳಿ ಮಠ ಮಾತನಾಡಿ ವಿಶ್ವೇಶ್ವರ ಹೆಗಡೆ ಕಾಗೇರಿ ನಮ್ಮ ನಾಡಿನ ಧೀಮಂತ ನಾಯಕರಾಗಿದ್ದು ನಾಡಿಗೆ ದೊರಕಿದ ಅವರ ಸೇವೆಯನ್ನು ಕೊಂಡಾಡಿದರು. ಹಾಗೂ ಅವರು ಭಾರತ ವಿಶ್ವಗುರುವಾಗುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸಲೆಂದು ಆಶಿಸಿದರು.
ಅಧ್ಯಕ್ಷತೆ ವಹಿಸಿದ್ದ ಎಂ ಎಸ್ ಗೌಡ ಮಾತನಾಡಿ, ವಿಶ್ವೇಶ್ವರ ಹೆಗಡೆ ನಮ್ಮ ತಾಲೂಕಿನ ಶಕ್ತಿಯಾಗಿದ್ದು ಅವರು ತಮ್ಮ ಕಾರ್ಯವನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ ರೈತರ ಪರ ಕಾಳಜಿಗೆ ನಾವು ಹೆಮ್ಮೆಪಡುತ್ತಿದ್ದೇವೆ ಹಾಗೂ ಸಭಾಧ್ಯಕ್ಷರಾಗಿ ಅವರ ಕಾರ್ಯಗಳನ್ನುಮೆಚ್ಚುಗೆ ವ್ಯಕ್ತಪಡಿಸಿದರು.
ಆರ್ ಎಂ ಪಾಟೀಲ್ ಮಾತನಾಡಿ, ವಿಶ್ವೇಶ್ವರ ಹೆಗಡೆ ಕಾಗೇರಿ ನಮ್ಮ ರಾಜ್ಯದ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಬೇಕೆಂಬ ಆಶಯವನ್ನು ವ್ಯಕ್ತಪಡಿಸಿದರು.
ಸಿಎಸ್ ಗೌಡರ್ ಸ್ವಾಗತಿಸಿದರು ಹಾಗೂ ಸುಧೀರ್ ಗೌಡರ್ ವಂದಿಸಿದರು.
ತಾಪಂ ಮಾಜಿ ಅಧ್ಯಕ್ಷ ಸುಧೀರ್ ಗೌಡರ್ ಕಾರ್ಯಕ್ರಮವನ್ನು ಆಯೋಜಿಸಿದ್ದರು.